ಚಿನ್ನ ಮಾತ್ರವಲ್ಲ, ಇನ್ನುಮುಂದೆ ಬೆಳ್ಳಿಗೂ ಹಾಲ್‌ಮಾರ್ಕ್‌

ನವದೆಹಲಿ: ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಬೆಳ್ಳಿ ಮತ್ತು ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೆ ತರಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪರಿಗಣಿಸಬೇಕು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬೆಳ್ಳಿಯ ಹಾಲ್‌ಮಾರ್ಕ್‌ಗಾಗಿ ಗ್ರಾಹಕರಿಂದ ಬೇಡಿಕೆಯಿದೆ. ನೀವು (BIS) ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು 78ನೇ BIS ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಉತ್ಪನ್ನದ ದೃಢೀಕರಣವನ್ನು ಖಾತರಿಪಡಿಸುವ […]

Continue Reading

ತೊಟ್ನಳ್ಳಿ: ದುರ್ಗಾದೇವಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ

ಸೇಡಂ: ತಾಲೂಕಿನ ತೊಟ್ನಳ್ಳಿ ಗ್ರಾಮದಲ್ಲಿ ಜ.12, 13 ರಂದು ದುರ್ಗಾದೇವಿ ಜಾತ್ರಾ ಮಹೋತ್ಸವ ಜರುಗುವದು. ಪ್ರಯುಕ್ತ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಡಾ. ತ್ರಿಮೂರ್ತಿ ಶಿವಾಚಾರ್ಯರು ಮತ್ತು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕರಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ತೊಟ್ನಳ್ಳಿ ಗ್ರಾಮದ ಕಲಾವಿದರು ಹಾಗೂ ಪತ್ರಿಕಾ ಸೇವೆ ದಾಸೋಹಿ ವಿಶ್ವನಾಥ ತೊಟ್ನಳ್ಳಿ, ಚಂದ್ರಕಾಂತ ಮುದಕನಳ್ಳಿ, ತೋಟಪ್ಪ ಪೂಜಾರಿ, ಹಣಮಂತ ಹಡಪದ, ರವಿರಾಜ ಹುಣಚಿಹಳ್ಳಿ, ದೇವಿಂದ್ರಪ್ಪ ಹುಳಗೇರಿ, ಉಮೇಶ ಮಠಪತಿ, […]

Continue Reading

ಓರಿಯಂಟ್ ಸಿಮೆಂಟ್ ಕಂಪೆನಿ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ: ಅಶ್ವಥ ರಾಠೋಡ

ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪದ ಓರಿಯಂಟ್ ಸಿಮೆಂಟ್ ಕಂಪೆನಿಯಿಂದ ನಕಲಿ ಪತ್ರ ಸೃಷ್ಟಿಸಿ, ಕೆಎ.32 ಎಬಿ.2200 ಸಂಖ್ಯೆಯ ಲಾರಿ ಲೋಡ್ ಮಾಡುವುದನ್ನು ತಡೆಹಿಡಿದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಕಂಪೆನಿಯ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯವಾದಿ, ಬಿಜೆಪಿ ಮುಖಂಡ ಅಶ್ವಥರಾಮ ರಾಠೋಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸಿಪಿಐ ಕಚೇರಿಯಿಂದ ಹೋದ ನಕಲಿ ಪತ್ರವನ್ನು ಎಫ್’ಎಸ್’ಎಲ್ ಕಳುಹಿಸಿ ಸಮಗ್ರ ತನಿಖೆ ನಡೆಸಿದಾಗ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ, ಫೇಕ್ […]

Continue Reading

ಚಿತ್ತಾಪುರ ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಶಿವುಕುಮಾರ ಯಾಗಾಪೂರ ಆಯ್ಕೆ

ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರ ಹಾಗೂ ಯುವಕರ ಒಪ್ಪಿಗೆ ಮೇರೆಗೆ ಸಮಾಜದ ಸಂಘಟನೆಯ ದೃಷ್ಟಿಯಿಂದ ಶಿವುಕುಮಾರ ಯಾಗಾಪೂರ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಮತ್ತು ಕೋಲಿ ಸಮಾಜದ ಮುಖಂಡ ಶರಣಪ್ಪ ನಾಟೀಕಾರ ಹೇಳಿದರು‌. ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಹಾಗೂ ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಆದೇಶದಂತೆ […]

Continue Reading

ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ

ಚಿತ್ತಾಪುರ: ಸಚ್ಚಿದಾನಂದ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಸಚ್ಚಿದಾನಂದ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಶರಣು ತಂದೆ ಮಹಿಂದ್ರಾ (10ನೇ) ಮತ್ತು ಉಲ್ಲಾಸ್ ತಂದೆ ಸುನೀಲ (9ನೇ) ರಾಷ್ಟ್ರೀಯ ಮತದಾರ ದಿನದ ಅಂಗವಾಗಿ ಕಲಬುರಗಿಯ ಸರಕಾರಿ ಬಾಲಕಿಯರ ಪ್ರೌಢ ಶಾಲೆಗಳಲ್ಲಿ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. […]

Continue Reading

ಕೇವಲ 1.50 ಪೈಸೆಗಾಗಿ ಗ್ಯಾಸ್‌ ಏಜೆನ್ಸಿ ವಿರುದ್ಧ 7 ವರ್ಷ ಹೋರಾಟ ಮಾಡಿ ಯಶಸ್ಸು ಕಂಡ ಗ್ರಾಹಕ

ಭೋಪಾಲ್‌: ಈಗಿನ ಬ್ಯುಸಿ ಜಗತ್ತಿನಲ್ಲಿ ಒಂದೂವರೆ ರೂಪಾಯಿ ಬಗ್ಗೆ ಯಾರೂ ಗಮನ ನೀಡೋದೇ ಇಲ್ಲ. ಹಾಗೆನಾದರೂ ಬಸ್‌ನಲ್ಲಿ, ಟ್ರೇನ್‌ನಲ್ಲಿ ಟಿಕೆಟ್‌ಕೊಳ್ಳುವಾಗ ಒಂದೂವರೆ ರೂಪಾಯಿ ಹಣ ಚಿಲ್ಲರೆ ಇಲ್ಲದಿದ್ದಾಗ ರೌಂಡ್‌ಆಫ್‌ ಕೂಡ ಮಾಡ್ತಾರೆ. ಆದರೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಚಕ್ರೇಶ್‌ ಜೈನ್‌ ಎನ್ನುವ ವ್ಯಕ್ತಿ ಕೇವಲ 1.50 ರೂಪಾಯಿಗಾಗಿ ಬರೋಬ್ಬರಿ 7 ವರ್ಷಗಳ ಕಾಲ ಗ್ಯಾಸ್‌ ಏಜೆನ್ಸಿ ವಿರುದ್ಧ ಹೋರಾಟ ಮಾಡಿದ್ದಾರೆ. ಇದು ಸಣ್ಣ ಅಮೌಂಟ್‌ ಆಗಿರಬಹುದು. ಆದರೆ ಗ್ರಾಹಕರ ಹಕ್ಕುಗಳ ವಿಚಾರದಲ್ಲಿ ಇದು ದೊಡ್ಡ ಗೆಲುವು ಎಂದಿದ್ದಾರೆ. […]

Continue Reading

ಠಾಣೆಯಲ್ಲಿ ರಾಸಲೀಲೆ ಕೇಸ್‌: ಅಮಾನತು ಬೆನ್ನಲ್ಲೆ DySP ರಾಮಚಂದ್ರಪ್ಪಗೆ ಬಿಗ್‌ ಶಾಕ್‌

ತುಮಕೂರು: ಪೊಲೀಸ್‌ ಠಾಣೆಗೆ ದೂರು ನೀಡಲು ಬಂದಿರುವ ಮಹಿಳೆ ಜೊತೆ ಡಿವೈಎಸ್‌ಪಿ ರಾಸಲೀಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ತುಮಕೂರು ಜಿಲ್ಲೆಯ ಮಧುಗಿರಿಯ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಬಂಧಿಸಲಾಗಿದೆ. 2026ರಲ್ಲಿ ನಿವೃತ್ತಿ ಹೊಂದಬೇಕಾಗಿದ್ದ ಡಿವೈಎಸ್‌ಪಿ ರಾಮಚಂದ್ರಪ್ಪ ಅವರಿಗೆ ಇದೆಲ್ಲಾ ಬೇಕಿತ್ತಾ ಎನ್ನುವಂತಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ರಾಮಚಂದ್ರಪ್ಪ ಹಾಗೂ ಮಹಿಳೆಯೊಬ್ಬರ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಪೊಲೀಸ್‌ ಠಾಣೆಯಲ್ಲೇ ಮಹಿಳೆಯನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದರು ಎನ್ನುವ ಆರೋಪದ ಮೇಲೆ ಡಿವೈಎಸ್‌ಪಿ ರಾಮಚಂದ್ರಪ್ಪರನ್ನು ಅಮಾನತು […]

Continue Reading

ಚಿತ್ತಾಪುರ ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ನಿಂಗಣ್ಣಾ ಹೆಗಲೇರಿ ಆಯ್ಕೆ

ಚಿತ್ತಾಪುರ: ತಾಲೂಕು ಕೋಲಿ ಸಮಾಜದ ಸಂಘಟನೆ, ಒಗ್ಗಟ್ಟು, ಐಕ್ಯತೆಯಿಂದ ಸಮಾಜದ ಎಲ್ಲರೂ ಸಾಮೂಹಿಕವಾಗಿ ಸಮಾಜಪರ ಕೆಲಸ ಮಾಡುವ ಹಾಗೂ ಸಮಾಜದಲ್ಲಿ ಸಾಮರಸ್ಯೆ ಮೂಡಿಸುವ ದೃಷ್ಟಿಯಿಂದ ಅಧ್ಯಕ್ಷರ ಮೂರು ವರ್ಷದ ಅಧಿಕಾರ ಅವಧಿಯನ್ನು ಇಬ್ಬರು ಆಕಾಂಕ್ಷಿಗಳಿಗೆ ಹಂಚಿಕೆ ಮಾಡಲು ನಿರ್ಣಯಿಸಿ ಮೊದಲ 18 ತಿಂಗಳ ಅವಧಿಗಾಗಿ ಡೋಣಗಾಂವ ಗ್ರಾಮದ ನಿಂಗಣ್ಣಾ‌ ದೇವಿಂದ್ರಪ್ಪಾ ಹೆಗಲೇರಿ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದ 18 ತಿಂಗಳ ಅಧಿಕಾರ ಅವಧಿಯನ್ನು ಕಾಟಮ್ಮದೇವರಹಳ್ಳಿ ಗ್ರಾಮದ ಶಿವಕುಮಾರ ಸಿದ್ರಾಮಪ್ಪ ಯಾಗಾಪೂರ ಅವರಿಗೆಂದು ಈ ಮೂಲಕ […]

Continue Reading

ಸರಳ ಸ್ವಭಾವದ ರಾಷ್ಟ್ರೀಯ ಸಂತ ಸಿದ್ದೇಶ್ವರ ಶ್ರೀಗಳು: ಶಿವರಾಜ ಅಂಡಗಿ

ಕಲಬುರಗಿ: ಆಧ್ಯಾತ್ಮದ ಬಗ್ಗೆ ಆಳವಾದ ಅಧ್ಯಯನ ಚಿಂತನೆ ನಡೆಸಿರುವ ಶ್ರೇಷ್ಠ ಅನುಭವಿ ಶ್ರೀಗಳು ಅತ್ಯಂತ ಸರಳ ಸಜ್ಜನಿಕೆಯ ಸಹಕಾರ ಮೂರ್ತಿಯ ಸಿದ್ದೇಶ್ವರ ಶ್ರೀಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು. ನಗರದ ಬಡೆಪೂರ ಕಾಲೋನಿಯ ಎಸ್‌ಬಿಐ ಗ್ರಾಹಕ ಸೇವಾ ಕೇಂದ್ರದಲ್ಲಿ ಸಿದ್ದೇಶ್ವರ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನದು, ತನ್ನದೆಂಬ ಮಮಕಾರ ತೊರಿದ ವಿಜಾಪೂರದ ಸಿದ್ದೇಶ್ವರ ಶ್ರೀಗಳು ಸಂತರಷ್ಟೇ ಅಲ್ಲದೇ ಜ್ಞಾನೋಪಸಾಕರು ಹೀಗಾಗಿ ಇವರಿಗೆ […]

Continue Reading

ಕಲಬುರಗಿ: ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ, ದಲ್ಲಾಳಿ

ಕಲಬುರಗಿ: ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆ ಕೊಡಿಸುವುದಾಗಿ 1 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ, ಮುಂಗಡವಾಗಿ 15 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ (ಎಫ್‌ಡಿಎ) ಹಾಗೂ ದಲ್ಲಾಳಿಯೊಬ್ಬರು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಂತೋಷ ರಾಮಚಂದ್ರ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ ಪೊಲೀಸರು ದಾಳಿ ಮಾಡಿ ಎಫ್‌ಡಿಎ ಶಿಲ್ಪಾ ಹಾಗೂ ದಲ್ಲಾಳಿ ದೇವಪ್ಪನನ್ನು ಬಂಧಿಸಿದ್ದಾರೆ. ಅಂಗನವಾಡಿ ಕೇಂದ್ರಗಳ ಸಹಾಯಕಿ ಹುದ್ದೆಗೆ ನೇಮಕಾತಿ ಅರ್ಜಿ […]

Continue Reading