ಕಾಂತಾರ ಹೊಸ ದಾಖಲೆ: ಕರ್ನಾಟಕದಲ್ಲಿ 250 ಕೋಟಿ ಗಡಿ ದಾಟಿದ ಕಲೆಕ್ಷನ್
ಕಾಂತಾರ ಚಾಪ್ಟರ್-1 ಸಿನಿಮಾ ಕರ್ನಾಟಕದ ಬಾಕ್ಸಾಫೀಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಕರ್ನಾಟಕದಲ್ಲಿ ಇದುವರೆಗಿನ ಹೈಯೆಸ್ಟ್ ಕಲೆಕ್ಷನ್ ಸಿನಿಮಾದ ಇತಿಹಾಸವನ್ನ ಧೂಳೀಪಟ ಮಾಡಿದೆ ಕಾಂತಾರ ಚಿತ್ರ. ಕರ್ನಾಟದಲ್ಲಿ ಭರ್ತಿ 250+ ಕೋಟಿ ಕಲೆಕ್ಷನ್ ಮಾಡಿ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ ಕಾಂತಾರ. ಅಲ್ಲದೇ 250 ಕೋಟಿ ಗಡಿ ದಾಟಿದ ಮೊದಲ ಕನ್ನಡ ಚಿತ್ರವಾಗಿ ಕಾಂತಾರ ದಾಖಲೆ ನಿರ್ಮಿಸಿದೆ. ಕರ್ನಾಟಕವೊಂದರಲ್ಲೇ ಕಾಂತಾರ ಗಳಿಕೆ ಇದುವರೆಗೆ 268 ಕೋಟಿ ರೂ.ಗಳಷ್ಟಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಇದುವರೆಗೆ ಕರ್ನಾಟಕದಲ್ಲಿ ಯಾವುದೇ ಚಿತ್ರ 200ರ ಗಡಿ ದಾಟಿರಲಿಲ್ಲ. ಕೆಜಿಎಫ್2 ಚಿತ್ರವೂ ಕರ್ನಾಟಕದಲ್ಲಿ 200 ಕೋಟಿ ಕಲೆಕ್ಷನ್ ಮೀರಿರಲಿಲ್ಲ. ಇದೀಗ ಕರ್ನಾಟಕದ ಚಲನಚಿತ್ರ ಇತಿಹಾಸದಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಕಂಡ ಏಕೈಕ ಚಿತ್ರ `ಕಾಂತಾರ ಚಾಪ್ಟರ್ 1′ ಆಗಿದೆ.
ಜಾಗತಿಕವಾಗಿಯೂ ಗಳಿಕೆಯಲ್ಲಿ ಭಾರೀ ಮುನ್ನುಗ್ಗುತ್ತಿರುವ ಕಾಂತಾರ ಇದುವರೆಗೆ 867 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ ಸೆನ್ಷೇಷನ್ ಮುಂದುವರೆದಿದ್ದು ಅ.31 ರಿಂದ ಅಧಿಕೃತ ಇಂಗ್ಲೀಷ್‌ಗೂ ಡಬ್ ಆಗಿ ರಿಲೀಸ್ ಆಗಿದೆ. ಇದುವರೆಗೆ ವಿದೇಶಿ ಮಾರುಕಟ್ಟೆಗಳಲ್ಲಿ 116 ಕೋಟಿ+ ಗಳಿಕೆ ಮಾಡಿ ಮುನ್ನುಗ್ಗುತ್ತಿದ್ರೆ ಹಿಂದಿ ವಿಭಾಗದಲ್ಲಿ 233 ಕೋಟಿ ಗಳಿಕೆ ಕಂಡಿದೆ. ಇನ್ನು ಆಂಧ್ರ ತೆಲಂಗಾಣದಲ್ಲಿ 198 ಕೋಟಿ, ತಮಿಳುನಾಡಿನಲ್ಲಿ 82 ಕೋಟಿ , ಕೇರಳದಲ್ಲಿ 60 ಕೋಟಿ ಕಲೆಕ್ಷನ್ ಮಾಡಿದೆ. ಅಲ್ಲದೇ ಇಂದಿನಿಂದ ಓಟಿಟಿಯಲ್ಲೂ ಕಾಂತಾರಾ ಚಾಪ್ಟರ್ 1 ಸಿನಿಮಾ ಲಭ್ಯವಾಗಿದೆ.