ನೆಲದ ಸಂಸ್ಕೃತಿ ಸಾರುವ ಹೊಡಲ್ ಸ್ಮಾರಕಗಳು: ಮುಡುಬಿ ಗುಂಡೇರಾವ
ಕಲಬುರಗಿ: ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಸಾರುವ ಹೊಡಲ ಗ್ರಾಮದ ರಾಮಲಿಂಗೇಶ್ವರ ದೇವಾಲಯ ಮತ್ತು ಸ್ಮಾರಕಗಳ ಕೊಡುಗೆ ಅಪಾರವಾಗಿವೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು. ಕಮಲಾಪುರ ತಾಲೂಕಿನ ಹೊಡಲ್ ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-15ರಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ನಾಡಿನ ಭವ್ಯ ಪರಂಪರೆಯ ಪ್ರತೀಕವಾದ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಇಲ್ಲಿಯ ಒಂದೊಂದು ಕಲ್ಲು, ಶಿಲ್ಪಗಳು, […]
Continue Reading