ಗ್ರಾಹಕರಿಗೆ ಶಾಕ್: ನುಗ್ಗೆಕಾಯಿ ಕೆಜಿಗೆ 700 ರೂ

ಬೆಂಗಳೂರು: ಚಿಕನ್, ಮಟನ್ ರೇಟನ್ನು ನುಗ್ಗೆಕಾಯಿ ಮೀರಿಸಿಬಿಟ್ಟಿದೆ. ಕೆಜಿ ನುಗ್ಗೆಕಾಯಿ ರೇಟ್ 500 ರಿಂದ 700 ರೂಪಾಯಿಗೇರಿದೆ. ಚಳಿಗಾಲದಲ್ಲಿ ನುಗ್ಗೆಕಾಯಿ ಇಳುವರಿ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿರೋದೆ ಇದಕ್ಕೆ ಕಾರಣವಾಗಿದೆ. ಈ ಹಿಂದೆ ಕೆ.ಜಿಗೆ ಹೆಚ್ಚೆಂದರೆ 150-200 ರೂ ಮಾತ್ರ ಇರುತ್ತಿತ್ತು. ಈಗ 2 ಕಾಯಿಗೆ 100 ರೂ ಕೊಡಬೇಕಾಗಿದೆ. ಎರಡ್ಮೂರು ತಿಂಗಳು ನುಗ್ಗೆಕಾಯಿ ಬೆಲೆ ಕಡಿಮೆ ಆಗಲ್ಲ ಎನ್ನಲಾಗುತ್ತಿದೆ.

Continue Reading

ಸರ್ಕಾರಿ ಶಾಲೆಗಳ LKG-UKG ಮಕ್ಕಳಿಗೂ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ

ಬೆಂಗಳೂರು: ಸರ್ಕಾರಿ ಶಾಲೆಗಳ ಎಲ್‌ಕೆಜಿ-ಯುಕೆಜಿ ಮಕ್ಕಳಿಗೂ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 1 ರಿಂದ ಅನ್ವಯವಾಗುವಂತೆ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ, ಬಾಳೆಹಣ್ಣು ಕೊಡಲಿದೆ. ಬಿಸಿಯೂಟ ಮಾಡುವ ಅಡುಗೆಯವರಿಗೂ ಗೌರವಧನ ನೀಡುವಂತೆ ಆದೇಶದಲ್ಲಿ ಶಿಕ್ಷಣ ಇಲಾಖೆ ಉಲ್ಲೇಸಿದೆ. ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಮಾರ್ಗಸೂಚಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಈ ಯೋಜನೆಯ ಫಲಾನುಭವಿಗಳೆಂದು ಪರಿಗಣಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಯೋಜನೆಯ […]

Continue Reading

ಅಣ್ಣಾವ್ರು, ಡಾ.ವಿಷ್ಣುವರ್ಧನ್‌ರೊಂದಿಗೆ ಮರೆಯಲಾಗದ ಅಭಿನಯ: ಉಮೇಶ್‌ ಇನ್ನು ನೆನಪು ಪಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಖ್ಯಾತ ಹಾಸ್ಯನಟ ಉಮೇಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಮೇಶ್ ಅವರಿಗೆ 80 ವರ್ಷ ವಯಸ್ಸಾಗಿತ್ತು, ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇದೆ ಅಕ್ಟೋಬರ್ 10ರಂದು ಜಾರಿಬಿದ್ದು ಉಮೇಶ್ ಪೆಟ್ಟು ಮಾಡಿಕೊಂಡಿದ್ದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಉಮೇಶ್‌ ಬಹುತೇಕ ಹಾಸ್ಯ ಪಾತ್ರಗಳಲ್ಲೆ ಮಿಂಚಿದ್ದರು. ತನ್ನ ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಎಂ.ಎಸ್ […]

Continue Reading

ಮಂಗಳೂರು: ತಾಯಿ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಮಗಳು ಕ್ರೌರ್ಯ

ಮಂಗಳೂರು: ಮಗಳೊಬ್ಬಳು ತನ್ನ ತಾಯಿಯನ್ನು ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿರುವ ಘಟನೆ ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ನಡೆದಿದೆ. ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ಕಳೆದ ಆರೇಳು ವರ್ಷಗಳಿಂದ ವಾಸಿಸುತ್ತಿರುವ ಉತ್ತರ ಕರ್ನಾಟಕ ಮೂಲದ ನಿರ್ಮಲಾ ಎಂಬವರ ಕುಟುಂಬದ ಕದನ ಈಗ ಬೀದಿಗೆ ಬಂದಿದೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ನಿರ್ಮಲಾ ಮತ್ತು ಮಗಳು ನೇತ್ರಾವತಿ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ಕಳೆದ ಬುಧವಾರ ಜಗಳ ಮಿತಿಮೀರಿದೆ. ನಿರ್ಮಲಾ ಪ್ರತಿದಿನ ಮೂಡುಶೆಡ್ಡೆ ಗ್ರಾಮ‌ ಪಂಚಾಯಿತಿಗೆ ಆಗಮಿಸಿ ಮಗಳ ವಿರುದ್ಧ ದೂರು ನೀಡುತ್ತಿದ್ದರು. ಪಂಚಾಯಿತಿಯವರು ತಾಯಿಗೆ […]

Continue Reading

ಇನ್‌ಸ್ಟಾದಲ್ಲಿ ಡಾಕ್ಟರ್‌ ಆಗೋ ಹುಡುಗಿ ಪರಿಚಯ: ಪ್ರೀತಿ, ಮದುವೆ ಹೆಸರಲ್ಲಿ ಅರ್ಧ ಕೆಜಿ ಚಿನ್ನಕ್ಕೆ ಕನ್ನ ಹಾಕಿದ್ದ ಆರೋಪಿ ಅರೆಸ್ಟ್‌

ಬೆಂಗಳೂರು: ಇನ್‌ಸ್ಟಾದಲ್ಲಿ ವಿದ್ಯಾರ್ಥಿಯನ್ನು ಪರಿಚಯ ಮಾಡಿಕೊಂಡು, ಪ್ರೀತಿ-ಮದುವೆ ಅಂತ ಆಸೆ ತೋರಿಸಿ ಅರ್ಧ ಕೆಜಿ ಚಿನ್ನಕ್ಕೆ ಕನ್ನ ಹಾಕಿದ್ದ ನಕಲಿ ಬ್ಯುಸಿನೆಸ್‌ಮೆನ್ ಪೊಲೀಸರು ಬಂಧಿಸಿದ್ದಾರೆ. ಜನಾರ್ದನ ಅಲಿಯಾಸ್‌ ಸಿದ್ಧಾರ್ಥ್‌ ವೀರ್‌ ಬಂಧಿತ ಆರೋಪಿ. ನೀಟ್‌ಗೆ ತಯಾರಿ ನಡೆಸುತ್ತಿದ್ದ ಹುಡುಗಿಯನ್ನು ಈತ ಇನ್‌ಸ್ಟಾದಲ್ಲಿ ಪರಿಚಯ ಮಾಡಿಕೊಂಡಿದ್ದ. ಮದುವೆ ಆಗ್ತಿನಿ ಅಂತ ಯುವತಿ ಮನೆಗೆ ಬಂದವನು, ಅರ್ಧ ಕೆಜಿ ಚಿನ್ನ ಕಳ್ಳತನ ಮಾಡಿದ್ದ. ಈಗ ಜ್ಞಾನಭಾರತಿ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ರಿಕ್ವೆಸ್ಟ್ ಕಳಿಸಿದ್ದ ಆರೋಪಿ ಜನಾರ್ದನ್, ತಾನು‌ […]

Continue Reading

ಸುರಕ್ಷತೆ ಇಲ್ಲದ ಹೊರ ರಾಜ್ಯಗಳ ಖಾಸಗಿ, ಸರ್ಕಾರಿ ಬಸ್‌ಗಿಲ್ಲ ಕರ್ನಾಟಕ ಪ್ರವೇಶ

ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್‌ ಬಳಿ ಬಸ್‌ ಬೆಂಕಿಗೆ ಆಹುತಿಯಾದ ಘಟನೆಯ ಬಳಿಕ ಬಸ್‌ಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ತುರ್ತು ನಿರ್ಗಮನ ಬಾಗಿಲು ಇಲ್ಲದ ಹೊರ ರಾಜ್ಯಗಳ ಬಸ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಅಖಿಲ ಭಾರತ ಪರವಾನಗಿ ಹೊಂದಿರುವ ಬಸ್‌ಗಳು ದೇಶದ ವಿವಿಧೆಡೆಯಿಂದ ರಾಜ್ಯಕ್ಕೆ ಬರುತ್ತಿವೆ. ಅವುಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳಿರುವುದಿಲ್ಲ. ಕರ್ನಾಟಕದಲ್ಲಿ ಇರುವ ಸುರಕ್ಷತಾ ನಿಯಮಗಳನ್ನು ಆ ಬಸ್‌ಗಳಲ್ಲಿಯೂ ಅಳವಡಿಸಬೇಕು. ಏಕಾಏಕಿ ಕ್ರಮ ಕೈಗೊಳ್ಳುವ ಬದಲು ಆರಂಭಿಕ […]

