ಶಹಾಬಾದ್‌: ಡಾ.ಫಾರೂಕ್ ಮಣ್ಣೂರರಿಂದ ಸೌಹಾರ್ದ ಇಫ್ತಾರ್ ಕೂಟ

ನಗರದ

ಸುದ್ದಿ ಸಂಗ್ರಹ ಶಹಾಬಾದ
ಪ್ರೀತಿ, ಭಾಂದವ್ಯ, ಭ್ರಾತೃತ್ವ ಭಾವನೆ ಮೂಡಿಸಲು ಮತ್ತು ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತ ಬದುಕು ಕಲಿತುಕೊಳ್ಳುವುದೆ ಇಫ್ತಾರ್ ಕೂಟದ ಉದ್ದೇಶವಾಗಿದೆ ಎಂದು ಕಲಬುರಗಿಯ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ.ಫಾರೂಕ್ ಮಣ್ಣೂರ ಹೇಳಿದರು.

ನಗರದ ಜಾಮಿಯಾ ಮಸ್ಜೀದ್ ಫಂಗ್ಶನ್ ಹಾಲ್’ನಲ್ಲಿ ಡಾ.ಫಾರೂಕ್ ಮಣ್ಣೂರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಒಂದು ತಿಂಗಳುಗಳ ಕಾಲ ನಡೆಯುವ ಉಪವಾಸ ವ್ರತದ ಇಫ್ತಿಯಾರ್ ಕೂಟದಲ್ಲಿ ಹಿಂದು-ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗುವ ಮೂಲಕ ಭಾವೈಕ್ಯತೆಯ ಸಂಕೇತ ಮತ್ತು ದುಶ್ಚಟಗಳಿಂದ ದೂರವಿದ್ದು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಚಿಂತನೆ ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.‌

ಜಮಿಯಾ ಮಸಜಿದ್ ಕಮಿಟಿ ಅಧ್ಯಕ್ಷ ಮತೀನ್ ಪಟೇಲ್. ಮಾತನಾಡಿ, ʼಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವ ಬೆಳೆಸಲು ಸರ್ವಧರ್ಮ ತತ್ವದ ಸಾರ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ವಿಭಿನ್ನ ಧರ್ಮಗಳ ಸಾರ ಒಂದೆ ಮಾನವೀಯ ಮೌಲ್ಯಗಳು ಸಾರುತ್ತದೆ ಎಂಬುದು ಜನರಿಗೆ ತಿಳಿಸಲು ಸೌಹಾರ್ದ ಕೂಟಗಳಂತಹ ಕಾರ್ಯಕ್ರಮ ಮುಖ್ಯ ಪಾತ್ರ ವಹಿಸುತ್ತವೆ’ ಎಂದರು.

ಈ ಸಂದರ್ಭದಲ್ಲಿ ಸಿಪಿಐ ಪರುಶುರಾಮ ವನಂಜಕರ್, ಪ್ರಮುಖರಾದ ಜನಾಬ್ ಫಕ್ರುದ್ದೀನ್ ಸಾಹೇಬ್, ರಾಚಯ್ಯ ಸ್ವಾಮಿ, ಜನಾಬ್ ಜಮೀರ್ ಅಹ್ಮದ್ ಪಟ್ವೇರ್ಗರ್, ಮೊಹಮ್ಮದ್ ಮಸ್ತಾನ್, ಡಾ ಅಹ್ಮದ್ ಪಟೇಲ್ ಜನಾಬ್ ಅಬ್ದುಲ್, ಗಣಿ ಅಮ್ಜದ್ ಜಮಾದಾರ್, ಹರೀಶ್ ಕಾರ್ಣಿಕ್, ಮೊಹಮ್ಮದ್ ಜುನೈದ್, ಮೊಹಮದ್ ಇಮ್ರಾನ್, ಸೋಯಲ್ ಕುಸ್ರೊ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *