ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಕೃತಿ ದಹಿಸಿದ ಗುಂಪು, ಒರ್ವನ ಬಂಧನ

ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಪುರುಷರ ಗುಂಪೊಂದು ರಾವಣನ ಬದಲು ಶ್ರೀರಾಮನ ಪ್ರತಿಕೃತಿ ದಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ರಾಮನ ಪ್ರತಿಕೃತಿ ದಹಿಸಿದ್ದಷ್ಟೇ ಅಲ್ಲದೆ ರಾವಣನ ಸ್ತುತಿಯನ್ನು ಪಠಿಸಿದ್ದಾರೆ. ‘ಫಿಫ್ತ್​ ತಮಿಳು ಸಂಗಮ್’ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಈ ದೃಶ್ಯಗಳು ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸ್ ಕ್ರಮಕ್ಕೆ ಕಾರಣವಾಯಿತು. ವೀಡಿಯೊದಲ್ಲಿ, ಪುರುಷರು ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಾ ರಾವಣನನ್ನು ಸ್ತುತಿಸಿ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ಸೈಬರ್ ಕ್ರೈಂ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ […]

Continue Reading

ಭಕ್ತಿ ಭಾವದಿಂದ ನಡೆದ ನಾಲವಾರ ಶ್ರೀಗಳ ಜನ್ಮದಿನೋತ್ಸವ

ಚಿತ್ತಾಪುರ: ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಮತ್ತು ಹಿಂದಿನ ಪೀಠಾಧಿಪತಿ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಾರಾಧನಾ ಮಹೋತ್ಸವವು ಆಯುಧ ಪೂಜೆಯ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಭಕ್ತಿಭಾವದೊಂದಿಗೆ ನೆರವೇರಿತು. ಅತಿವೃಷ್ಟಿ, ಭೀಮಾ ನದಿಯ ಪ್ರವಾಹದಿಂದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿರುವುದರಿಂದ, ಜನ್ಮದಿನದ ಅದ್ಧೂರಿ ಆಚರಣೆಗೆ ಪೂಜ್ಯರು ತಡೆಯೊಡ್ಡಿದ್ದರು ಸಹ ಬುಧವಾರ ಪ್ರಾತಃ ಕಾಲದಿಂದಲೇ ತಂಡೋಪತಂಡವಾಗಿ ಸಹಸ್ರಾರು ಭಕ್ತರು ಶ್ರೀ ಮಠಕ್ಕೆ ಆಗಮಿಸಿ, ಪೂಜ್ಯರಿಗೆ ಗುರುವಂದನೆ ಸಲ್ಲಿಸಿದರು. ಮಠದ ಹಿಂದಿನ ಪೀಠಾಧಿಪತಿ ಲೀಲಾಮೂರ್ತಿ, […]

Continue Reading

ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ: ಹುಬ್ಬಳ್ಳಿ ಕಿಮ್ಸ್’ನಲ್ಲಿ ಅಪರೂಪದ ಘಟನೆ

ಹುಬ್ಬಳ್ಳಿ,: ಜಗತ್ತಿನಲ್ಲಿ ‌ಸಯಾಮಿ ಮಕ್ಕಳ ಜನನ ಸೇರಿದಂತೆ ಅನೇಕ ಅಪರೂಪದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ. ಆದರೆ ಹುಬ್ಬಳ್ಳಿಯ ಕಿಮ್ಸ್​ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಎರಡನೇ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ಜನ್ಮ ನೀಡಿದ ಮಗುವಿನೊಳಗೊಂದು ಭ್ರೂಣ ಇರೋದು ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆಂದು ಕಿಮ್ಸ್ ನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಕಳೆದ‌ ಸೆಪ್ಟಂಬರ್ 23ರಂದು ಗಂಡು ಮಗುವಿಗೆ ಈಕೆ ಜನ್ಮ ನೀಡಿದ್ದಾಳೆ. ಮಗುವಿನ ದೇಹದಲ್ಲಿ ಕೆಲ […]

Continue Reading

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು: ಭೇಟಿಯಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಹಿರಿಯ ವೈದ್ಯರು ನಿಗಾ ಇರಿಸಿದ್ದಾರೆ. ಪುತ್ರ ಪ್ರಿಯಾಂಕ್ ಖರ್ಗೆ ಹೇಳಿದ್ದೆನು ? ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆಗೆ ವೈದ್ಯರು ಸೂಚಿಸಿದ್ದಾರೆ. ಅದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ, ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಕಾಳಜಿ ಮತ್ತು ಹಾರೈಕೆಗೆ ಧನ್ಯವಾದಗಳು ಎಂದು ಸಚಿವ […]

