ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ

ಚಿತ್ತಾಪುರ: ಸೀಗಿ ಹುಣ್ಣಿಮೆಯಂದು ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವವು ಶ್ರದ್ಧಾಭಕ್ತಿ, ಸಂಭ್ರಮ, ಸಡಗರ, ಹರ್ಷೋದ್ಘಾರದೊಂದಿಗೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವಿಶ್ವೇಶ್ವರ ಪೂಜೆ, ಗುರುಪೂಜೆ, ದೇವಿಯ ಪಲ್ಲಕ್ಕಿ ಪೂಜೆ ಜರುಗಿತು, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತಹಸೀಲ್ದಾರ್ ಅವರು ಮಂಗಳಾರತಿ ಮಾಡಿ ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ […]

Continue Reading

ಶಾಲೆಗಳ ದಸರಾ ರಜೆ ವಿಸ್ತರಣೆಗೆ ಸರಕಾರಿ ನೌಕರರ ಸಂಘ ಸ್ವಾಗತ

ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆ ಅವಧಿ ಅ.18ರ ವರೆಗೆ ವಿಸ್ತರಿಸಿದ ಸರಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕಾ ನೀಡಿರುವ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯದಲ್ಲಿ ರಾಜ್ಯಾದಾದ್ಯಂತ ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ಸೆ.22 […]

Continue Reading

ಬಿಗ್‌ಬಾಸ್‌ ಶೋ ಬಂದ್‌: ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ

ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದ್ದು, ಅಲ್ಲಿ ನಡೆಯುವ ಬಿಗ್‌ಬಾಸ್‌ ಶೋ ಕೂಡ ಬಂದ್‌ ಆಗಿದೆ. ಬಿಗ್‌ಬಾಸ್‌ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಅಧಿಕೃತವಾಗಿ ಬಿಗ್‌ಬಾಸ್‌ ಮನೆಗೆ ಬೀಗ ಹಾಕಲಾಗಿದೆ. ಸ್ಪರ್ಧೆಯಲ್ಲಿದ್ದ ಎಲ್ಲರನ್ನೂ ರಾತ್ರಿ ಮನೆಯಿಂದ ಹೊರಹಾಕಲಾಗಿದೆ. ಸ್ವತಃ ತಹಸೀಲ್ದಾರ್‌ ತೇಜಸ್ವಿನಿಯವರು ಮುಂದೆ ನಿಂತು ಸ್ಪರ್ಧಿಗಳನ್ನು ಹೊರಗೆ ಕರೆತಂದಿದ್ದಾರೆ. ಬಿಗ್‌ಬಾಸ್‌ ದಿಢೀರ್‌ ಸ್ಥಗಿತದಿಂದ ಸ್ಪರ್ಧಿಗಳು, ತಂತ್ರಜ್ಞರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಮನೆಗೆ ವಾಪಸ್‌ ಆಗುವಂತಾಗಿದೆ. ಆರು ತಿಂಗಳ ಕಾಲ ಮೂರು […]

Continue Reading

ಜಾಲಿವುಡ್‌ ಸ್ಟುಡಿಯೋಸ್‌ಗೆ ಬಿತ್ತು ಬೀಗ: ಬಿಗ್‌ ಬಾಸ್‌ ಸ್ಥಗಿತಕ್ಕೆ ಸೂಚನೆ

ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ನಿಯಮ ಮೀರಿ ಜಾಲಿವುಡ್‌ ಸ್ಟುಡಿಯೋಸ್‌ ನಡೆಸುತ್ತಿರುವ ಬಗ್ಗೆ ನೋಟಿಸ್‌ ನೀಡಲಾಗಿತ್ತು. ಆದರೆ ಯಾವುದೆ ಪಾಲನೆಯಾಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸಂಜೆ ಸ್ಟುಡಿಯೋಸ್‌ಗೆ ಭೇಟಿ ನೀಡಿದರು. ರಾಮನಗರ ತಹಸೀಲ್ದಾರ್‌ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್‌ ಒಳಗೆ ಪರಿಶೀಲನೆ ನಡೆಸಿದರು. ನೋಟಿಸ್ ತೆಗೆದುಕೊಳ್ಳಲು […]

Continue Reading

ವಾಟ್ಸಾಪ್​​ನಲ್ಲಿ ಮದುವೆ ಇನ್ವಿಟೇಶನ್ ಬಂದರೆ ಓಪನ್ ಮಾಡಬೇಡಿ, ಖಾತೆಯಲ್ಲಿರುವ ಅಷ್ಟೂ ಹಣ ಹೋಗಬಹುದು ಎಚ್ಚರ

ಗುರುಗ್ರಾಮ: ತಂತ್ರಜ್ಞಾನ ಬದಲಾದಂತೆ ಸೈಬರ್ ಅಪರಾಧಿಗಳು ಕೂಡ ಹಣ ವಸೂಲಿಗೆ ಹಲವು ಹೊಸ ಟ್ರಿಕ್​ ಅಳವಡಿಸಿಕೊಳ್ಳುತ್ತಿದ್ದಾರೆ. ಜನರಿಗೆ ಅನುಮಾನ ಬರದಂತೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ವಾಟ್ಸಾಪ್​ನಲ್ಲಿ ಬಂದ ಮದುವೆ ಇನ್ವಿಟೇಷನ್ ಓಪನ್ ಮಾಡಿ ವ್ಯಕ್ತಿಯೊಬ್ಬ 97 ಸಾವಿರ ರೂ. ಕಳೆದುಕೊಂಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಪರಿಚಯ ಇರುವವರಿಂದ ಅಲ್ಲ, ಅಪರಿಚಿತ ದೂರವಾಣಿ ಸಂಖ್ಯೆಯಿಂದ ಮದುವೆ ಆಮಂತ್ರಣ ಬಂದರೆ ಅದನ್ನು ಓಪನ್ ಮಾಡಲೇಬೇಡಿ. ಅಂತಹ ಲಿಂಕ್​ಗಳನ್ನು ಓಪನ್ ಮಾಡಿದರೆ ನಿಮಗೆ ಅರಿವಿಲ್ಲದೆ ಸೈಬರ್ ವಂಚಕರು ನಿಮ್ಮ ಖಾತೆಯಿಂದ ಹಣ […]

Continue Reading

ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ: ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶಾಕ್‌ ಕೊಟ್ಟಿದೆ. 2025-26ನೇ ಸಾಲಿನ ಪರೀಕ್ಷಾ ಶುಲ್ಕ 5% ಏರಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಆದೇಶ ಹೊರಡಿಸಿದೆ. ಅದರನ್ವಯ 2025-26ನೇ ಸಾಲಿನಲ್ಲಿ ನಡೆಯಲಿರುವ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇ.5 ರಷ್ಟು ಸೇರಿಸಿ ಶುಲ್ಕ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 2025-26ನೇ ಸಾಲಿನ SSLC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಪರಿಷ್ಕೃತ ಪರೀಕ್ಷಾ ಶುಲ್ಕ * ಪ್ರಥಮ ಬಾರಿ […]

Continue Reading

2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿದ ಬಳಿಕ ಅಲರ್ಟ್‌ ಆದ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಿ ಕೆಮ್ಮಿನ ಸಿರಪ್ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ. 2-5 ವರ್ಷದ ಮಕ್ಕಳಿಗೆ ತಜ್ಞರ ಸಲಹೆ ಮೇರೆಗೆ ಔಷಧಿ ನೀಡಬೇಕು. ಅಲ್ಲದೆ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಔಷಧಿ ನೀಡಬೇಕು. ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಬೇಕು. […]

