ಶಹಾಬಾದ್: ಸತತ ಮಳೆಯಿಂದ ದೇವಾಲಯ ಜಲಾವೃತ, ಜನಜೀವನ ಅಸ್ತವ್ಯಸ್ತ

ಸುದ್ದಿ ಸಂಗ್ರಹ ಶಹಾಬಾದ್ಮಹಾರಾಷ್ಟ್ರ ಜಲಾಶಯಗಳಿಂದ ನಿರಂತರ ನೀರು ಹರಿಬಿಡುತ್ತಿರುವ ಪರಿಣಾಮ ನಗರದ ಹಳೆ ಶಹಬಾದ್, ಸಂಗ್ ಏರಿಯಾ ಅಪ್ಪರ ಮಡ್ಡಿ ಲೋವರ್‌ ಮಡ್ಡಿ, ಸುಮಾರು ನಾಲ್ಕು ವಾರ್ಡಗಳಲ್ಲಿ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳೆ ಶಹಾಬಾದ್ ವಿಶ್ವರಾಧ್ಯ ಮಠ ಸಂಪೂರ್ಣ ಜಲದಿಗ್ಧಂಧನವಾಗಿದೆ. ಆಕಸ್ಮಿಕವಾಗಿ ಮಠದಲ್ಲಿ ಉಳಿದುಕೊಂಡ ಮಾನಸಿಕ ಅಸ್ತವ್ಯಸ್ತ ಮಹೆಬೂಬ್ ಪಟೇಲ್ ಅವರನ್ನು ರಕ್ಷಿಸಿ ಅಗ್ನಿಶಾಮಕ ದಳದ ತಂಡವು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ. ವಾರ್ಡ್ ನಂಬರ್ 7, 8, 9, 26 ಮತ್ತು 27ರಲ್ಲಿ ಹೆಚ್ಚು […]

Continue Reading

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ 5 ವರ್ಷದ ನಂತರ ಒಮ್ಮೆಲೆ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ

ಪುಣೆ: ಅವಳಿಗಳು ಜನಿಸುವುದೆ ಅಪರೂಪ, ತ್ರಿವಳಿ ಮಕ್ಕಳು ಇನ್ನೂ ಅಪರೂಪ ಹಾಗೂ ವಿರಳ ಆದರೆ ನಾಲ್ಕು ಮಕ್ಕಳು ಒಟ್ಟಿಗೆ ಜನಿಸುವುದು ಅಪರೂಪದಲ್ಲಿ ಅಪರೂಪ, ವಿರಳಾತಿ ವಿರಳವಾಗಿದೆ. ಆದರೆ ಇಲ್ಲೊಬ್ಬರು ತಾಯಿ ತ್ರಿವಳಿಗಳಿಗೆ ಜನ್ಮ ನೀಡಿದ ಐದು ವರ್ಷಗಳ ನಂತರ ಮತ್ತೆ ನಾಲ್ಕು ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಆಸ್ಪತ್ರೆಯಲ್ಲಿ ಅಪರೂಪದ ಘಟನೆ ನಡೆದಿದೆ. 38 ವಾರಗಳು ತುಂಬುವ ಮೊದಲೇ 33ನೇ ವಾರದಲ್ಲೇ ಸಿ-ಸೆಕ್ಷನ್ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ 27 ವರ್ಷದ ಮಹಿಳೆಗೆ ಶಸ್ತ್ರಚಿಕಿತ್ಸೆ […]

