ಸುದ್ದಿ ಸಂಗ್ರಹ

ಟೆಂಗಳಿ: ಸಿಡಿಲಿಗೆ ಎತ್ತು ಬಲಿ‌….ಸುದ್ದಿ ಸಂಗ್ರಹ ಕಾಳಗಿ…..ಸಿಡಿಲು ಬಡಿದ ಪರಿಣಾಮ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಒಂದು ಎತ್ತು ಬಲಿಯಾದ ಘಟನೆ ಮಂಗಳವಾರ ನಡೆದಿದೆ……ರೈತ ಅಜೀಮ್ ಕುಕ್ಕುಂದ ಎಂಬವರಿಗೆ ಸೇರಿದ ಎತ್ತು ಮೃತಪಟ್ಟಿದೆ. 1.20 ಲಕ್ಷ ರೂ. ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ…….ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತಂತೆ ಕಾಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌…..ಮನೆಯ ಎದುರುಗಡೆಯಿಂದ ಮನೆಯೊಳಗೆ ಹೋಗುವಾಗ ಎತ್ತಿಗೆ ಸಿಡಿಲು ಬಡಿದಿದೆ. ಎತ್ತು ಸ್ಥಳದಲ್ಲಿಯೇ ಮೃತಪಟ್ಟಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತು ಕಳೆದುಕೊಂಡ ರೈತ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೆ ಸೂಕ್ತ ಪರಿಹಾರ ವಿತರಿಸುವಂತೆ ಮುಖಂಡರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *