ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್

ಸ್ಟಾಕ್‌ಹೋಮ್: ಪ್ರೆಸ್‌ ಮೀಟ್‌ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ವೇದಿಕೆಯಲ್ಲೆ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್‌ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ. ಸುದ್ದಿಗೋಷ್ಠಿಯಲ್ಲಿ 48 ವರ್ಷದ ಎಲಿಸಬೆಟ್ ಲ್ಯಾನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗ ವೇದಿಕೆಯಿಂದ ಗಾಜಿನ ಪೋಡಿಯಂ ಸಮೇತ ಕುಸಿದುಬಿದ್ದಿದ್ದಾರೆ. 16 ಸೆಕೆಂಡುಗಳ ವಿಡಿಯೋ ವೈರಲ್‌ಎಲಿಸಬೆಟ್ ಲ್ಯಾನ್ […]

Continue Reading

ಹಿಂದೂಗಳ ತಾಳ್ಮೆ ಕೆಣಕುತ್ತಿರುವ ಸರ್ಕಾರ: ವೀರಣ್ಣ ಯಾರಿ

ವಾಡಿ: ಸೆ.7 ರಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟದ ವೇಳೆ ಬೀದಿ ದೀಪಗಳನ್ನು ಆಫ್ ಮಾಡಿದ್ದು, ಇದು ಪೂರ್ವ ಯೋಜಿತ ಕೃತ್ಯವಾಗಿದೆ. ಇದರಲ್ಲಿ ಭಾಗಿಯಾದ ಸಮಾಜಘಾತುಕರಿಗೆ ಕಠಿಣ ಶಿಕ್ಷಗೆ ಗುರಿಪಡಿಸಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಗ್ರಹಿಸಿದರು.‌ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಮತ್ತು ಮೆರವಣಿಗೆಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿ ಬಿಟ್ಟಿವೆ, ಇವುಗಳಿಗೆ ಮಟ್ಟಹಾಕುವುದು ಬಿಟ್ಟು, ಅನ್ಯಾಯದ ವಿರುದ್ಧ ಹೋರಾಡಿದರೆ ಲಾಠಿ ಚಾರ್ಜ್ ಮಾಡುತ್ತಾ […]

Continue Reading

ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆ

ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿಂದು ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಿದ್ದು, ನೂತನ ಉಪರಾಷ್ಟ್ರಪತಿ ಸಿ.ಪಿ ರಾಧಕೃಷ್ಣನ್ ಆಯ್ಕೆಯಾಗಿದ್ದಾರೆ. ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್‌ ಗೆಲುವು ಸಾಧಿಸಿದರು. ರಾಧಾಕೃಷ್ಣನ್‌ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದು ಪರಾಭವಗೊಂಡರು. ಉಪರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ಗಂಟೆ ಸಂಜೆ 5 […]

Continue Reading

5ನೇ ತರಗತಿ ವಿದ್ಯಾರ್ಥಿಯ ಕಣ್ಣುಗುಡ್ಡೆ ಕಿತ್ತ 1ನೇ ತರಗತಿ ವಿದ್ಯಾರ್ಥಿ

ಬಾಗಲಕೋಟೆ: ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿ ಕಣ್ಣುಗುಡ್ಡೆ ಕಳೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ. ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ 1ನೇ ಕ್ಲಾಸ್ ಓದುತ್ತಿರುವ ಭೀಮಪ್ಪ ಮತ್ತು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮರ್ಥ ನಡುವೆ ಪೆನ್ನಿನ ವಿಚಾರಕ್ಕೆ ಗಲಾಟೆಯಾಗಿದ್ದು, ಈ ವೇಳೆ ಭೀಮಪ್ಪ ಕಟ್ಟಿಗೆಯಿಂದ ಸಮರ್ಥನ ಬಲಗಣ್ಣಿಗೆ ಇರಿದಿದ್ದಾನೆ. ಇದರಿಂದ ತೀವ್ರ ಗಾಯಗೊಂಡಿರುವ ಸಮರ್ಥನಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ವೈದ್ಯರು ಕಣ್ಣುಗುಡ್ಡೆಯನ್ನೆ ತೆಗೆದಿದ್ದಾರೆ. […]