Continue Reading

ಅಭಿವೃದ್ಧಿ, ನಿರ್ಮಾಣ ಕ್ಷೇತ್ರಕ್ಕೆ ವಾಸ್ತುಶಿಲ್ಪಿಗಳ ಕೊಡುಗೆ ಅಪಾರ

ಕಲಬುರಗಿ: ಯೋಜನೆಯುತ ಕಾರ್ಯದಿಂದ ಯಶಸ್ಸು ಸಾಧ್ಯವಿದೆ. ಸೂಕ್ತ ವಿನ್ಯಾಸ, ಯೋಜನೆ ಮತ್ತು ಮೇಲ್ವಿಚಾರಣೆಯ ಕಾರ್ಯ ಮಾಡುವ ಮೂಲಕ ಯಾವುದೆ ರೀತಿಯ ಕಟ್ಟಡ, ನಿರ್ಮಾಣ ಕಾರ್ಯಗಳನ್ನು ಮಾಡುವ ವಾಸ್ತುಶಿಲ್ಪಿಗಳ ಕಾರ್ಯ ಪ್ರಮುಖವಾಗಿದೆ. ಇಂದು ನಾವು ಕಾಣುವ ಅದ್ಭುತವಾದ ಕಟ್ಟಡಗಳ ಹಿಂದೆ ಅವರ ಶ್ರಮ ಮರೆಯುವಂತಿಲ್ಲ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಬೆಳಿಗ್ಗೆ ಜರುಗಿದ ‘ವಿಶ್ವ ಆರ್ಕಿಟೆಕ್ಟ್ ದಿನಾಚರಣೆ’ […]

Continue Reading

ಜೋಡೆತ್ತು ಮಾಡ್ತಾ ನಮಗೂ ಜೋಡೆತ್ತು ಸಿಕ್ತು: ಮದ್ವೆ ಬಗ್ಗೆ ಚಿಕ್ಕಣ್ಣ ಫಸ್ಟ್ ರಿಯಾಕ್ಷನ್

ಹಾಸ್ಯ ನಟ ಚಿಕ್ಕಣ್ಣ ಸೀಕ್ರೆಟಾಗಿ ಮದ್ವೆ ನಿಶ್ಚಯ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಹೂ ಮುಡಿಸುವ ಶಾಸ್ತ್ರ ನಡೆದು ಫೋಟೋಗಳು ವೈರಲ್ ಆಗಿದ್ದವು. ʻಜೋಡೆತ್ತುʼ ಸಿನಿಮಾ ಚಿತ್ರಕ್ಕೆ ಸಿದ್ಧತೆ ಮಾಡಿಕೊಂಡಿರುವ ಚಿಕ್ಕಣ್ಣ, ಮತ್ತೊಂದು ಕಡೆ ಮದ್ವೆ ತಯಾರಿ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ನನ್ನ ಮದ್ವೆ ಕೂಡ ಆಗಿರುತ್ತೆ ಎಂದು ಚಿಕ್ಕಣ್ಣ ಹೇಳಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾ ಅವರನ್ನು ಚಿಕ್ಕಣ್ಣ ವರಿಸಲಿದ್ದು, ಇದು ಅರೇಂಜ್‌ ಮ್ಯಾರೇಜ್ […]

Continue Reading

ಮುಳ್ಳು ಮುಳ್ಳಾಗಿರುವ ಈ ಒಂದು ಹಣ್ಣಿಗೆ ಕ್ಯಾನ್ಸರ್, ಹೃದಯಾಘಾತ ಬರದಂತೆ ತಡೆಯುವ ಶಕ್ತಿಯಿದೆ

ಪ್ರಕೃತಿಯು ನಮಗೆ ಹಲವು ರೀತಿಯ ರುಚಿಕರವಾದ ಆಹಾರಗಳನ್ನು ನೀಡುತ್ತದೆ. ಅದರಲ್ಲಿಯೂ ತರಕಾರಿ ಮತ್ತು ಹಣ್ಣುಗಳು ಯಥೇಚ್ಛವಾಗಿ ಲಭ್ಯವಿರುತ್ತದೆ. ಇವೆಲ್ಲವೂ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯ ಪ್ರಯೋಜನಗಳು ಕೂಡ ನೀಡುತ್ತದೆ ಎಂಬುದು ತಿಳಿದ ವಿಚಾರ. ಇಂತಹ ಒಂದು ಹಣ್ಣುಗಳಲ್ಲಿ ರಂಬುಟಾನ್ ಕೂಡ ಒಂದು. ಇದು ಲಿಚಿಯನ್ನು ಹೋಲುವ ಹಣ್ಣಾಗಿದ್ದು ಹೆಚ್ಚಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಂಡುಬರುತ್ತದೆ. ಲಿಚಿಯನ್ನು ಹೋಲುವ ಈ ಕೆಂಪು ಬಣ್ಣದ ಹಣ್ಣು ನೀವು ನಂಬಲು ಸಾಧ್ಯವಾಗದಷ್ಟು ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿದೆ. ಈ […]

Continue Reading