ಮಹಾದೇವಿ ಭೀಮನಹಳ್ಳಿ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ

ಚಿತ್ತಾಪುರ: ತಾಲೂಕಿನ ಭೀಮನಹಳ್ಳಿ ಗ್ರಾಮದ ಜಾನಪದ ಕಲಾವಿದೆ ಮಹಾದೇವಿ ಶರಣಪ್ಪ ಹೊಸಮನಿ ಅವರು ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ತಿಳಿಸಿದ್ದಾರೆ. ಜನವರಿ 11 ಮತ್ತು 12 ರಂದು ಬೀದರ್’ನಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ವಿಭಾಗ ಮಟ್ಟದ ತತ್ವಪದ ಸಮಾವೇಶ ಹಾಗೂ ಭಜನಾ ಸ್ಪರ್ಧೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.

Continue Reading

ಕಾಡಿನಿಂದ ಹೊರಬಂದ ನಕ್ಸಲರು: ಶರಣಾದವರಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ

ಬೆಂಗಳೂರು: 6 ಜನ ನಕ್ಸಲ್ ನಾಯಕರ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾಗಿದೆ, ಚಿಕ್ಕಮಗಳೂರು ಜಿಲ್ಲಾಡಳಿತ ಬದಲಾಗಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಶರಣಾಗರಾಗುತ್ತಿದ್ದಾರೆ. ಹೀಗಾಗಿ 6 ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ, ಸಂಜೆ ವೇಳೆಗೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಲಿದ್ದಾರೆ. ಶರಣಾಗತಿಯಾಗುತ್ತಿರುವ ನಕ್ಸಲರಿಗೆ ರಾಜ್ಯ ಸರ್ಕಾರ, ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಿಸಿದೆ. ನಿನ್ನೆ ಬೆಳಗ್ಗೆಯಿಂದ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ, ದಲಿತ ಸಂಘಟನೆ ಮುಖಂಡರು, ಶರಣಾಗುತ್ತಿರುವ ನಕ್ಸಕರ […]

Continue Reading

ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು ಬಾರಿಗೆ ಸಿಎಂ ಮುಂದೆ 6 ನಕ್ಸಲರು ಶರಣಾಗತಿ

ರಾಯಚೂರು: ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾಕೆಂದರೆ ಕಳೆದ ಹಲವು ವರ್ಷಗಳಿಂದ ಕಾಡಿನೊಳಗೆ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಈಗ ಮುಖ್ಯವಾಹಿನಿಗೆ ಬಂದಿದ್ದಾರೆ. 6 ನಕ್ಸಲರು ಇಂದು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮ್ಮುಳದಲ್ಲೇ ಶರಣಾಗಿದ್ದಾರೆ. ಇನ್ನು ಶರಣಾದ ನಕ್ಸಲರಿಗೆ ಸಿಎಂ ಸಂವಿಧಾನದ ಪುಸ್ತಕ ನೀಡಿದರು. ಈ ಮೂಲಕ ಕರ್ನಾಟಕ ನಕ್ಸಲ ಮುಕ್ತ ರಾಜ್ಯ ಎಂದು ವ್ಯಾಖ್ಯಾನಿಸಬಹುದು. […]

Continue Reading

ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಪತ್ರಿಕಾ ರಂಗದ ಮೇಲಿದೆ ಗುರುತರ ಜವಾಬ್ದಾರಿ: ಡಾ. ಶಿವರಂಜನ ಸತ್ಯಂಪೇಟೆ

ಕಲಬುರಗಿ: ಪತ್ರಿಕೆಗಳು ಸಮಾಜಮುಖಿ, ಅಭಿವೃದ್ಧಿ, ವೈಚಾರಿಕತೆ, ಮೌಲ್ಯಯುತ, ಧನಾತ್ಮಕ ವಿಷಯದ ಬಗ್ಗೆ ಸುದ್ದಿ ಬಿತ್ತರಿಸಿದರೆ ಮಾತ್ರ ಸಾಮಾಜಿಕ ಸ್ವಾಸ್ಥ್ಯಕಾಪಾಡಲು ಸಾಧ್ಯವಾಗುತ್ತದೆ. ಇಂತಹ ಗುರುತರ ಜವಾಬ್ದಾರಿ ಪತ್ರಿಕೆ, ಪತ್ರಕರ್ತರ ಮೇಲಿದೆ ಎಂದು ಹಿರಿಯ ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಅಭಿಮತಪಟ್ಟರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿಪೂರ್ವ ಕಾಲೇಜ್’ನ ಎನ್.ಎಸ್.ಎಸ್ ಘಟಕದ ವತಿಯಿಂದ ಜರುಗುತ್ತಿರುವ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನವಾದ ಬುಧವಾರ ಶಕಾಪೂರ ಗ್ರಾಮದ ವಿಶ್ವರಾಧ್ಯ ತಪೋವನ ಮಠದ ಆವರಣದಲ್ಲಿ ಏರ್ಪಡಿಸಿದ್ದ ‘ಸಾಮಾಜಿಕ ಸ್ವಾಸ್ಥ್ಯಕಾಪಾಡುವಲ್ಲಿ […]

Continue Reading

209 ತಾಲೂಕುಗಳಲ್ಲಿ ಭೂ ಸುರಕ್ಷಾ ಪ್ರಾರಂಭ: ಕಂದಾಯ ಇಲಾಖೆ

ಬೆಂಗಳೂರು: ತಾಲೂಕು ಕಚೇರಿಯಲ್ಲಿರುವ ಪ್ರಮುಖ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ‘ಭೂ ಸುರಕ್ಷತಾ ಯೋಜನೆ’ಯ ಎರಡನೇ ಹಂತಕ್ಕೆ ಇದೆ ಜನವರಿಯಿಂದ ಚಾಲನೆ ನೀಡಲಾಗುವದು ಎಂದು ಕಂದಾಯ ಇಲಾಖೆ ಹೇಳಿದೆ. ತಾಲೂಕು ಕಚೇರಿಗಳಲ್ಲಿ ಸಂಗ್ರಹವಾಗಿರುವ ಅತ್ಯಂತ ಪ್ರಮುಖವಾದ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ಕೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಒಂದು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಂಡಿರುವ ಈ ಕಾರ್ಯದಲ್ಲಿ ಇದುವರೆಗೂ 7.95 ಕೋಟಿ ಪುಟಗಳನ್ನು ಒಳಗೊಂಡ 14.87 ಲಕ್ಷ […]

Continue Reading

ವಿಮೆ ದುರಾಸೆಗೆ ತಂದೆಯನ್ನೇ ಕೊಲ್ಲಿಸಿದ ಪುತ್ರ

ಕಲಬುರಗಿ: ಸಾಲದ ಹಣ ತರೋಣವೆಂದು ನಂಬಿಸಿ ತಂದೆಯನ್ನು ಸ್ಕೂಟರ್‌ನಲ್ಲಿ ಕರೆದೊಯ್ದ ಪುತ್ರ ಮಾರ್ಗ ಮಧ್ಯದಲ್ಲಿ ಟ್ರ್ಯಾಕ್ಟರ್‌ನಿಂದ ಎರಡು ಬಾರಿ ಡಿಕ್ಕಿ ಹೊಡೆಸಿ ಆತನನ್ನು ಕೊಲ್ಲಿಸಿ ವಿಮೆಯ ಹಣದಲಿ, ಸಾಲ ತೀರಿಸಲು ಹವಣಿಸಿದ್ದವನು ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಮಾಡಬೂಳ ಪೊಲೀಸ್ ಠಾಣೆಯಲ್ಲಿ ಜುಲೈ 2024ರಲ್ಲಿ ದಾಖಲಾಗಿದ್ದ ಅಪಘಾತ ಪ್ರಕರಣವನ್ನು ಭೇದಿಸಿದ್ದ ಪೊಲೀಸರಿಂದ ಕೊಲೆಯಾದ ಮಾಳಿಂಗರಾವ ಅವರ ಮಗ ಸತೀಶನ ಭೀಭತ್ಸ ಕೃತ್ಯ ಬಯಲಾಗಿದೆ. ಆರೋಪಿಗಳು ರೂಪಿಸಿದ್ದ ಕೊಲೆಯ ಸಂಚು ಅದನ್ನು ಕಾರ್ಯರೂಪಕ್ಕೆ ತಂದಿದ್ದು, ಕೃತ್ಯದ […]

