ರಮ್ಯಾ ಕಮ್ ಬ್ಯಾಕ್: ರಮ್ಯಾಗೆ ಯೋಗರಾಜ್ ಭಟ್ ನಿರ್ದೆಶನ

ವಿಶೇಷ ಮಾಹಿತಿ

ಸುದ್ದಿ ಸಂಗ್ರಹ ಬೆಂಗಳೂರು

ಮೋಹಕ ತಾರೆ ರಮ್ಯಾ ಕೊನೆಗೂ ಸಿನಿಮಾಗೆ ಕಮ್ ಬ್ಯಾಕ್ ಆಗುವ ಕಾಲ ಬಂತು. ರಂಗ ಎಸ್‌ಎಸ್‌ಎಲ್‌ಸಿ ಆದ್ಮೇಲೆ 20 ವರ್ಷಗಳ ನಂತರ ಮತ್ತೆ ಯೋಗರಾಜ್ ಭಟ್ ಜೊತೆಗೆ ಸಿನಿಮಾ ಮಾಡಲು ರಮ್ಯಾ ಸಾಥ್ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ರಮ್ಯಾ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ವೇದಿಕೆ ಸಜ್ಜಾಗಿದೆ. ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಬರೆದ ಸ್ಕ್ರಿಪ್ಟ್ ಇಷ್ಟವಾಗಿ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮನದ ಕಡಲು ಸಿನಿಮಾಗೆ ಬಂಡವಾಳ ಹೂಡಿರುವ ಇ. ಕೃಷ್ಣಪ್ಪ ಮತ್ತು ಜಿ. ಗಂಗಾಧರ್ ಅವರು ರಮ್ಯಾ ಕಮ್ ಬ್ಯಾಕ್ ಚಿತ್ರಕ್ಕೆ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರಮ್ಯಾ ನಿರ್ಮಾಣದ ಸಂಸ್ಥೆ ಆ್ಯಪಲ್ ಬ್ಯಾಕ್ಸ್ ಕೂಡ ಕೈ ಜೋಡಿಸಲಿದೆ.

ಸದ್ಯ ರಮ್ಯಾ ಕಮ್ ಬ್ಯಾಕ್ ಸಿನಿಮಾ ಯಾರ ನಿರ್ದೇಶನದಲ್ಲಿ ಎಂದು ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ರಮ್ಯಾ ಜೊತೆಗೆ ಯಾರೆಲ್ಲಾ ನಟಿಸುತ್ತಾರೆ ? ಯಾವಾಗಿನಿಂದ ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ಇನ್ನೂ ಚಿತ್ರತಂಡದ ಕಡೆಯಿಂದ ರಿವೀಲ್ ಆಗಬೇಕಿದೆ.

ನಿನ್ನೆ ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ರಿಯಾಕ್ಟ್ ಮಾಡಿದ್ದರು. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೆನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೆನೆ ಎಂದು ಮಾತನಾಡಿದ್ದರು. ಅದರಂತೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ.

ಅಂದಹಾಗೆ 2004ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ರಮ್ಯಾ ನಟಿಸಿದ್ದರು.

Leave a Reply

Your email address will not be published. Required fields are marked *