Continue Reading

ದಂಪತಿ ಮಲಗಿದ್ದಾಗ ರಾತ್ರಿ ಮಂಚದ ಕೆಳಗಿಂದ ಎದ್ದು ಬಂದ ‘ಫ್ರಾಕ್‌ ಧರಿಸಿದ್ದ ಪುರುಷ’

ತೀರ್ಥಹಳ್ಳಿ: ಕೊಠಡಿಯಲ್ಲಿ ಪತಿಯೊಂದಿಗೆ ತಂಗಿದ್ದ ಮಹಿಳೆಗೆ ಮಂಚದ ಕೆಳಗೆ ಮಲಗಿದ್ದ ಪುರುಷನೊಬ್ಬ ನಡುರಾತ್ರಿ ಮೈಕೈ ಮುಟ್ಟಿ ಆತಂಕ ಮೂಡಿಸಿದ್ದಾನೆ. ಈ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ದಂಪತಿ ಇತ್ತೀಚೆಗೆ ಪಟ್ಟಣದ ಕುವೆಂಪು ಲೇಔಟ್’ನ ಮನೆಯಲ್ಲಿ ತಂಗಿದ್ದರು. ಕೊಠಡಿಯಲ್ಲಿ ಮಲಗಿದ್ದಾಗ ರಾತ್ರಿ 12.30ರ ಹೊತ್ತಿಗೆ ಮಂಚದ ಕೆಳಗಿನಿಂದ ವ್ಯಕ್ತಿಯೊಬ್ಬ ಮಹಿಳೆಯ ಮೈಕೈ ಮುಟ್ಟಿದ ಅನುಭವವಾಗಿದೆ. ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಪರಿಶೀಲಿಸಿದರು. ಆಗ ಮಂಚದ ಅಡಿಯಿಂದ ಎದ್ದು ಬಂದ ವ್ಯಕ್ತಿಯೊಬ್ಬ […]

Continue Reading

ಕಲಬುರಗಿ: ಹೂಡಿಕೆ ನೆಪದಲ್ಲಿ 11 ಲಕ್ಷ ವಂಚನೆ

ಕಲಬುರಗಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದೊಡ್ಡ ಪ್ರಮಾಣದ ಲಾಭ ಗಳಿಸಬಹುದು ಎಂಬುದಾಗಿ ಪ್ರೇರೇಪಿಸಿದ ಸೈಬರ್‌ ವಂಚಕರು, ಬ್ಯಾಂಕ್‌ ಅಧಿಕಾರಿಯೊಬ್ಬರಿಗೆ 11 ಲಕ್ಷ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದತ್ತ ನಗರದ ನಿವಾಸಿ ಪಿಎನ್‌ಬಿ ಬ್ಯಾಂಕ್‌ ಅಸಿಸ್ಟಂಟ್ ಮ್ಯಾನೇಜರ್‌ ರಾಮಾಂಜನಯ್ಯ ವೆಂಕೋಬಾ ಹಣ ಕಳೆದುಕೊಂಡವರು. ಜಿತೇಂದ್ರ ಬಹಾದ್ದೂರ, ಸಾಯಿ ಮರಾಠ ಮತ್ತು ಇತರರು ಸೇರಿಕೊಂಡು ‘ಇನ್ವೆಸ್ಟ್‌ ಸ್ಟ್ಯಾಟರ್ಜಿಸ್‌ 22’ ಹೆಸರಿನ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಷೇರು ಪೇಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವಂತ ಮೆಸೇಜ್‌ಗಳು, […]

Continue Reading

24 ಸಾಂಗ್ಸ್ ರೆಡಿ ಇದೆ, ಆದರೆ ‘ಪ್ರೇಮ ಲೋಕ 2’ ವಿಳಂಬಕ್ಕೆ ಕಾರಣ ತಿಳಿಸಿದ ರವಿಚಂದ್ರನ್

ಬೆಂಗಳೂರು: 1987ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಪ್ರೇಮಲೋಕ’ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ ಎಂದು ರವಿಚಂದ್ರನ್ ಹೇಳಿದ್ದರು. ಆದರೆ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಳೆದ ವರ್ಷ ಮೇ ತಿಂಗಳಲ್ಲೇ ಸಿನಿಮಾದ ಶೂಟ್ ಆರಂಭ ಆಗಬೇಕಿತ್ತು. ಆದರೆ ರವಿಚಂದ್ರನ್ ಈ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ಈಗ ಸಿನಿಮಾ ವಿಳಂಬಕ್ಕೆ ಕಾರಣ ವಿವರಿಸಿದ್ದಾರೆ. ಪ್ರೇಮಲೋಕ ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳು ಇದ್ದವು. ಸಾಂಗ್ ಬಗ್ಗೆ ತಿಳಿದ ಬಳಿಕ ಅನೇಕರು ನಿರ್ಮಾಣದಿಂದ […]

