ವಾಡಿ ಪಟ್ಟಣದಲ್ಲಿ ಒಂದು ವಾರದಿಂದ ನೀರು ಸರಬರಾಜು ಮಾಡದ ಪುರಸಭೆ: ನೀರಿಗಾಗಿ ನಿವಾಸಿಗರ ಪರದಾಟ

ವಾಡಿ: ಪಟ್ಟಣದ ಕೆಲವು ವಾರ್ಡಗಳಲ್ಲಿ ಕಳೆದ ಒಂದು ವಾರದಿಂದ ಪುರಸಭೆ ನೀರು ಸರಬರಾಜು ಮಾಡದಿರುವುದರಿಂದ ವಾರ್ಡ್ ನಿವಾಸಿಗರು ನೀರಿಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್, ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಅದೆ ಹಳೆ ಉತ್ತರ ಮೋಟಾರ್ ಸಮಸ್ಯೆ ಎನ್ನುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ನೀರಿನ ಸಮಸ್ಯೆ ಬರಬಾರದು ಎಂದು ಇಂಗಳಗಿಯಿಂದ ಎಸಿಸಿ ಕಂಪನಿಯ ಪೈಪ್ ಲೈನಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ 50 […]

Continue Reading

ಸಿಜೆಐ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮಕ್ಕೆ ಸಂಜಯ ಬುಳಕರ್ ಆಗ್ರಹ

ಚಿತ್ತಾಪುರ: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ವಕೀಲನೊಬ್ಬ ಶೂ ಎಸೆಯುವ ಪ್ರಯತ್ನ ಮಾಡಿರುವ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂವಿಧಾನ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಂಜಯ ಬುಳಕರ ನೇತೃತ್ವದಲ್ಲಿ ಬುಧವಾರ ಪ್ರತಿಭಟಸಿದ ಮುಖಂಡರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸಂಜಯ ಬುಳಕರ ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಮೂರ್ತಿಗಳ ಮೇಲೆ ಕೋರ್ಟ್ […]

Continue Reading

ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ

ಚಿತ್ತಾಪುರ: ಸೀಗಿ ಹುಣ್ಣಿಮೆಯಂದು ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವವು ಶ್ರದ್ಧಾಭಕ್ತಿ, ಸಂಭ್ರಮ, ಸಡಗರ, ಹರ್ಷೋದ್ಘಾರದೊಂದಿಗೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವಿಶ್ವೇಶ್ವರ ಪೂಜೆ, ಗುರುಪೂಜೆ, ದೇವಿಯ ಪಲ್ಲಕ್ಕಿ ಪೂಜೆ ಜರುಗಿತು, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತಹಸೀಲ್ದಾರ್ ಅವರು ಮಂಗಳಾರತಿ ಮಾಡಿ ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ ಗಾಂಧಿಜಿ ಮತ್ತು ಶಾಸ್ತ್ರಿಜಿ ಜಯಂತಿ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು. ಈ ವೇಳೆ ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ಸಾರಿದ ಗಾಂಧೀಜಿಯವರು ತಮ್ಮ ಸರಳ‌ ಜೀವನ ಹಾಗೂ ಆದರ್ಶಗಳ ಮೂಲಕ ಗುರುತಿಸಲ್ಪಡುತ್ತಾರೆ. ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರು ಇತರ ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿದ್ದರು ಸರಳ ಮತ್ತು ಸೌಜನ್ಯಯುತ ನಡವಳಿಕೆಯನ್ನು […]

Continue Reading

ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಸ್ಮರಣೆ

ವಾಡಿ: ಬಿಜೆಪಿ ಕಛೇರಿಯಲ್ಲಿ ಭಗತ್ ಸಿಂಗ್ ಅವರ 118ನೇ ಜಯಂತಿ ಪ್ರಯುಕ್ತ ಭಗತ್ ಸಿಂಗ್ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಭಗತ್ ಸಿಂಗ್ ಅಚ್ಚಳಿಯದ ಹೆಸರು ಎಂದರು. ಅಸಾಧಾರಣ ಧೈರ್ಯದಿಂದ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ. ಚಿಕ್ಕ ವಯಸ್ಸಿನಲ್ಲೇ ದೇಶ ಪ್ರೇಮದಿಂದ ಪ್ರೇರಿತರಾಗಿ, ಬ್ರಿಟಿಷ್ ಆಡಳಿತದ ವಿರುದ್ಧ ಸಕ್ರಿಯವಾಗಿ ತೊಡಗಿಸಿಕೊಂಡ ಅವರು, ರೈತರು ಮತ್ತು ಕಾರ್ಮಿಕರನ್ನು ಒಗ್ಗೂಡಿಸಲು ‘ನೌಜವಾನ್ ಭಾರತ್ […]

Continue Reading

ವಾಡಿ: ಬಿಜೆಪಿ ಕಛೇರಿಯಲ್ಲಿ 126ನೇ ಮನ್ ಕಿ ಬಾತ್ ವೀಕ್ಷಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 126ನೇ ಮನ್ ಕಿ ಬಾತ್ ಕಾರ್ಯಕ್ರಮ ಮುಖಂಡರು ವಿಕ್ಷೀಸಿದರು. ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಮೋದಿ ಅವರ ಮನ್ ಕಿ ಬಾತ್ ನಲ್ಲಿ ಭಗತ್ ಸಿಂಗ, ಎಸ್.ಎಲ್ ಭೈರಪ್ಪನವರ ಬಗ್ಗೆ ಯುವಕರು ಹೆಚ್ಚಾಗಿ ಅರಿತು ದೇಶಾಭಿಮಾನ ಮೈಗೂಡಿಸಿಕೊಳ್ಳುವಂತ ಅನೇಕ ವಿಷಯಗಳು ಮನ್ ಕಿ ಬಾತ್ ಮುಖಾಂತರ ನಮಗೆ ಧಾರೆಯೆರೆಯುತ್ತಿರುವುದು ನಮ್ಮ ದೇಶ ಸೇವೆಗೆ ಇನ್ನಷ್ಟು ಸ್ಪೂರ್ತಿ ಸಿಗುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ […]

Continue Reading

ವಾಡಿ: ನಿರಂತರ ಮಳೆಗೆ ಹಸು ಸಾವು

ವಾಡಿ: ಪಟ್ಟಣದ ವಾರ್ಡ್ ನಂ.15ರ ಮರಾಠಿ ಗಲ್ಲಿಯ ಸತೀಶ್ ಪಂಗಡವಾಲ ಅವರ ಹಸು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸಾವಿಗೀಡಾಗಿದೆ. ಮನೆಯ ಮುಂಭಾಗದಲ್ಲಿ ಕಟ್ಟಿದ್ದ ಹಸು ಮಳೆಯಿಂದ ತೀವ್ರ ಅಸ್ವಸ್ಥತಗೊಂಡಿತ್ತು. ತಕ್ಷಣ ಪಶು ವೈದ್ಯಾಧಿಕಾರಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ಅವರು ಹೇಳಿದಂತೆ ಪ್ರಥಮ ಚಿಕಿತ್ಸೆಗೆ ಮುಂದಾಗುವ ಹೊತ್ತಿಗೆ ಹಸು ಸಾವನ್ನಪ್ಪಿದೆ. ಕಳೆದ ಒಂದು ವರ್ಷದ ಹಿಂದೆ ಈ ಹಸುವನ್ನು ಕುಟುಂಬದ ಉಪಜೀವನ ನಿರ್ವಹಿಸಲು 80 ಸಾವಿರ ಸಾಲ ಮಾಡಿ ಖರೀದಿಸಿದ್ದರು, ಈಗ ಸಂಭವಿಸಿದ ಈ ಅನಾಹುತದಿಂದ ದಿಕ್ಕೆ […]

