ಸಚಿವರ ಅನುದಾನದಿಂದ ಬಿಜೆಪಿ ನಾಯಕರಿಗೆ ದಿಗ್ಭ್ರಮೆ‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿನಾಟಕ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಅವರು, ಸಚಿವರು ತಮ್ಮ ಸತತ ಪ್ರಯತ್ನದಿಂದ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿರುವುದನ್ನು ಸಹಿಸದ ಬಿಜೆಪಿ ನಾಯಕರು ದಿಗ್ಭ್ರಮೆಗೊಂಡು ಆಧಾರರಹಿತ ಹೇಳಿಕೆಗಳು ನೀಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ 224 ಶಾಸಕರಲ್ಲಿ ಅತಿ ಹೆಚ್ಚು ಅನುದಾನ ಕ್ಷೇತ್ರಕ್ಕೆ ತಂದ ಕೀರ್ತಿ ಖರ್ಗೆಯವರಿಗೆ ಸಲ್ಲುತ್ತದೆ. ಇಂತಹದೊಂದು ಅಭಿವೃದ್ಧಿ ಪರ್ವ ನೋಡಿ ಸಹಿಸಲಾಗದ ಬಿಜೆಪಿ ನಾಯಕರು ಹತಾಶೆಯ ಹೇಳಿಕೆಗಳು ನೀಡುತ್ತಿದ್ದಾರೆ. ಸರಕಾರದ ಯಾವುದೆ ಅನುದಾನವು ನಿಯಮಾನುಸಾರವೇ ಕ್ರಿಯಾ ಯೋಜನೆಗೆ ಬಳಕೆಯಾಗುತ್ತದೆ ಎಂಬ ಕನಿಷ್ಠ ಅರಿವು ಬಿಜೆಪಿಯವರಿಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬಿಸಲಾಗುತ್ತಿದೆ ಎಂಬ ಅವರ ಆರೋಪ ಹಾಸ್ಯಾಸ್ಪದ ಮತ್ತು ಸತ್ಯಕ್ಕೆ ದೂರವಾಗಿದೆ. ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ತೊಗರಿ ಬೆಳೆ ನೆಟೆರೋಗಕ್ಕೆ ತುತ್ತಾಗಿ ರೈತರು ಕಂಗಾಲಾಗಿದ್ದರು. ಆಗ ಯಾರೊಬ್ಬ ಬಿಜೆಪಿ ನಾಯಕರು ರೈತರ ಪರ ಧ್ವನಿ ಎತ್ತಲಿಲ್ಲ, ಪ್ರಿಯಾಂಕ್‌ ಖರ್ಗೆ ಅವರು ಬೀದಿಗಿಳಿದು ಹೋರಾಟ ಮಾಡಿ ನಷ್ಟವಾದ ರೈತರಿಗೆ ಬೆಳೆ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾದರು ಎಂಬುದು ಬಿಜೆಪಿ ನಾಯಕರಿಗೆ ಅರಿವಿಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *