ಜನಗಣತಿಗೆ ಕೇಂದ್ರ ಅಧಿಸೂಚನೆ- ಜಾತಿ, ಕೋವಿಡ್ ಲಸಿಕೆ ವಿವರ: 40 ಪ್ರಶ್ನೆಗಳು ಇಲ್ಲಿದೆ

ಸುದ್ದಿ ಸಂಗ್ರಹ ನವದೆಹಲಿಮುಂಬರುವ ಜನಗಣತಿಯ ಜನಸಂಖ್ಯಾ ಗಣತಿ ಹಂತದಲ್ಲಿ ಸಾರ್ವಜನಿಕರನ್ನು ಕೇಳಲಾಗುವ 40 ಪ್ರಶ್ನೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪ್ರಶ್ನಾವಳಿಯಲ್ಲಿ ವ್ಯಕ್ತಿಯ ಜಾತಿ ಮತ್ತು ಕೋವಿಡ್-19 ಲಸಿಕೆ ಪಡೆದ ಸ್ಥಳದ ವಿವರಗಳೂ ಸೇರಿವೆ. ಒಬ್ಬ ವ್ಯಕ್ತಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರೆ ಎಂಬ ವಿವರಗಳ ಜೊತೆಗೆ ಅವರ ನಿರ್ದಿಷ್ಟ ಜಾತಿಯ ಮಾಹಿತಿ ಕೇಳುವ ಪ್ರಶ್ನೆಗಳು ಒಳಗೊಂಡಿದೆ. ಲಡಾಖ್ ಹಾಗೂ ಜಮ್ಮು- ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮದಿಂದ ಆವೃತವಾಗಿರುವ […]

Continue Reading

ಚಿತ್ತಾಪುರ: ಜೂಜಾಟದ ಆರೋಪದಡಿ 39 ಜನರ ವಿರುದ್ಧ ಎಫ್‌ಐಆರ್‌

ಸುದ್ದಿ ಸಂಗ್ರಹ ಚಿತ್ತಾಪುರಪಟ್ಟಣ ಸೇರಿದಂತೆ ತಾಲೂಕಿನ ಭಾಗೋಡಿ, ಮುಡಬೂಳ, ಸೂಲಹಳ್ಳಿ ಗ್ರಾಮಗಳಲ್ಲಿ ಇಸ್ಪಿಟ್, ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌ ಆಡಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆ.2ರಿಂದ 11ವರೆಗೆ ಒಟ್ಟು 39 ಆರೋಪಿತರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು 8 ಪ್ರಕರಣಗಳು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಜೂಜಾಟ, ಬೆಟ್ಟಿಂಗ್‌ ತಡೆಗಟ್ಟಲು ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ, ಸಿಬ್ಬಂದಿ ಬಸವರಾಜ, ಅಜರುದ್ದೀನ್, ದತ್ತಾತ್ರೆಯ, ಅಯ್ಯಣ್ಣ, ಅನಿಲಕುಮಾರ, ಆನಂದ್ ಪಾಲ್ಗೊಂಡಿದ್ದರು.

Continue Reading

ಕಲಬುರಗಿ: 4.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಸುದ್ದಿ ಸಂಗ್ರಹ ಕಲಬುರಗಿನಗರದ ಕುಸನೂರು ರಸ್ತೆಯ ಅನ್ನಪೂರ್ಣೇಶ್ವರಿ ಕಾಲೊನಿಯಲ್ಲಿ ಮನೆಯ ಬಾಗಿಲಿನ ಕೊಂಡಿ ಮುರಿದ ಕಳ್ಳರು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯುಟಿವ್‌ ಆಗಿರುವ ಪ್ರಸನ್ನ ಪುರಾಣಿಕ (39) ಚಿನ್ನಾಭರಣ ಕಳೆದುಕೊಂಡವರು. ಅವರು ಅನ್ನಪೂರ್ಣೇಶ್ವರಿ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ನೆಲೆಸಿದ್ದರು. ತಾಯಿ ಆಗಸ್ಟ್‌ 7ರಂದು ಭಜನಾ ಮೇಳದೊಂದಿಗೆ ಪ್ರವಾಸಕ್ಕೆ ಹೋಗಿದ್ದರು. ನಾನು ಆಗಸ್ಟ್‌ 9ರಂದು ಸಂಜೆ ಸೇಡಂನಲ್ಲಿರುವ ತಮ್ಮನ ಭೇಟಿ ಮಾಡಲು ಹೋಗಿದ್ದೆ. ಆಗಸ್ಟ್‌ 10ರಂದು ರಾತ್ರಿ 8.30ರ ಸುಮಾರಿಗೆ ಬಂದು ನೋಡಿದಾಗ […]