Continue Reading

ಹುಟ್ಟು ಹಬ್ಬದ ದಿನದಂದು ಸಮಾಜಮುಖಿ ಕಾರ್ಯ ಕೈಗೊಂಡ ಸರ್ವರಿಗೂ ಧನ್ಯವಾದ ತಿಳಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವು ಹುಟ್ಟು ಹಬ್ಬ ಆಚರಿಸದಿರುವ ನನ್ನ ನಿರ್ಧಾರವನ್ನು ಒಪ್ಪಿ ರಾಜ್ಯದ್ಯಂತ ಹಲವಾರು ಜನ ಕಾರ್ಯಕರ್ತರು, ಅಭಿಮಾನಿಗಳು ಅಸಂಖ್ಯಾತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸರ್ವರಿಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದಿರುವ ಅವರು, ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ತೋರುವ ವಾತ್ಸಲ್ಯ, ಅಭಿಮಾನ ಮತ್ತು ಕಾಳಜಿಗೆ ನಾನೆಂದಿಗೂ ಚಿರಋಣಿ. ನಿಮ್ಮೆಲ್ಲರ ಅದಮ್ಯ ಪ್ರೀತಿಯೇ ನನ್ನ […]

Continue Reading

ಯುವಕನ ಮೇಲೆ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ FIR ದಾಖಲಿಸಲು ಹೈಕೋರ್ಟ್‌ ಆದೇಶ

ಬೆಂಗಳೂರು: ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಡೂರು ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌, ಬಳ್ಳಾರಿ ಜಿಲ್ಲಾ ಎಸ್‌ಪಿಗೆ ಆದೇಶಿಸಿದೆ. ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಮಹೇಶ್‌ ಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಬಳ್ಳಾರಿಯ ಕೋಳೂರು ಗ್ರಾಮದ ವಿ.ವಿವೇಕಾನಂದ (25) ಸಲ್ಲಿಸಿದ್ದ […]

Continue Reading

ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಹಲವು ವರ್ಷಗಳಿಂದ ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೆ ಈ ವರ್ಷವೂ ಕೂಡ ನನ್ನ ಹುಟ್ಟು ಹಬ್ಬದ ಆಚರಣೆಯಿಂದ ದೂರವಿರಲು ನಿರ್ಧರಿಸಿದ್ದೆನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹುಟ್ಟು ಹಬ್ಬ ಎಲ್ಲರ ಪಾಲಿಗೆ ಸಂಭ್ರಮದ ದಿನ, ಪ್ರತಿ ವರ್ಷವೂ ಹೊಸ ಅನುಭವ, ಹೊಸ ಕಲಿಕೆಯನ್ನು, ನಮ್ಮ ಜೀವನದ ಮಜಲನ್ನು, ಸಾರ್ಥಕತೆಯನ್ನು ಒರೆಗೆ ಹಚ್ಚುವ ಹಾಗೂ ನಮ್ಮವರೊಂದಿಗೆ ಆನಂದಿಸುವ ದಿನವೂ ಹೌದು. ಹಿಂದಿನಂತೆ […]

Continue Reading

ಹೈವೆಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ: ಪ್ರಶ್ನಿಸಿದವರಿಗೆ ಚಾಕು ಇರಿದ ಲೇಡಿ ಟೆಕ್ಕಿ

ಚಿಕ್ಕಬಳ್ಳಾಪುರ: ಹೈವೆಯಲ್ಲಿ ಮಹಿಳಾ ಟೆಕ್ಕಿಯೊಬ್ಬಳು ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್‌ ಸವಾರರಿಗೆ ಚಾಕು ಇರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬೈಕ್ ಸವಾರರಿಗೆ ಚಾಕು ಇರಿದ ಮಹಿಳಾ ಟೆಕ್ಕಿಯನ್ನು ಬಿಹಾರ ಮೂಲದ ರಿಂಬಿಕಾ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ತನ್ನ ತಮಿಳುನಾಡು ನೋಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದಳು. ಈ ವೇಳೆ ಬೆಂಗಳೂರು ಹೈದರಾಬಾದ್ ಹೈವೆಯಲ್ಲಿ ಅಡ್ಡಾ ದಿಡ್ಡಿಯಾಗಿ ಸ್ಕೂಟಿ ಒಡಿಸ್ತಾ ಹಿಂದೆ ಬರ್ತಿದ್ದ ಸವಾರರಿಗೆ ಇರುಸು ಮುರುಸು […]

Continue Reading