Continue Reading

ಚಿಕ್ಕಮಗಳೂರಿನ 10 ಸಾವಿರ ಎಕರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಡ್ರಿಲ್ಲಿಂಗ್ ಗಾಗಿ ಕೇಂದ್ರ ಸರ್ಕಾರದ ಮೊರೆ ಹೋದ ಬೆಂಗಳೂರು ಕಂಪನಿ

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ವ್ಯಾಪ್ತಿಗೆ ಬರುವ ಅರಣ್ಯ ಪ್ರದೇಶದ ಸುಮಾರು 10,100 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈ ಕುರಿತಂತೆ ಬೆಂಗಳೂರಿನ ಖಾಸಗಿ ಕಂಪನಿಯೊಂದು ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ತಾನು ಗುರುತಿಸಿರುವ ಪ್ರದೇಶದಲ್ಲಿ ಚಿನ್ನವಿರುವುದು ದೃಢಪಟ್ಟಿದೆ. ಆದರೆ ಆ ಪ್ರದೇಶದ ಒಂದು ಟನ್ ಮಣ್ಣಿನಲ್ಲಿ ಎಷ್ಟು ಗ್ರಾಂ ಚಿನ್ನ ಬರಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಅಲ್ಲಿ ಕೆಲವು ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯಿದೆ. ಅದಕ್ಕಾಗಿ ಆ 10,100 […]

Continue Reading

ಸ್ವಾವಲಂಬನೆ, ಘನತೆಯ ಬದುಕಿಗೆ ಸಾಕ್ಷರತೆ ಅಗತ್ಯ

ಕಲಬುರಗಿ: ಸಾಕ್ಷರತೆಯು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಅಂಶವಾಗಿದೆ, ವ್ಯಕ್ತಿಯನ್ನು ಸಮಾಜದಲ್ಲಿ ಘನತೆ ಹಾಗೂ ಸ್ವಾವಲಂಬನೆಯಿಂದ ಬದಕಲು ಸಹಾಯ ಮಾಡುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ್ ಹೇಳಿದರು.  ನಗರದ ಆಳಂದ ರಸ್ತೆಯ ಶಿವ ನಗರದ ಮಲ್ಲಿನಾಥ ಮಹಾರಾಜ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ಜರುಗಿದ “ಅಂತಾರಾಷ್ಟ್ರೀಯ ಸಾಕ್ಷರತಾ […]

Continue Reading

ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ತೇಜಸ್ವಿ

ಕಲಬುರಗಿ: ಪರಿಸರ ಹಾಗೂ ವೈಚಾರಿಕತೆ ಪರ ಬರಹಗಳ ಮೂಲಕ ಅಸಂಖ್ಯಾತ ವ್ಯಕ್ತಿಗಳನ್ನು ಪ್ರಭಾವಿಸಿದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರು, ನಾಡು-ನುಡಿ ಏಳಿಗೆಗೆ ತಮ್ಮದೆಯಾದ ವಿಶಿಷ್ಟ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಮೇರು ಸಾಹಿತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು. ಶಹಾಬಾದ ತಾಲೂಕಿನ ಭಂಕೂರ್ ಗ್ರಾಮದ ಗಣೇಶ್ ನಗರದಲ್ಲಿನ ಕೋರಿಸಿದ್ದೇಶ್ವರ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಾಯಂಕಾಲ ಜರುಗಿದ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ 87ನೇ ಜನ್ಮದಿನಾಚರಣೆ’ಯಲ್ಲಿ […]

Continue Reading

ಕಾಲೇಜಿನ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಗೊಂದಲ ಪರಿಹರಿಸಲು ಪ್ರತಿಭಟನೆ

ಚಿತ್ತಾಪುರ: ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಬಗೆಹರಿಸಬೇಕು ಮತ್ತು ಅತಿಥಿ ಉಪನ್ಯಾಸಕರ ನೇಮಕ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತಹಸೀಲ್ ಕಚೇರಿಯವರೆಗೆ ಎಐಡಿಎಸ್ಓ ತಾಲೂಕು ಪದಾಧಿಕಾರಿಗಳ ನೇತೃತ್ವದದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಸಮಿತಿ ಸದಸ್ಯ ದೇವರಾಜು ಎಸ್ ರಾಜೋಳ್ ಮಾತನಾಡಿ, ರಾಜ್ಯದಾದ್ಯಂತ ಪದವಿ […]