Continue Reading

ಸೋಷಿಯಲ್‌ ಮೀಡಿಯಾ ಮೂಲಕ ಪಾಕ್ ಜೊತೆ ಸಂಪರ್ಕ ಶಂಕೆ: ಇಬ್ಬರು ವಶಕ್ಕೆ

ಸುದ್ದಿ ಸಂಗ್ರಹ ಕಲಬುರಗಿಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಇಬ್ಬರನ್ನು ಉತ್ತರ ಪ್ರದೇಶದ ಆ್ಯಂಟಿ ಟೆರರ್ ಸ್ಕ್ವಾಡ್ ಮತ್ತು ಕಲಬುರಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಉತ್ತರ ಪ್ರದೇಶ ಮೂಲದ ಸಮೀರ್ ಮತ್ತು ಸಲ್ಮಾನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಉತ್ತರ ಪ್ರದೇಶದ ನಿವಾಸಿ ವಿಳಾಸ ಹೊಂದಿದ್ದಾರೆ. ವಾಟ್ಸ್‌ಆಪ್ ಕಾಲ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು […]

Continue Reading

ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ: ಸೆ.9 ಕೊನೆಯ ದಿನ

ಸುದ್ದಿ ಸಂಗ್ರಹ ಬೆಂಗಳೂರುರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 18 ರಿಂದ ಸೆಪ್ಟೆಂಬರ್ 9ರವರೆಗೆ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಅವಧಿ: ಆಗಸ್ಟ್ 18ರಿಂದ ಸೆಪ್ಟೆಂಬರ್ 9ರವರೆಗೆ ಅರ್ಜಿ ಸಲ್ಲಿಕೆ, ಹುದ್ದೆಗಳ […]

Continue Reading

ಜೊಮ್ಯಾಟೊ ಹೈಫರ್‌ಪ್ಯೂರ್ ಘಟಕದ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳ ದಾಳಿ

ಸುದ್ದಿ ಸಂಗ್ರಹ ಬೆಂಗಳೂರುಜೊಮ್ಯಾಟೊ ಹೈಫರ್‌ಪ್ಯೂರ್ ಘಟಕದ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಹಾರ ಉತ್ಪನ್ನಗಳ ಪರಿಶೀಲನೆ ನಡೆಸಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲ್ಯಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಬೆಂಗಳೂರಿನಲ್ಲಿ ಕೈಗೊಂಡ ತಪಾಸಣೆ ವೇಳೆ ಆಹಾರ ಪದಾರ್ಥಗಳು, ಮಾಂಸ ಮತ್ತು ಮೀನನ್ನು ನಗರದ ಜೊಮ್ಯಾಟೊ ಹೈಫರ್‌ಪ್ಯೂರ್ ಘಟಕದಿಂದ ಸರಬರಾಜು ಆಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಆಗಸ್ಟ್ 11 ರಂದು […]

Continue Reading

ಚಿತ್ತಾಪುರದಲ್ಲಿ ಡಿಕೆ ಶಿವಕುಮಾರ್ ಹೆಸರಿನಲ್ಲಿ ವಂಚನೆ, ಮಹಿಳೆಗೆ ಆಭರಣ ವಾಪಸ್

ಸುದ್ದಿ ಸಂಗ್ರಹ ಚಿತ್ತಾಪುರಡಿ.ಕೆ ಶಿವಕುಮಾರ್‌ ಅವರು ಆಧಾರ್ ಕಾರ್ಡ್ ಪರಿಗಣಿಸಿ ಸಾಲ ಕೊಡುತ್ತಿದ್ದಾರೆಂದು ನಂಬಿಸಿ ಮಹಿಳೆಯೊಬ್ಬರಿಂದ 10 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದ್ದ ವಂಚಕರನ್ನು ಚಿತ್ತಾಪುರ ಪೊಲೀಸರು 8 ತಿಂಗಳ ನಂತರ ಬಂಧಿಸಿದ್ದಾರೆ. ಆರೋಪಿತರನ್ನು ಚಿತ್ತಾಪುರದ ಮಹಮ್ಮದ್ ಮದರಸಾ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಜನವರಿ 7 ರಂದು ಅಲ್ಲೂರ್(ಬಿ) ಗ್ರಾಮದ ಶರಣಮ್ಮ ಅವರು ಚಿತ್ತಾಪುರ ಬಸ್ ನಿಲ್ದಾಣದಲ್ಲಿ ಕೂತಿದ್ದರು. ಈ ವೇಳೆ ಮಹಿಳೆಯರಿಗೆ ಆಧಾರ್ ಕಾರ್ಡ್ ನೋಡಿ ಸಾಲ ಕೊಡುತ್ತಿದ್ದಾರೆಂದು ನಂಬಿಸಿದ್ದರು. […]