Continue Reading

ವಾಡಿ: ಪಂಡಿತ ದೀನ್‍ದಯಾಳ್’ರ 109ನೇ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪಂಡಿತ ದೀನ್‍ದಯಾಳ್ ಉಪಾಧ್ಯಾಯರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪಂಡಿತ ದೀನ್‍ದಯಾಳ್ ಉಪಾಧ್ಯಾಯರು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿಯನ್ನು ಪೋಷಿಸಿದರು, ಅವರು ಕಾಲವಾದ ನಂತರ ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದಿನ ಬೃಹತ್ ಬಿಜೆಪಿ ಉದಯಕ್ಕೆ ಕಾರಣವಾಯಿತು ಎಂದರು. ಅವರ ಮಾನವತಾವಾದ ನಮ್ಮ ಪಕ್ಷಕ್ಕೆ ಒಂದು ಸೈದ್ಧಾಂತಿಕ ವೈಚಾರಿಕತೆ […]

Continue Reading

ನವರಾತ್ರಿ ಉತ್ಸವ: ಜಗದಂಬಾ ದೇವಿಯ ಮೂರ್ತಿ ಮೆರವಣಿಗೆ

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ಬಂಜಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಉತ್ಸವದ ನಿಮಿತ್ಯ ಜಗದಂಬಾ ದೇವಿಯ ಮೂರ್ತಿ ಮೆರವಣಿಗೆ ಜನಸಾಗರದ ಮಧ್ಯೆ ಸೋಮವಾರ ಅದ್ದೂರಿಯಾಗಿ ನಡೆಯಿತು. ಪಟ್ಟಣದ ರೈಲ್ವೆ ಸ್ಟೇಷನ್’ಯಿಂದ ಪ್ರಾರಂಭವಾದ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಅಂಬಿಗರ ಚೌಡಯ್ಯ ಭವನ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಮುಖಾಂತರ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಮಂದಿರದ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ […]

Continue Reading

ಜನರ ಸಂಕಟಕ್ಕೆ ಸ್ಪಂದಿಸಲು ಮುಖ್ಯಾಧಿಕಾರಿಗೆ ಬಿಜೆಪಿ ಆಗ್ರಹ

ವಾಡಿ: ಪಟ್ಟಣದ ಪುರಸಭೆ ಜನಸಾಮಾನ್ಯರಿಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗುತ್ತಿದೆ, ಇದನ್ನು ಸರಿಪಡಿಸಿ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಮುಖಂಡರು ಆಗ್ರಹಿಸಿದರು. ಅಭಿವೃದ್ಧಿ ಬಗ್ಗೆ ಕೇಳಿದರೆ ಜನಪ್ರತಿನಿಧಿಗಳಿಲ್ಲದ ಕಾರಣ ಕೋಟ್ಯಾಂತರ ರೂ ವಾಪಸ್ ಹೋಗಿದೆ ಅಂತಿರಾ, ಹೀಗಾದರೆ ಇಲ್ಲಿನ ಜನರ ಸಂಕಟಕ್ಕೆ ಪರಿಹಾರ ಯಾವಾಗ ಎಂದರು. ಕುಡಿಯುವ ನೀರು 3-4 ದಿನಗಳಿಗೊಮ್ಮೆ ರಾಡಿ ನೀರು ಸರಬರಾಜು, ನೀರು ಸರಬರಾಜಾದರೆ ಪೈಪ್’ಗಳ ಸೋರಿಕೆ, ಅಕಾಲಿಕ ಮಳೆಯಿಂದ ಚರಂಡಿ ನೀರು ರಸ್ತೆ ಹಾಗೂ ಮನೆಯೊಳಗೆ, ಅಸಮರ್ಪಕ ಬಿದಿ ದೀಪಗಳು, […]

Continue Reading