ಕನ್ನಡ ಕಿರುತೆರೆ ಲೋಕದಲ್ಲಿ ಸದಾ ಹೊಸತನಕ್ಕೆ ತುಡಿಯುವ ವಾಹಿನಿ ʻಸ್ಟಾರ್ ಸುವರ್ಣʼ. ಕನ್ನಡಿಗರ ನಾಡಿಮಿಡಿತ ಅರಿತು ವೈವಿಧ್ಯಮಯ ಕಥೆಗಳ ಮೂಲಕ ಮನೆಮಾತಾಗಿರುವ ʻಸ್ಟಾರ್ ಸುವರ್ಣʼ, ಈಗ ಕಿರುತೆರೆಯ ಇತಿಹಾಸದಲ್ಲೆ ಹಿಂದೆಂದೂ ಕಾಣದ ಅದ್ಬುತ ಪ್ರಯೋಗವೊಂದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಎರಡು ಜನಪ್ರಿಯ ಧಾರಾವಾಹಿಗಳು ಒಂದಾಗುವುದನ್ನು ನಾವು ʻಮಹಾಸಂಗಮʼ ಎಂದು ಕರೆಯುತ್ತೆವೆ. ಆದರೆ ಇದೆ ಮೊದಲ ಬಾರಿಗೆ ʻಸುವರ್ಣ ವಾಹಿನಿʼಯ ಮೂರು ಸೂಪರ್ ಹಿಟ್ ಧಾರಾವಾಹಿಗಳನ್ನು ಒಂದೆ ವೇದಿಕೆಯಲ್ಲಿ ತರುವ ಮೂಲಕ ʻತ್ರಿವೇಣಿ ಸಂಗಮʼ ಎಂಬ ವಿನೂತನ ರಸದೌತಣವನ್ನು ವೀಕ್ಷಕರಿಗೆ ಬಡಿಸುತ್ತಿದೆ.
ನೀ ಇರಲು ಜೊತೆಯಲ್ಲಿ’ ಧಾರಾವಾಹಿಯ ಕಥೆಯಲ್ಲಿ ಇದೀಗ 5 ವರ್ಷಗಳೇ ಕಳೆದಿದೆ, ಕಾಲಚಕ್ರ ಬದಲಾಗಿದೆ. ನಾಯಕ ಕೃಷ್ಣ ತನ್ನ ದುಡಿಮೆಯಿಂದ ಶ್ರೀಮಂತನಾಗಿದ್ದು, ರಚನಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಕೃಷ್ಣನ ಈ ಪರಿಸ್ಥಿತಿ ನೋಡಿ ಮಗನಿಗೆ ಇನ್ನೊಂದು ಮದುವೆ ಮಾಡಬೇಕೆಂಬ ಹಂಬಲ ಹೆತ್ತವರದ್ದು.
ಮತ್ತೊಂದೆಡೆ ಕಥೆಗೆ ಹೊಸ ನಾಯಕಿಯಾಗಿ ಎಂಟ್ರಿ ಕೊಟ್ಟಿರೋ ರಾಧಾ, ಮಧ್ಯಮ ಕುಟುಂಬದಲ್ಲಿ ಬೆಳೆದಿರೋಳು. ತನ್ನ ಜೀವನದಲ್ಲಿ ನಡೆದಿರುವ ಒಂದು ಘಟನೆಯಿಂದಾಗಿ ನೋಡಲು ಬರುವ ಹುಡುಗರು ಈಕೆಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಊರ್ಮಿಳಾ ರಚಿಸುವ ತಂತ್ರಗಾರಿಕೆಯಿಂದಾಗಿ ಕೃಷ್ಣ- ರಾಧಾರ ಮದುವೆ ನಿಶ್ಚಯವಾಗುತ್ತದೆ. ಇಷ್ಟವಿಲ್ಲದಿದ್ದರು ಹೆತ್ತವರಿಗಾಗಿ ಮದುವೆಯಾಗಲು ಸಿದ್ಧನಾಗುತ್ತಾನೆ ಕೃಷ್ಣ.
ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ‘ಗೌರಿಶಂಕರ’ ಹಾಗೂ ‘ಶಾರದೆ’ ಧಾರಾವಾಹಿ ಕುಟುಂಬ. ಕಥೆಯಲ್ಲಿ ರೋಚಕ ತಿರುವುಗಳಿದ್ದು, ಇವರ ಆಗಮನ ಹೇಗೆ ಆಗಲಿದೆ ಎಂಬುದನ್ನು ನೀವು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಗೌರಿ-ಶಂಕರರ ಸಾರಥ್ಯದಲ್ಲಿ, ಸಿದ್ದು- ಶಾರದಾ ಆತಿಥ್ಯದಲ್ಲಿ ಅದ್ದೂರಿಯಾಗಿ ನಡೀತಿದೆ ʻರಾಧಾ -ಕೃಷ್ಣʼ ಕಲ್ಯಾಣ.
ಕಿರುತೆರೆ ಇತಿಹಾಸಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು. ಒಂದೆ ಟೈಮ್ನಲ್ಲಿ ಮೂರು ಧಾರಾವಾಹಿಗಳ ಪಾತ್ರಗಳನ್ನು ಪರದೆಯ ಮೇಲೆ ನೋಡುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ತನ್ನ ವಿನೂತನ ಆಲೋಚನೆಗಳಿಂದ ಸದಾ ಮುಂಚೂಣಿಯಲ್ಲಿರುವ ʻಸ್ಟಾರ್ ಸುವರ್ಣʼ ಈ ʻತ್ರಿವೇಣಿ ಸಂಗಮʼದ ಮೂಲಕ ತನ್ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ. ʻಗೌರಿಶಂಕರʼ, ʻನೀ ಇರಲು ಜೊತೆಯಲ್ಲಿʼ ಮತ್ತು ʻಶಾರದೆʼ ʻತ್ರಿವೇಣಿ ಸಂಗಮʼ ಸಂಜೆ 6 ರಿಂದ 7.30ರ ವರೆಗೆ, ನಿಮ್ಮ ʻಸ್ಟಾರ್ ಸುವರ್ಣʼ ವಾಹಿನಿಯಲ್ಲಿ ತಪ್ಪದೆ ವೀಕ್ಷಿಸಿ.