Continue Reading

ರೋಗಿಗಳಿಗೆ ಸುರಕ್ಷಿತ ಚಿಕಿತ್ಸೆ ಅಗತ್ಯ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ರೋಗಿಗೆ ಚಿಕಿತ್ಸೆ ನೀಡುವಾಗ ಸುರಕ್ಷಿತವಾಗಿ ನೀಡುವ ಜೊತೆಗೆ ಆಗಬಹುದಾದ ಹಾನಿಯನ್ನು ತಡೆಗಟ್ಟುವುದು, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅನಗತ್ಯ ಹಾನಿಯ ಅಪಾಯ ತಗ್ಗಿಸುವುದು ಅಗತ್ಯವಾಗಿದೆ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವ ಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ “ವಿಶ್ವ ರೋಗಿಗಳ ಸುರಕ್ಷತಾ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ರೋಗಿಯ ಆರೈಕೆ ಮಾಡುವ ಪ್ರಕ್ರಿಯೆಯ ಪ್ರತಿಯೊಂದು […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ವಿಶ್ವಕರ್ಮ ಜಯಂತಿ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ, ವಿಶ್ವಕರ್ಮ ಸಮಾಜದ ಮುಖಂಡ ಬಸವರಾಜ ಪಂಚಾಳ ಮಾತನಾಡಿ, ವಿಶ್ವಕರ್ಮ ಜಯಂತಿಯು ದೈವಿಕ ವಾಸ್ತುಶಿಲ್ಪಿಯ ಜನ್ಮವನ್ನು ಆಚರಿಸುವ ದಿನ ಮಾತ್ರವಲ್ಲ, ಕುಶಲಕರ್ಮಿಗಳು ಮತ್ತು ಕಾರ್ಮಿಕರ ಕೊಡುಗೆ ಗುರುತಿಸುವ ಸಂದರ್ಭವಾಗಿದೆ ಎಂದರು. ಜಗತ್ತನ್ನು ನಿರ್ಮಿಸಲು ಮತ್ತು ರೂಪಿಸಲು ತಮ್ಮ ಕೈಗಳಿಂದ ಕೆಲಸ ಮಾಡುವವರ ಕೌಶಲ್ಯ, ಸಮರ್ಪಣೆ ಮತ್ತು ಸೃಜನಶೀಲತೆಯನ್ನು ಶ್ಲಾಘಿಸುವ ದಿನವಿದು. ಈ ಹಬ್ಬವು ನಮ್ಮ […]

Continue Reading

ಬಿಜೆಪಿ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗುವಾಗ ಯಾವ ಕಡೆ ಹೋಗಬೇಕು ಎನ್ನುವ ಬಗ್ಗೆ ದೇಶಿಯ ಸಂಸ್ಥಾನಗಳಿಗೆ ಮುಕ್ತ ಅವಕಾಶ ನೀಡಿರುವುದು ಹೈದರಾಬಾದ್‌ ಕರ್ನಾಟಕ ಭಾಗದವರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿತ್ತು. ದೇಶ ಸ್ವಾತಂತ್ರ್ಯಗೊಂಡಾಗ ಸುಮಾರು 500 ದೇಶಿಯ ಸಂಸ್ಥಾನಗಳು ಇದ್ದವು. ಅದರಲ್ಲಿ ಹೈದರಾಬಾದ್‌ ಸಂಸ್ಥಾನವೂ ಒಂದು. 1774 ರಿಂದ 1948 ರವರೆಗೆ […]

Continue Reading

ಚಿತ್ತಾಪುರ: ಯಲ್ಲಮ್ಮ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈ ತುಂಡು ಮಾಡಿ ಹೊತ್ತೊಯ್ದ ಕಳ್ಳರು

ಚಿತ್ತಾಪುರ: ಯಲ್ಲಮ್ಮ ದೇವಸ್ಥಾನದ ಬೀಗದ ಕೈ ಮುರಿದು ದೇವಿಯ ಬೆಳ್ಳಿ ಮೂರ್ತಿಯ 2 ಕೈಗಳನ್ನು ತುಂಡು ಮಾಡಿ ತೆಗೆದುಕೊಂಡು ಹೋದ ಘಟನೆ ಪಟ್ಟಣದ ಬಾಹರಪೇಟ್ ಸಮೀಪ ಕೊತಲಾಪೂರ ಯಲ್ಲಮ್ಮ ದೇವಸ್ಥಾನದಲ್ಲಿ ನಡೆದಿದೆ. ನವರಾತ್ರಿ ನಿಮಿತ್ಯ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಮಾಡಿ ಅಲಂಕಾರ ಕಾರ್ಯ ನಡೆಯುತ್ತಿತ್ತು. ಸೆ.16 ರಂದು ಮಂಗಳವಾರ ಕೊನೆಯ ಹಂತಕ್ಕೆ ತಲುಪಿತ್ತು. ಉಳಿದ ಕಾರ್ಯ ನಾಳೆ ಮಾಡಿದರಾಯಿತು ಎಂದು ದೇವಸ್ಥಾನದ ಗೇಟ್’ಗೆ ಬೀಗ ಹಾಕಿ ಹೋಗಲಾಗಿತ್ತು. ಸೆ.17 ರಂದು ಬುಧವಾರ ಬೆಳಗ್ಗೆ ದೇವಿಯ ಪೂಜಾ ಕಾರ್ಯಕ್ಕೆ ಅರ್ಚಕ […]

