ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 11 ಜನ ಸಾವು – ಅವಘಡ ಹೇಗಾಯ್ತು ?

ಮುಂಬೈ: ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಹರಿದು 11 ಜನ ಸಾವನ್ನಪ್ಪಿದ್ದಾರೆ ಎಂದು ನಾಸಿಕ್ ರೈಲ್ವೆ ವಿಭಾಗೀಯ ಆಯುಕ್ತ ಪ್ರವೀಣ್ ಗೆದಮ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಜಲಗಾಂವ್ ದಾಟುತ್ತಿದ್ದ ಪುಷ್ಪಕ್‌ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಪ್ರಯಾಣಿಕರಲ್ಲಿ ಭೀತಿ ಮೂಡಿಸಿತು. ಪ್ರಯಾಣಿಕರು ರೈಲಿನ ಚೈನ್‌ ಎಳೆದಿದ್ದಾರೆ. ರೈಲು ನಿಂತ ತಕ್ಷಣ ಪ್ರಯಾಣಿಕರು ಇಳಿದು ರೈಲ್ವೆ ಹಳಿ ಮೇಲೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಟ್ರ್ಯಾಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರ […]

Continue Reading

ಮೊಬೈಲ್​ನಲ್ಲಿ ಸಿಗ್ನಲ್ ಇಲ್ಲದಿದ್ದರೂ ಕರೆ ಮಾಡುವುದು ಹೇಗೆ ಗೊತ್ತೆ ?: ಕೇಂದ್ರ ಸರ್ಕಾರದಿಂದ ದೊಡ್ಡ ಹೆಜ್ಜೆ

ನಿಮ್ಮ ಮೊಬೈಲ್’ನಲ್ಲಿ ಸಿಗ್ನಲ್ ಇಲ್ಲದಿದ್ದರೂ ನೀವಿರುವ ಜಾಗದಲ್ಲಿ ಇತರೆ ಟೆಲಿಕಾಂ ಕಂಪನಿಯ ಸಿಗ್ನಲ್ ಇದ್ದರೆ ಕರೆ ಮಾಡಬಹುದು. ಯಾವುದೆ ಸಿಗ್ನಲ್ ಇಲ್ಲದಿದ್ದರು ಲಭ್ಯವಿರುವ ಇತರ ನೆಟ್‌ವರ್ಕ್‌ಗಳ ಸಹಾಯದಿಂದ ಕರೆ ಮಾಡುವ ಆಯ್ಕೆ ಇದಾಗಿದೆ. ಜಿಯೋ, ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಬಳಕೆದಾರರು ತಮ್ಮ ಸ್ವಂತ ಸಿಮ್ ನೆಟ್‌ವರ್ಕ್ ಇಲ್ಲದಿದ್ದರೂ ಅಲ್ಲಿ ಲಭ್ಯವಿರುವ ಯಾವುದೆ ನೆಟ್‌ವರ್ಕ್‌ನಿಂದ ಕರೆ ಮಾಡಬಹುದು. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ದೇಶದಲ್ಲಿ ಇಂಟ್ರಾ ಸರ್ಕಲ್ ರೋಮಿಂಗ್ (ICR) ಸೌಲಭ್ಯವನ್ನು ಪ್ರಾರಂಭಿಸಿದೆ. ಈ ನಿಬಂಧನೆಯ ಅಡಿಯಲ್ಲಿ ಎಲ್ಲಾ […]

Continue Reading

ಸೈಫ್‌ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಕೇಂದ್ರದ ವಶಕ್ಕೆ ?

ಭೋಪಾಲ್‌: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪಟೌಡಿ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳು ಶೀಘ್ರವೇ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಆಸ್ತಿಗಳ ಮೇಲೆ 2015ರಲ್ಲಿ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮಧ್ಯಪ್ರದೇಶ ಹೈಕೋರ್ಟ್‌ ತೆಗೆದುಹಾಕಿದೆ. ಇದರಿಂದಾಗಿ 1968ರ ಶತ್ರು ಆಸ್ತಿ ಕಾಯ್ದೆಯ ಅಡಿಯಲ್ಲಿ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌ ಡಿ.13 ರಂದು, 2017 ತಿದ್ದುಪಡಿ ಮಾಡಿದ ಶತ್ರು ಆಸ್ತಿ ಕಾಯ್ದೆ […]

Continue Reading

ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚಿಸಿದ ಬ್ಯಾಂಕ್ ಮ್ಯಾನೇಜರ್

ದಾವಣಗೆರೆ: ಬ್ಯಾಂಕ್ ಮ್ಯಾನೇಜರ್ ಒಬ್ಬ ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 49 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಜಗಳೂರಿನಲ್ಲಿ ನಡೆದಿದೆ. ಜಗಳೂರು ಪಟ್ಟಣದ ಕೆಎಲ್‍ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ ಈ ವಂಚನೆ ನಡೆದಿದೆ. ಬ್ಯಾಂಕ್‍ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅರವಿಂದ್ ರೆಡ್ಡಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಅರವಿಂದ್ ರೆಡ್ಡಿ 2024ರ ನವೆಂಬರ್‌ನಲ್ಲಿ ತನ್ನ 9 ಜನ ಸ್ನೇಹಿತರ ಹೆಸರಿನಲ್ಲಿ 84.5 ತೊಲಿ ನಕಲಿ ಬಂಗಾರ ಅಡವಿಟ್ಟು, ಬರೋಬ್ಬರಿ 49 […]

Continue Reading

ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಆಲಿಸಿದ ಮುಖಂಡರು

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ಮೋದಿಯವರ ಈ ವರ್ಷದ ಮೊದಲ ಮನ್​ ಕಿ ಬಾತ್​ ರೆಡಿಯೊ ಕಾರ್ಯಕ್ರಮದ 118ನೇ ಸಂಚಿಕೆ ಆಲಿಸಿದ ಮುಖಂಡರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರಧಾನಿ ಮೋದಿ ಅವರು ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸಿ ಅವರ ಶೌರ್ಯವನ್ನು ಯುವಕರು ಇನ್ನಷ್ಟು ಅರಿಯಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆಯಬೇಕು ಎಂದರು. 2025ರ ಮೊದಲ ಮನ್ […]

Continue Reading

ತಾಲೂಕು ಕೋಲಿ ಸಮಾಜ ಒಗ್ಗೂಡಿಸಿದ್ದು ಕಮಕನೂರ, ಒಡಕು ಮೂಡಿಸಿದ್ದು ಭೀಮಣ್ಣ ಸಾಲಿ

ಚಿತ್ತಾಪುರ: ಕೋಲಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಿ ಒಗ್ಗೂಡಿಸುವ ಕೆಲಸ ಕೋಲಿ ಗಂಗಾಮತ ಸಮಾಜದ ರಾಜ್ಯ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟಿಕಾರ್ ಹಾಗೂ ತಾಲೂಕು ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ ಹೇಳಿದರು.  ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದ ಹಿರಿಯ ಮುಖಂಡರೆನಿಸಿಕೊಂಡಿರುವ ಭೀಮಣ್ಣ ಸಾಲಿ ಅವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ತಮ್ಮ […]

Continue Reading

ವಾಚ್​​ಮನ್​​ಗೆ ಜಾಕ್​ಪಾಟ್: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ 60 ವರ್ಷದ ವೃದ್ಧ

ಕೆಲಸ ಮಾಡಿ ಗಳಿಸುತ್ತಿದ್ದ ಹಣದಲ್ಲಿ ಮನೆಗೆ ಕಳುಹಿಸಿ ಸ್ವಲ್ಪ ಹಣದಲ್ಲಿ ಲಾಟರಿ ಖರೀದಿ ಮಾಡುತ್ತಿದ್ದರಂತೆ. ಇತ್ತೀಚೆಗೆ ನಡೆದ ಹೊಸ ವರ್ಷದ ಬಿಗ್ ಟಿಕೆಟ್ ಗ್ರ್ಯಾಂಡ್ ಪ್ರೈಸ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರಂತೆ. ಸದ್ಯ ಈ ಲಾಟರಿಯ ಲಕ್ಕಿ ಟಿಕೆಟ್ ನಂಬರ್ ಘೋಷಣೆ ಮಾಡಿದ್ದು, ಡ್ರಾದಲ್ಲಿ ರಾಜಮಲಯ್ಯ ಅವರಿಗೆ ಮಿಲಿಯನ್ ದಿರ್ಹಮ್ (ಯುಎಇ ಹಣ) ಗೆದ್ದಿದ್ದಾರೆ. ಅದೃಷ್ಟ ಯಾವಾಗ ? ಹೇಗೆ ? ಎಲ್ಲಿಂದ ಬರುತ್ತದೆ ಎಂಬುದು ನಮಗೆ ತಿಳಿಯೊದಿಲ್ಲ. ಅದೃಷ್ಟ ಹಾಗೆ ಬಂದರೆ ರಾತ್ರೋರಾತ್ರಿ ಬದುಕು ಬದಲಾಯಿಸುತ್ತದೆ. […]

Continue Reading

ಸಮಾಜದ ಒಗ್ಗಟ್ಟಿಗೆ ಧಕ್ಕೆ ತರುವುದು ಅಕ್ಷಮ್ಯ: ಭೀಮಣ್ಣಾ ಸಾಲಿ

ಚಿತ್ತಾಪುರ: ಹಾಲಿನಲ್ಲಿ ಸಗಣಿ ಎಸೆಯುವವರಿಂದ ಜನರು ಎಚ್ಚರವಿರಬೇಕು. ತಮ್ಮ ಸ್ವಾರ್ಥಕ್ಕೆ ಸಮಾಜ ಒಡೆಯುವುದು, ಸಂಘಟನೆಗೆ ಮತ್ತು ಒಗ್ಗಟ್ಟಿಗೆ ಧಕ್ಕೆಯುಂಟು ಮಾಡುವುದು ಅಕ್ಷಮ್ಯ. ಅದು ಯಾರೇ ಮಾಡಿದರೂ ಸಮಾಜದ ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಹೇಳಿದರು. ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಶನಿವಾರ ತಾಲೂಕು ಕೋಲಿ ಸಮಾಜದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಚಿತ್ತಾಪುರ ಕೋಲಿ ಸಮಾಜದ […]

Continue Reading

ಸೈಫ್ ಅಲಿ ಖಾನ್‌ಗೂ ಮುನ್ನ ಶಾರುಖ್ ಖಾನ್ ಮೇಲೆ ದಾಳಿಗೂ ಸ್ಕೆಚ್ ?

ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಹಲ್ಲೆ ಮಾಡಿದ್ದ ದಾಳಿಕೋರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಸೈಫ್ ಒಬ್ಬರೆ ಅಲ್ಲ, ಶಾರುಖ್ ಖಾನ್ ಮೇಲೆ ಕೂಡ ದಾಳಿ ನಡೆಸಲು ಸ್ಕೆಚ್ ಹಾಕಲಾಗಿತ್ತು ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ. ಸೈಫ್‌ಗೆ ಚಾಕು ಇರಿದ ದಾಳಿಕೋರನನ್ನು ಮುಂಬೈ ಪೊಲೀಸರು ಬಂಧಿಸಿದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಸೈಫ್ ಅಲಿ ಖಾನ್‌ಗೆ ಹಲ್ಲೆ ಮಾಡುವ ಮುಂಚೆ ಶಾರುಖ್ ಮನೆಯ ಮುಂದೆ ಕೂಡ ಹಲವು ಬಾರಿ ಕಾಣಿಸಿಕೊಂಡಿದ್ದ ಎಂದು […]

Continue Reading

ಹೊಸ ಕಾರು, ಬೈಕ್ ಖರೀದಿಸುವವರಿಗೆ ಸರ್ಕಾರದಿಂದ ಶಾಕ್: ಫೆಬ್ರವರಿಯಿಂದ ರಿಜಿಸ್ಟ್ರೇಷನ್ ದರ ಏರಿಕೆ

ಬೆಂಗಳೂರು: ಮುಂದಿನ ತಿಂಗಳಿನಿಂದ ಹೊಸ ದ್ವಿಚಕ್ರ ವಾಹನ ಹಾಗೂ ಕಾರು ಖರೀದಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲಿದೆ. ಕೆಲವೇ ದಿನಗಳಲ್ಲಿ ಸೆಸ್ ಜಾರಿಯಾಗಲಿದ್ದು,ವಾಹನ ಖರೀದಿ ಮೇಲೆ ಮತ್ತಷ್ಟು ಹೊರೆ ಬಿಳಲಿದೆ. ಈಗಾಗಲೇ ಹೊಸ ವರ್ಷದಿಂದ ಅಟೊಮೊಬೈಲ್‌ ಕಂಪನಿಗಳು ತಮ್ಮ ದ್ವಿಚಕ್ರ ವಾಹನ ಮತ್ತು ಕಾರುಗಳ ದರವನ್ನು ಏರಿಕೆ ಮಾಡಿದೆ. ಈಗ ರಾಜ್ಯ ಸರ್ಕಾರ ಕಾರ್ಮಿಕ ಸಾಮಾಜಿಕ ಭದ್ರತೆ ನಿಧಿಗಾಗಿ ದ್ವಿಚಕ್ರ ವಾಹನ, ಸಾರಿಗೆತರ ಮೋಟಾರ್ ಕಾರುಗಳ ನೋಂದಣಿ ವೇಳೆ ತಲಾ 500 ರೂ. ಮತ್ತು 1,000 […]

Continue Reading