ವಾಡಿ: ಪಟ್ಟಣದ ಕೆಲವು ವಾರ್ಡಗಳಲ್ಲಿ ಕಳೆದ ಒಂದು ವಾರದಿಂದ ಪುರಸಭೆ ನೀರು ಸರಬರಾಜು ಮಾಡದಿರುವುದರಿಂದ ವಾರ್ಡ್ ನಿವಾಸಿಗರು ನೀರಿಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್, ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಅದೆ ಹಳೆ ಉತ್ತರ ಮೋಟಾರ್ ಸಮಸ್ಯೆ ಎನ್ನುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ನೀರಿನ ಸಮಸ್ಯೆ ಬರಬಾರದು ಎಂದು ಇಂಗಳಗಿಯಿಂದ ಎಸಿಸಿ ಕಂಪನಿಯ ಪೈಪ್ ಲೈನಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ 50 ಲಕ್ಷ ರೂ ವೆಚ್ಚದಲ್ಲಿ ಹೊಸ ಪೈಪ್ ಲೈನ್ ಮೂರು ವರ್ಷಗಳ ಹಿಂದೆಯೇ ಮಾಡಿದ್ದಾರೆ, ಅದಕ್ಕೆ ಸಂಪರ್ಕ ಕಲ್ಪಿಸದೆ ನೀರಿನ ಸಮಸ್ಯೆ ಮುಂದುವರೆಸಿದ್ದಾರೆ. ಲಕ್ಷಾಂತರ ರೂ ಮೋಟಾರ್ ಪಂಪ್ ರಿಪೇರಿ, ಹೊಸ ಖರೀದಿ ಹೆಸರಲ್ಲಿ ಖರ್ಚು ಹಾಕಿ ಬಿಲ್ ಎತ್ತುವುದೆ ತಮ್ಮ ಕರ್ತವ್ಯಾಗಿಸಿದ್ದಾರೆ, ಆದರೆ ನೀರು ಕೊಡುವುದು ಮಾತ್ರ ಇವರಿಂದಾಗುತ್ತಿಲ್ಲ ಎಂದರು.
ಇದರ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಇಂತಹ ಮಳೆಗಾಲದಲ್ಲಿ ನಮ್ಮ ಪಕ್ಕದಲ್ಲಿ ಎರಡೆರಡು ನದಿಗಳು ತುಂಬಿದ್ದರು ನೀರಿಗಾಗಿ ಜನ ಪರಿತಪಿಸುವಂತೆ ವಾಡಿ ಪುರಸಭೆಯವರು ಮಾಡುತ್ತಿದ್ದಾರೆ. ಜನರು ಒಂದು ವಾರದಿಂದ ಕೂಡಗಳು ಹಿಡಿದುಕೊಂಡು ಅಲ್ಲಲ್ಲಿ ಅಲೆಯುತ್ತಿದ್ದಾರೆ. ಮಂಜುರಾದ ಬೊರವೆಲ್ಲಗಳು, ದುರಸ್ಥಿ ಬೊರವೆಲ್ಲಗಳು ಮಾಯವಾಗಿವೆ. ಇಂತಹ ಸಂಧರ್ಭದಲ್ಲಿ ಟ್ಯಾಂಕ್’ಗಳ ಮೂಲಕ ಜನರಿಗೆ ನೀರಿನ ವ್ಯವಸ್ಥೆ ಮಾಡವೇಕಾದ ಪುರಸಭೆ ಮುಖ್ಯಾಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಜನ ಬೆಸತ್ತಿದ್ದು, ಪುರಸಭೆಗೆ ಬೀಗಹಾಕಿ ಉಗ್ರ ಹೋರಾಟ ಮಾಡಲಿದ್ದೆವೆ ಎಂದರು.