3,000 ರೂ.ಗೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಈಗ ಸಚಿವೆ

ಸುದ್ದಿ ಸಂಗ್ರಹ ಕೋಲ್ಕತ್ತಾಪಶ್ಚಿಮ ಬಂಗಾಳದಲ್ಲಿ ತಿಂಗಳಿಗೆ 3,000 ರೂ. ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಬಡತನವನ್ನು ಮೆಟ್ಟಿ ನಿಂತು ಶಾಸಕಿಯಾಗಿ ಆಯ್ಕೆಯಾಗಿ, ಇದೀಗ ಸುವೇಂದು ಅಧಿಕಾರಿ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ತಿಂಗಳಿಗೆ ಕೇವಲ 3,000 ರೂ. ಸಂಬಳಕ್ಕೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿ ಇದೀಗ ಸುವೇಂದು ಸರ್ಕಾರದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ಣಾಯಕ ಗೆಲುವು ಸಾಧಿಸಿದ್ದು, […]

Continue Reading

ಅರಿಶಿನಕುಂಟೆ ಫ್ಲೈ ಓವರ್ ಮೇಲೆ 4 ಕಾರುಗಳ ನಡುವೆ ಸರಣಿ ಅಪಘಾತ

ಸುದ್ದಿ ಸಂಗ್ರಹ ಬೆಂಗಳೂರುನೆಲಮಂಗಲ ನಗರದ ಅರಿಶಿನಕುಂಟೆ ಫ್ಲೈ ಓವರ್ ಮೇಲೆ ಘಟನೆ ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ ನಡೆದಿದೆ. ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ನಾಲ್ಕು ಕಾರುಗಳ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಬೇರೆಡೆಗೆ ತೆರಳಿದ್ದವರು ಬೆಂಗಳೂರು ಕಡೆ ಬರುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

4 ಐಪಿಎಲ್‌ ಆವೃತ್ತಿ: ವಿಶಿಷ್ಟ ದಾಖಲೆ ಬರೆದ ಕೊಹ್ಲಿ

ಸುದ್ದಿ ಸಂಗ್ರಹ ಅಹಮದಾಬಾದ್ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ. ಸತತ 4 ಐಪಿಎಲ್‌ ಆವೃತ್ತಿಯಲ್ಲಿ 600 ರನ್‌ಗಳ ಗಡಿ ದಾಟಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಿದ್ದಾರೆ. ಈ ಪಂದ್ಯದಲ್ಲಿ 25 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕೊಹ್ಲಿ ಅಂತಿಮವಾಗಿ ಅಜೇಯ 75 ರನ್‌ (42 ಎಸೆತ, 9 ಬೌಂಡರಿ, 3 ಸಿಕ್ಸ್‌) ಹೊಡೆದು ಎರಡನೇ ಬಾರಿ ಆರ್‌ಸಿಬಿಗೆ ಕಪ್‌ ಗೆದ್ದುಕೊಟ್ಟಿದ್ದಾರೆ. ಯಾವ ವರ್ಷ ಎಷ್ಟು ರನ್‌ ?2023: 14 […]

Continue Reading

ಮರಕ್ಕೆ ಕಾರು ಡಿಕ್ಕಿ: ದಸ್ತಾಪುರ ಗ್ರಾಮದ ಇಬ್ಬರು ಸಾವು

ಸುದ್ದಿ ಸಂಗ್ರಹ ಕಾಳಗಿತಾಲೂಕಿನ ವಚ್ಚಾ–ಮತ್ತಿಮೂಡ ಕ್ರಾಸ್ ನಡುವಿನ ರಾಜ್ಯ ಹೆದ್ದಾರಿ ಪಕ್ಕದ ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಒಳಗಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿದ್ದಾನೆ. ಕಾರಿನೊಳಗಿದ್ದ ಮೂವರು ಚಿಂಚೋಳಿ ತಾಲೂಕಿನವರಾಗಿದ್ದು, ದಸ್ತಾಪುರ ಗ್ರಾಮದ ಶಿವರಾಜ ಮಾರುತಿ ಓಂಕಾರ (24), ಅಣವಾರ ಗ್ರಾಮದ ಸಚಿನ ರಾಮಲಿಂಗ (30) ಮೃತರು. ಹೂವಿನಬಾವಿ (ಬಾಪುನಗರ) ಗ್ರಾಮದ ಶ್ರೀಕಾಂತ ಸುರೇಶ ಗಾಯಾಳು. ಕಾರು ಮರಕ್ಕೆ ಡಿಕ್ಕಿ ಹೊಡೆದ ಭೀಕರತೆ ಎಷ್ಟಿತ್ತೆಂದರೆ ಕಾರಿನ ಹಿಂಭಾಗದ ಚಕ್ರಗಳು ನೇತಾಡುತ್ತಿದ್ದವು. ಎಷ್ಟೊ ಸಮಯದ ವರೆಗೆ […]