Continue Reading

ಯಾವುದೆ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವದಿಲ್ಲ: ಕೆ.ಹೆಚ್ ಮುನಿಯಪ್ಪ

ಬೆಂಗಳೂರು: ಯಾವುದೆ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನ ರದ್ದು ಮಾಡುವದಿಲ್ಲ, ಎಲ್ಲವನ್ನು ಪರಿಷ್ಕರಣೆ ಮಾಡುತ್ತೆವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಅನರ್ಹ ರೇಷನ್ ಕಾರ್ಡ್‌ಗಳ ರದ್ದು ವಿಚಾರವಾಗಿ ಮಾತನಾಡಿದ ಅವರು, ಬಿಪಿಎಲ್‌ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ, ಎಪಿಎಲ್‌ಗೆ ವರ್ಗಾವಣೆ ಮಾಡುತ್ತೆವೆ. ಹೊರತು ಯಾವ ಕಾರ್ಡನ್ನು ರದ್ದು ಮಾಡುವುದಿಲ್ಲ, ಎಲ್ಲಾ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೆವೆ. ವರ್ಗಾವಣೆ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಆಹಾರ ಧಾನ್ಯ […]

Continue Reading

ಶಹಾಬಾದ: ರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಹೋಳ್ಕರ್, ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಆಚರಣೆ

ಸುದ್ದಿ ಸಂಗ್ರಹ ಶಹಾಬಾದ ಎಸ್’ಎಸ್ ಮರಗೋಳ ಕಾಲೇಜಿನಲ್ಲಿ ರಾಣಿ ಅಬ್ಬಕ್ಕ ದೇವಿರವರ 500ನೇ ಜನ್ಮ ಶತಾಬ್ದಿ, ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜನ್ಮ ದಿನಾಚರಣೆ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ರವರ 200ನೇ ಜಯಂತೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಪಟ್ಟಣದ ಎಸ್’ಎಸ್ ಮರಗೋಳ ಕಾಲೇಜಿನಲ್ಲಿ ಎಸ್’ಎಸ್ ಮರಗೋಳ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮವನ್ನು […]

Continue Reading

ಲಂಚ ಪಡೆದು ಸಿಕ್ಕಿಬಿದ್ದ ಬೆಂಗಳೂರು, ಬೀದರ್, ಮಂಡ್ಯದ​​ ಮೂವರು ವೈದ್ಯರ ಅಮಾನತು

ಬೆಂಗಳೂರು: ಭಾರತೀಯ ವೈದ್ಯಕೀಯ ಆಯೋಗದ ಪರಿವೀಕ್ಷಕರ ತಂಡದಲ್ಲಿ ನಿಯೋಜಿತರಾಗಿ, ವೈದ್ಯಕೀಯ ಸಂಸ್ಥೆಗೆ ಅನುಕೂಲಕರವಾದ ತಪಾಸಣಾ ವರದಿ ನೀಡಲು ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಮೂವರು ವೈದ್ಯರನ್ನು ಕರ್ನಾಟಕದ ವೈದ್ಯಕೀಯ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ, ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶರೀರ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಚೈತ್ರ ಎಂ.ಎಸ್, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಳೆ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ಮಂಜಪ್ಪ ಸಿ.ಎನ್, ಬೀದರ್ […]

Continue Reading

SBI ಬ್ಯಾಂಕ್‌ ದರೋಡೆ: ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಬ್ಯಾಂಕ್‌ನಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಕಟ್ಟಿಹಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌‌ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ […]

Continue Reading