ಸುದ್ದಿ ಸಂಗ್ರಹ ಕಲಬುರಗಿ
ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಕಲಬುರಗಿಯ ಕಾಕಡೆ ಚೌಕ್ ಬಳಿಯ ವೃದ್ಧಾಶ್ರಮಕ್ಕೂ ತಟ್ಟಿದ್ದು, ಸಿಲಿಂಡರ್ ಅಭಾವ ಉಂಟಾಗಿದೆ.
ಸಿಲಿಂಡರ್ ಸಿಗದ ಹಿನ್ನೆಲೆ ಸೌದೆ ಮೇಲೆ ಅಡುಗೆ ಮಾಡಲಾಗುತ್ತಿದೆ. ಬಿರು ಬಿಸಿಲಿನಲ್ಲಿ ಕೂತು ಸಿಬ್ಬಂದಿ ಅಡುಗೆ ತಯಾರಿಸಲು ಕಷ್ಟಪಡುತ್ತಿದ್ದಾರೆ. ಆಶ್ರಮದ ವೃದ್ಧರು ಆಹಾರಕ್ಕಾಗಿ ಪರದಾಡುವಂತಾಗಿದೆ.
ಎಲ್‌ಪಿಜಿ ಸಿಗದ ಹಿನ್ನೆಲೆಯಲ್ಲಿ ವೃದ್ಧಾಶ್ರಮದಲ್ಲಿರುವ 15ಕ್ಕೂ ಹೆಚ್ಚು ವೃದ್ಧರಿಗೆ ಸಮಸ್ಯೆಯಾಗಿದೆ.