Continue Reading

‘ವಂದೇ ಮಾತರಂ’ಗೆ ಅಪಮಾನ ಮಾಡಿದ್ರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ

ಸುದ್ದಿ ಸಂಗ್ರಹ ನವದೆಹಲಿವಂದೇ ಮಾತರಂ ಗೀತೆಯನ್ನು ಅವಮಾನಿಸಿದರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ ರಾಷ್ಟ್ರಗೀತೆ ‘ಜನ ಗಣ ಮನ’ದಂತೆ ಸಮಾನವಾದ ಕಾನೂನು ಸ್ಥಾನಮಾನ ನೀಡುವ ಹಾಗೂ ಗೀತೆಗೆ ಅವಮಾನ ಅಥವಾ ಅಡ್ಡಿಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ (ತಿದ್ದುಪಡಿ) ಮಸೂದೆ, 2026’ ಸಂಸತ್ತಿನಲ್ಲಿ ಈಚೆಗೆ ಅಂಗೀಕಾರಗೊಂಡಿತ್ತು. ಲೋಕಸಭೆಯು ಜುಲೈ 30 ರಂದು ಮಸೂದೆ ಅಂಗೀಕರಿಸಿತ್ತು. ರಾಜ್ಯಸಭೆಯು ಒಂದು ದಿನ ಮುಂಚಿತವಾಗಿ ಅದನ್ನು […]

Continue Reading

ಚಿಕ್ಕಮಗಳೂರು ಡಿಸಿ ಹೆಸರಲ್ಲಿ ಸೈಬರ್ ವಂಚಕರ ಗಾಳ: 50,000 ಹಣ ಕಳೆದುಕೊಂಡ ಆಹಾರ ಇಲಾಖೆ ಅಧಿಕಾರಿ

ಸುದ್ದಿ ಸಂಗ್ರಹ ಚಿಕ್ಕಮಗಳೂರುಇಲ್ಲಿನ ಡಿಸಿ ಭನ್ವರ್ ಸಿಂಗ್ ಮೀನಾ ಹೆಸರು, ಫೋಟೋ ಬಳಸಿ ಆಹಾರ ಇಲಾಖೆ ಅಧಿಕಾರಿಯೊಬ್ಬರಿಗೆ ಸೈಬರ್‌ ವಂಚಕರು 50,000 ರೂ. ವಂಚಿಸಿದ ಪ್ರಕರಣ ನಡೆದಿದೆ. ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಅವರಿಗೆ ತುರ್ತು ಹಣ ಹಾಕುವಂತೆ ವಂಚಕರು ಮೆಸೇಜ್‌ ಮಾಡಿದ್ದರು. ಇದನ್ನು ನಂಬಿದ್ದ ಅಧಿಕಾರಿ, ವಂಚಕ ಕಳಿಸಿದ್ದ ಅಕೌಂಟ್‌ ನಂಬರ್‌ಗೆ 50,000 ರೂ. ಹಣ ಹಾಕಿದ್ದರು. ವಂನೆಯಾಗಿರೋದು ತಿಳಿದ ಬಳಿಕ ಸೆನ್ ಠಾಣೆಯಲ್ಲಿ ಅವರು ದೂರು […]

Continue Reading

ಕಲಬುರಗಿ: ಬರ ಪರಿಸ್ಥಿತಿ ಅವಲೋಕಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಸುದ್ದಿ ಸಂಗ್ರಹ ಕಲಬುರಗಿಮಳೆಯ ಕೊರತೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಾನಿಗೀಡಾದ ಬೆಳೆಗಳನ್ನು ಗೃಹ ಹಾಗೂ ಬರ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವೀಕ್ಷಿಸಿ ರೈತರು, ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಾಲೂಕಿನ ಅವರಾದ (ಬಿ) ಗ್ರಾಮದ ಹೊರವಲಯದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಚಿವರು ಮಳೆಯಿಲ್ಲದೆ ಮುರುಟಿ ಹೋಗುತ್ತಿದ್ದ ತೊಗರಿ ಮತ್ತು ಸೋಯಾ ಬೆಳೆಗಳನ್ನು ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಅಷ್ಟೆ ಅಲ್ಲದೆ ಎಲ್ ನಿನೊ ಪರಿಣಾಮದಿಂದಾಗಿ ರಾಜ್ಯದಾದ್ಯಂತ ಬರಗಾಲ ಆವರಿಸಿದೆ. ಎನ್ ಡಿಆರ್ ಎಫ್ […]

Continue Reading