200 ರೂ ನೋಟು ರದ್ದುಗೊಳಿಸುವ ವದಂತಿಗಳ ಬಗ್ಗೆ RBI ಸ್ಪಷ್ಟನೆ ನೀಡಿದೆ. ಯಾವುದೇ ನೋಟು ಹಿಂಪಡೆಯುವುದಿಲ್ಲ ಎಂದು ಹೇಳಿದೆ. ಆದರೆ ನಕಲಿ ನೋಟುಗಳ ಹೆಚ್ಚಳದ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂ ನೋಟು ರದ್ದುಗೊಳಿಸುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿದೆ. 200 ನೋಟು ನಿಷೇಧಿಸಲಾಗುತ್ತದೆಯೇ ? ಮಾರುಕಟ್ಟೆಯಿಂದ ಎಲ್ಲಾ 200 ರೂ ನೋಟುಗಳನ್ನು ಹಿಂಪಡೆಯಲಾಗುತ್ತದೆಯೇ ? ಈ ವದಂತಿಗಳ ಬಗ್ಗೆ RBI ಸ್ಪಷ್ಟನೆ ನೀಡಿದೆ.
200, 500 ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ ಎಂಬ ಆರೋಪಗಳಿವೆ. 200 ನೋಟು ಸರ್ಕಾರ ರದ್ದುಗೊಳಿಸುತ್ತಿದೆ ಎಂಬ ವದಂತಿ ಹಬ್ಬಿವೆ.
ಈ ಬಗ್ಗೆ RBI ಪ್ರಮುಖ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇವೆಲ್ಲವೂ ವದಂತಿ ಎಂದು RBI ಸ್ಪಷ್ಟಪಡಿಸಿದೆ. ಯಾವುದೇ ನೋಟು ಹಿಂಪಡೆಯುವುದಿಲ್ಲ ಎಂದು ಹೇಳಿದೆ.
200 ರೂಂ ನೋಟುಗಳ ರದ್ದತಿ ಪ್ರಸ್ತುತ ಇಲ್ಲ. ಆದರೆ ನಕಲಿ ನೋಟು ಹೆಚ್ಚಳದ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ. ನಕಲಿ ನೋಟುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಿಮ್ಮಲ್ಲಿರುವ 200 ನೋಟು ನಕಲಿಯೆ ? ಅಸಲಿಯೇ ? ಎಂದು ತಿಳಿದುಕೊಳ್ಳಿ.
ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ 200 ಎಂದು ಬರೆಯಲಾಗಿರುತ್ತದೆ. ಮಧ್ಯದಲ್ಲಿ ಗಾಂಧೀಜಿಯವರ ಚಿತ್ರವಿರುತ್ತದೆ. ‘RBI’, ‘Bharat’, ‘India’, ‘200’ ಎಂದು ಸೂಕ್ಷ್ಮ ಅಕ್ಷರಗಳಲ್ಲಿ ಬರೆಯಲಾಗಿರುತ್ತದೆ. ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರುತ್ತದೆ. ನಕಲಿ ನೋಟುಗಳನ್ನು ತಡೆಯಲು RBI ಜನರಿಗೆ ಸಲಹೆಗಳನ್ನು ನೀಡಿದೆ. ಎಲ್ಲರೂ ಅವುಗಳನ್ನು ಪಾಲಿಸಬೇಕು ಎಂದು ಹೇಳಿದೆ.