Continue Reading

ಬಾನಂಗಳದಲ್ಲಿ ರಕ್ತ ಚಂದ್ರಗ್ರಹಣ ಗೋಚರ: ವಿಸ್ಮಯ ಕಣ್ತುಂಬಿಕೊಂಡ ಜನ

ಬೆಂಗಳೂರು/ನವದೆಹಲಿ: ಸೂರ್ಯ, ಭೂಮಿ ಮತ್ತು ಚಂದ್ರರು ಒಂದೆ ಸಾಲಿನಲ್ಲಿ ನಿಂತಾಗ ಚಂದ್ರನ ಮೇಲೆ ಭೂಮಿಯ ಬೆಳಕು ಬೀಳುವುದೆ ಚಂದ್ರಗ್ರಹಣ. ಇಂದು (ರವಿವಾರ) ಸಂಭವಿಸಿದ ಅಪರೂಪದ ರಕ್ತಚಂದ್ರ ಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿದೆ. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನು ದೇಶದ ಜನ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗದ ಜನ ಕಣ್ತುಂಬಿಕೊಂಡು ಖುಷಿಪಟ್ಟರು. ಎಲ್ಲೆಲ್ಲಿ ರಕ್ತಚಂದ್ರನ ದರ್ಶನ ? ನೆರೆಯ ಕೇರಳದ ತಿರುನಂತಪುರದಲ್ಲಿ ಭಾಗಶಃ ಹಂತದಿಂದ ಪೂರ್ಣ ಗ್ರಹಣ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರನು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಾನೆ. ಪಶ್ಚಿಮ […]

Continue Reading

ಬೆಂಗಳೂರಿನಲ್ಲಿ ಮೋಡಗಳ ಮರೆಯಲ್ಲಿ ಮರೆಯಾಗಿರುವ ಚಂದ್ರ, ನೆಲಮಂಗಲದಲ್ಲಿ ಹುಣ್ಣಿಮೆ ಚಂದ್ರನ ದರ್ಶನ

ಬೆಂಗಳೂರು: ನಭೋಮಂಡಲದ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಈಗಷ್ಟೇ ಚಂದ್ರಗ್ರಹಣದ ಪ್ರಕ್ರಿಯೆ ಆರಂಭವಾಗಿಬಿಟ್ಟಿದೆ. ರಾತ್ರಿ 9:57ರಿಂದ ಮಧ್ಯರಾತ್ರಿ 1:26ರ ವರೆಗೆ ಒಟ್ಟು ಮೂರುವರೆ ಗಂಟೆಗಳ ಕಾಲ ನಿಧಾನವಾಗಿ ಗ್ರಹಣ ಸಂಭವಿಸಲಿದೆ. ಸದ್ಯ ದೇಶದಲ್ಲಿ ಲಡಾಖ್‌ನಲ್ಲಷ್ಟೇ ಗ್ರಹಣ ಗೋಚರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು, ತಮಿಳುನಾಡು ಸೇರಿ ನಾಲ್ಕು ಕಡೆಗಳಲ್ಲಿ ಮೋಡ ಕವಿದ ಹಿನ್ನೆಲೆಯಲ್ಲಿ ಚಂದ್ರ ಕಣ್ಮರೆಯಾಗಿದ್ದಾನೆ. ಆಗಾಗ್ಗೆ ಭುವಿಯತ್ತ ಇಣುಕಿ ಮತ್ತೆ ಮೋಡದಲ್ಲಿ ಮರೆಯಾಗುತ್ತಿದ್ದಾನೆ. ನೆಲಮಂಗಲದಿಂದ ಆಕಾಶದಲ್ಲಿ ಹುಣ್ಣಿಮೆ ಚಂದ್ರನ ದರ್ಶನವಾಗಿದೆ. ನೆಲಮಂಗಲ ತಾಲೂಕಿನ […]

Continue Reading