Continue Reading

ನಾಲವಾರ ಶ್ರೀಗಳ ಜನ್ಮದಿನೋತ್ಸವ: ಅಂಧ, ಬುದ್ಧಿಮಾಂದ್ಯರಿಗೆ ಉಚಿತ ಕ್ಷೌರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ಚಿತ್ತಾಪುರ ತಾಲೂಕಿನ ಶ್ರೀಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಅ.1 ರಂದು ಅನಾಥ, ನಿರ್ಗತಿಕ, ಬುದ್ಧಿಮಾಂದ್ಯರಿಗೆ ಉಚಿತ ಕ್ಷೌರ ಸೇವೆ ಮಾಡಲಾಗುವುದು ಎಂದು ಹಡಪದ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ (ಎನ್) ಹೇಳಿದರು. ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಅನಾಥ, ನಿರ್ಗತಿಕ ಮತ್ತು ಬುದ್ಧಿಮಾಂದ್ಯರ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಕ್ಷೌರ ಸೇವೆ […]

Continue Reading

ದುಷ್ಟತೆಯ ನಾಶ, ಶಿಷ್ಟತೆಯ ರಕ್ಷಣೆಯ ಸಂಕೇತ ವಿಜಯದಶಮಿ: ಮಹಾದೇವಯ್ಯ ಕರದಳ್ಳಿ

ಕಲಬುರಗಿ: ಮನುಷ್ಯನಲ್ಲಿ ಅಡಗಿರುವ ದ್ವೇಷ, ಅಸೂಯೆ, ಸ್ವಾರ್ಥತೆ, ಕೆಟ್ಟ ಆಲೋಚನೆಯಂಥಹ ಮುಂತಾದ ದುಷ್ಟ ಶಕ್ತಿಯ ಗುಣಗಳನ್ನು ನಾಶಪಡಿಸಿ, ಪರಸ್ಪರ ಪ್ರೀತಿ, ಸಹಬಾಳ್ವೆ, ಸಹಕಾರ, ಪರೋಪಕಾರದಂಥಹ ಶಿಷ್ಟತೆಯ ಗುಣಗಳು ಮೈಗೂಡಿಕೊಂಡು ಜೀವನ ಸಾಗಿಸಬೇಕೆಂಬ ಮೇರು ಸಂದೇಶ ವಿಜಯದಶಮಿ ಹೊಂದಿದೆ ಎಂದು ಚಿಂತಕ ಮಹಾದೇವಯ್ಯ ಕರದಳ್ಳಿ ಅಭಿಮತಪಟ್ಟರು. ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ನಾಡಹಬ್ಬ ದಸರಾ ಸಂದೇಶ’ ವಿಶೇಷ ಉಪನ್ಯಾಸ […]

Continue Reading

ಭಾಷಾಂತರದಿಂದ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಸಾಧ್ಯ: ಎಚ್.ಬಿ ಪಾಟೀಲ

ಕಲಬುರಗಿ: ಕೆಲವೇ ಭಾಷೆಗಳು ಎಲ್ಲೆಡೆ ಬಳಕೆ ಮಾಡಿದರೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವುಗಳನ್ನು ಮಾತೃಭಾಷೆಗೆ ಪರಿವರ್ತಿಸುವುದು ಅಗತ್ಯ. ಇದರಿಂದ ಮಾತೃಭಾಷೆ, ಸಾಹಿತ್ಯ ಬೆಳವಣಿಗೆಯಾಗುವುದರ ಜೊತೆಗೆ ಜನಸಾಮಾನ್ಯರಿಗೆ ಗ್ರಹಿಕೆ ಸುಲಭವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್’ನಲ್ಲಿ ಬಸವೇಶ್ವರ ಪದವಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಅಂತರಾಷ್ಟ್ರೀಯ ಭಾಷಾಂತರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಭಾಷಾಂತಕಾರರಿಗೆ ಗೌರವ ಸಲ್ಲಿಸುವುದು ದಿನಾಚರಣೆ ಉದ್ದೇಶವಾಗಿದೆ. ವಿವಿಧ ದೇಶ, ಸಂಸ್ಕೃತಿ ಬೆಸೆಯುವಲ್ಲಿ […]

Continue Reading