ಪ್ರತಿಯೊಬ್ಬರು ಕನ್ನಡ ಕಟ್ಟುವ ಕೆಲಸ ಮಾಡಬೇಕು
ಚಿತ್ತಾಪುರ: ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕು, ಅನ್ಯ ಭಾಷಿಗರಿಗೆ ಕನ್ನಡ ಕಲಿಸಬೇಕು, ಕನ್ನಡ ಕಟ್ಟುವ ಕೆಲಸ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ಸಾಹಿತಿ ಕಾಶಿರಾಯ ಕಲಾಲ್ ಹೇಳಿದರು. ಪಟ್ಟಣದ ಶಹಾಬಾದ ರಸ್ತೆಯ ಬಸವೇಶ್ವರ ವಿದ್ಯಾ ಸಂಸ್ಥೆಯ ಅಣೆಮ್ಮ ಗೊಬ್ಬರ ಪ್ರೌಢಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಜರುಗಿದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಸರಣಿ ಉಪನ್ಯಾಸ ಕಾರ್ಯಕ್ರಮ-3ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು-ನುಡಿಯ ರಕ್ಷಣೆಗೆ ಮುಂದಾಗಬೇಕು ಎಂದರು. ಕನ್ನಡ ನಾಡಿಗೆ ಬಸವಾದಿ ಶರಣರ ಕೊಡುಗೆ […]
Continue Reading