Continue Reading

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ NET ಕಡ್ಡಾಯವಲ್ಲ: ಅಧ್ಯಾಪಕರ ನೇಮಕಾತಿಗಾಗಿ UGC ಕರಡು ನಿಯಮ ಪ್ರಕಟ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರ ನೇಮಕಾತಿ ಮತ್ತು ಬಡ್ತಿಗಾಗಿ ಸೋಮವಾರ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕರಡು ಮಾರ್ಗಸೂಚಿಗಳ ಪ್ರಕಾರ, ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಕ್ಲಿಯರಿಂಗ್ ಇನ್ನು ಮುಂದೆ ಕಡ್ಡಾಯ ಅರ್ಹತೆಯಾಗಿರುವುದಿಲ್ಲ. ಕರಡು ನಿಯಮಗಳು ಅಧ್ಯಾಪಕರ ನೇಮಕಾತಿಗಳಿಗಾಗಿ ಅಸ್ತಿತ್ವದಲ್ಲಿರುವ ಅರ್ಹತಾ ಮಾನದಂಡಗಳಿಂದ ಜಟಿಲತೆಯನ್ನು ತೆಗೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ಗೆ ಅನುಗುಣವಾಗಿ ವೈವಿಧ್ಯಮಯ, ಬಹುಶಿಸ್ತೀಯ ಹಿನ್ನೆಲೆಯಿಂದ […]

Continue Reading

ವಾಡಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಭೇಟಿ, ವಿವಿಧ ಇಲಾಖೆಯ ಕಾಮಗಾರಿ ಪರಿಶೀಲನೆ

ಚಿತ್ತಾಪುರ: ವಾಡಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಭೇಟಿ ನೀಡಿ ವಿವಿಧ ಇಲಾಖೆಯ ಕಾಮಗಾರಿ ಪರಿಶೀಲನೆ ಮಾಡಿದರು. ತಾಲೂಕಿನಲ್ಲಿ ವಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ, ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಧರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಸೀಲ್ದಾರ ನಾಗಯ್ಯ ಹಿರೇಮಠ ಮತ್ತು ಆಯಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಕೋಲಿ ಸಮಾಜದ ಒಗ್ಗಟ್ಟು ಒಡೆಯಬೇಡಿ: ಭೀಮಣ್ಣ ಸಾಲಿ

ಚಿತ್ತಾಪುರ: ಜಿಲ್ಲೆಯಲ್ಲಿ ಕೋಲಿ ಸಮಾಜದ ಸ್ವಯಂ ಘೋಷಿತ ಅಧ್ಯಕ್ಷರು ಬಹಳ ಜನರಿದ್ದಾರೆ. ಎಲ್ಲರೂ ಒಗ್ಗೂಡಿ ಸಮಾಜದ ಸಂಘಟನೆಗೆ ಶಕ್ತಿ ತುಂಬಬೇಕು. ಸಮಾಜದ ಒಗ್ಗಟ್ಟಿಗೆ ಧಕ್ಕೆಯುಂಟು ಮಾಡಿ ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೋಲಿ ಸಮಾಜದ ತಾಲೂಕು ಘಟಕ ಮತ್ತು ನಗರ ಘಟಕದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರಾದವರು ಸಮಾಜದವರನ್ನು […]

Continue Reading

ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ, ಅರಣ್ಯ ಇಲಾಖೆ ಸಿಬ್ಬಂದಿ ಶಾಕ್

ತುಮಕೂರು: ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಪುರಲೆಹಳ್ಳಿ ರಸ್ತೆಯಲ್ಲಿರುವ ಕುಮಾರ ಎಂಬವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೆ […]

Continue Reading