Continue Reading

ಕಲಬುರಗಿ–ಬೆಂಗಳೂರು ವಿಮಾನಯಾನ ಪುನರಾರಂಭ

ಸುದ್ದಿ ಸಂಗ್ರಹ ಕಲಬುರಗಿಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ಮತ್ತು ಬೆಂಗಳೂರು ನಡುವಣ ನಿತ್ಯ ವಿಮಾನ ಸೇವೆಗೆ ಜೂನ್‌ 10ರಿಂದ ಮತ್ತೆ ಚಾಲನೆ ಸಿಗಲಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸ್ಟಾರ್‌ ಏರ್‌ ಸಂಸ್ಥೆಯು, ನಿತ್ಯ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.10ಕ್ಕೆ ಕಲಬುರಗಿ ತಲುಪಲಿದೆ. ಸಂಜೆ 7.40ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 8.50ಕ್ಕೆ ಬೆಂಗಳೂರು ತಲುಪಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಜೂನ್ 10ರಿಂದ ಬುಕಿಂಗ್‌ ಅವಕಾಶ ನೀಡಿದೆ. ಈ ನಿರ್ಧಾರವು […]

Continue Reading

ವಿಶ್ವದಲ್ಲೆ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ಬಂಡಾ: 75 ವರ್ಷಗಳ ದಾಖಲೆ ಬ್ರೇಕ್

ಸುದ್ದಿ ಸಂಗ್ರಹ ಲಕ್ನೋಉತ್ತರ ಪ್ರದೇಶದ ಬುಂದೇಲ್‌ಖಂಡ ಪ್ರದೇಶದ ಬಂಡಾ ನಗರ ವಿಶ್ವದಲ್ಲೆ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇತ್ತೀಚೆಗಷ್ಟೆ ಬಂಡಾ ನಗರದಲ್ಲಿ ಬರೋಬ್ಬರಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೆ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಬಂಡಾ ನಗರದಲ್ಲಿ ಗರಿಷ್ಠ ಮಟ್ಟದ ತಾಪಮಾನ ದಾಖಲಾಗಿರುವುದು ಇದೆ ಮೊದಲಲ್ಲ. ಆದರೆ ಈ ಬಾರಿಯ ತಾಪಮಾನ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದಕ್ಕೂ ಮುನ್ನ […]

Continue Reading

ಸಹಸ್ರಾರು ಭಕ್ತರ ನಡುವೆ ಅದ್ಧೂರಿ ರಥೋತ್ಸವ

ಸುದ್ದಿ ಸಂಗ್ರಹ ಯಡ್ರಾಮಿತಾಲೂಕಿನ ಕಾಖಂಡಕಿ ಸದ್ಗುರು ಮಲ್ಲಾರಾಧ್ಯರ ಮತ್ತು ಮಹಾತ್ಮಾ ಕೋರಿಸಿದ್ಧೇಶ್ವರ ಭವ್ಯ ರಥೋತ್ಸವ ರವಿವಾರ ರಾತ್ರಿ ಸಹಸ್ರಾರು ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು. ನಾಲವಾರ- ಕಾಖಂಡಕಿ ಉಭಯ ಮಠಗಳ ಪೀಠಾಧಿಪತಿ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಸಂಜೆ ಭವ್ಯ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಂದ ಮಲ್ಲಾರಾಧ್ಯ ಮಹಾರಾಜ್ ಕೀ, ಕೋರಿಸಿದ್ಧೇಶ್ವರ ಮಹಾರಾಜ್ ಕೀ, ತೋಟೇಂದ್ರ ಮಹಾರಾಜ್ ಕೀ ಜೈ ಎಂಬ ಜಯಘೋಷ ಮುಗಿಲು ಮುಟ್ಟುವಂತಿತ್ತು. ಈ […]

Continue Reading

ವಿಜಯೇಂದ್ರ ಮೆಟ್ರೋ‌ ಪ್ರಯಾಣ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಸುದ್ದಿ ಸಂಗ್ರಹ ಚಿತ್ತಾಪುರ ವಿಜಯೇಂದ್ರ ಮೆಟ್ರೋ ಹತ್ತಿರುವ ಬಗ್ಗೆ ಮಾದ್ಯಮಗಳು ಪದೆ ಪದೆ ಸುದ್ದಿ ಬಿತ್ತರಿಸುತ್ತಿದ್ದು, ಆದರೆ ಈ ಪರಿಸ್ಥಿತಿಗೆ ಯಾರು ಕಾರಣ ಎಂದು ಯಾಕೆ ಕೇಳುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು‌ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆ ನೆರವೇರಿಸಿದ‌ ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‌ ಮೋದಿ ವಿದೇಶದಿಂದ ತಂದ ಪ್ರಾಣಿಗಳು ಸತ್ತು ಹೋದವು. ಈಗ ನಾವು ತರುವ […]

Continue Reading

ಕಲ್ಯಾಣದಲ್ಲಿ ಹಸಿರು ಹೆಚ್ಚಿಸಲು ಆದ್ಯತೆ: ಈಶ್ವರ ಖಂಡ್ರೆ

ಸುದ್ದಿ ಸಂಗ್ರಹ ಚಿತ್ತಾಪುರಭೂಭಾಗದ ಶೇ 33ರಷ್ಟು ಹಸಿರು ಇರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಸಿರು ಹೊದಿಕೆ ಬಹಳ ಕಡಿಮೆಯಿದ್ದು, ಅದನ್ನು ಹೆಚ್ಚಿಸಲು ಇನ್ನಷ್ಟು ಆದ್ಯತೆ ನೀಡಲಾಗುವುದು’ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಕೆಕೆಆರ್‌ಡಿಬಿ ಹಾಗೂ ಮೂರ್ತಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಸುಮಾರು 42 ಎಕರೆ 38 ಪ್ರದೇಶದ ವಿಸ್ತೀರ್ಣದಲ್ಲಿ 37.31 ಕೋಟಿ ವೆಚ್ಚದಲ್ಲಿ ನಿರ್ಮಾಣ […]

Continue Reading

ಬೈಕ್​ಗಳಲ್ಲಿ ಡೀಸೆಲ್ ಇಂಜಿನ್ ಏಕೆ ಇರುವುದಿಲ್ಲ ? ಪೆಟ್ರೋಲ್ ಮಾತ್ರ ಬಳಸುವುದರ ರಹಸ್ಯವೇನು ?

ಸುದ್ದಿ ಸಂಗ್ರಹ ನವದೆಹಲಿನೀವು ಯಾವತ್ತಾದರೂ ಬೈಕ್, ಸ್ಕೂಟಿಗಳಲ್ಲಿ ಡೀಸೆಲ್ ಇಂಜಿನ್ ಏಕೆ ಇರುವುದಿಲ್ಲ ? ಪೆಟ್ರೋಲ್ ಇಂಜಿನ್ ಮಾತ್ರ ಏಕೆ ಇರುತ್ತದೆ ಎಂಬುದನ್ನು ಯೋಚಿಸಿದ್ದಿರಾ ? ಬೈಕ್‌ಗಳಲ್ಲಿ ಪೆಟ್ರೋಲ್ ಬದಲಿಗೆ ಡಿಸೆಲ್ ಎಂಜಿನ್‌ ಬಳಸಿದರೆ ಏನಾಗುತ್ತದೆ ? ಎಂಬುದರ ವಿವರ ಇಲ್ಲಿದೆ. ಸಾಮಾನ್ಯವಾಗಿ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ಒಂದೆ ರೀತಿ ಕಾರ್ಯನಿರ್ವಹಿಸುವುದಿಲ್ಲ, ಅವು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಪೆಟ್ರೋಲ್ ಎಂಜಿನ್‌ನಲ್ಲಿ ಇಂಧನ ಹೊತ್ತಿಸಲು ಸ್ಪಾರ್ಕ್ ಪ್ಲಗ್ ಬಳಸಲಾಗುತ್ತದೆ. ಆದರೆ ಡೀಸೆಲ್ ಎಂಜಿನ್‌ನಲ್ಲಿ ಇದು ಕೆಲಸ ಮಾಡುವುದಿಲ್ಲ. […]

Continue Reading