ನ.29, 30ರಂದು 46ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

ಕಲಬುರಗಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕಾಯಕಭೂಮಿ ಬಸವಕಲ್ಯಾಣದ ಅನುಭವ ಮಂಟಪ ಆವರಣದಲ್ಲಿ ನ.29 ಮತ್ತು 30ರಂದು ಎರಡು ದಿನಗಳ ಕಾಲ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಜರುಗಲಿದೆ ಎಂದು ನಿವೃತ್ತ ಉಪನ್ಯಾಸಕ ಷಣ್ಮುಖಯ್ಯ ಹಿರೇಮಠ ತಿಳಿಸಿದರು. ನಗರದ ಪ್ರಭುದೇವ ನಗರದ ನೀಲಕಂಠೇಶ್ವರ ಶಾಲೆಯ ಆವರಣದಲ್ಲಿ ಗುರುವಾರ ಸಂಜೆ ಜರುಗಿದ ಉತ್ಸವದ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನ ಗಾಯನ, ಅನುಭವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಇಷ್ಟಲಿಂಗ ಪೂಜೆ […]

Continue Reading

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಇರಲಿ ವಿಶೇಷ ಕಾಳಜಿ: ಡಾ.ರಾಜಶೇಖರ ಪಾಟೀಲ

ಕಲಬುರಗಿ: ಇತ್ತೀಚಿಗೆ ಜಿಲ್ಲೆಯಲ್ಲಿ ವ್ಯಾಪಕವಾದ ಚಳಿ ಪ್ರಾರಂಭವಾಗಿದ್ದು, ಜಿಲ್ಲಾಡಳಿತ ನ‌.20ರವರೆಗೆ ಶೀತ ಅಲೆ ಘೋಷಸಿದೆ. ಈಗ ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿರುವುದರಿಂದ ತಂಪಾದ ವಾತಾವರಣ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ್ ಸಲಹೆ ನೀಡಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಂಜೆ ಜರುಗಿದ ‘ಚಳಿಗಾಲದ ಮುಂಜಾಗೃತಾ ಕ್ರಮಗಳು […]

Continue Reading

ಸ್ವಚ್ಚ ಪರಿಸರ ನಿರ್ಮಾಣದಲ್ಲಿ ಶೌಚಾಲಯಗಳ ಪಾತ್ರ ಪ್ರಮುಖ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಬಯಲು ಶೌಚಕ್ಕೆ ತೆರಳದೆ, ಶೌಚಾಲಯ ನಿರ್ಮಿಸಿಕೊಂಡು ಬಳಸಬೇಕು. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ತಡೆಗಟ್ಟಬಹುದು. ನೈರ್ಮಲ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ, ಸ್ವಚ್ಚ ಪರಿಸರ ನಿರ್ಮಾಣದಲ್ಲಿ ಶೌಚಾಲಯಗಳ ಪಾತ್ರ ಪ್ರಮುಖವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬೆಳಿಗ್ಗೆ ಜರುಗಿದ ‘ವಿಶ್ವ ಶೌಚಾಲಯ(ನೌರ್ಮಲ್ಯ) ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ, ವಾಸಸ್ಥಳದ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ […]

Continue Reading

ವಿಧಾನಸೌಧದ ಮುಂದೆಯೆ ಡಕಾಯಿತಿ: ಹಲ್ಲೆ ನಡೆಸಿ ಹಣ, ಮೊಬೈಲ್‌ ಕಸಿದು ಪರಾರಿ

ಬೆಂಗಳೂರು: ವಿಧಾನಸೌಧದ ಮುಂದೆಯೇ ಡಕಾಯಿತಿ ನಡೆದಿದೆ. ಲೈಟಿಂಗ್ಸ್‌ ನೋಡಲು ಬಂದವರ ಮೇಲೆ ಹಲ್ಲೆ ನಡೆಸಿ ಹಣ, ಮೊಬೈಲ್‌ ಕಸಿದು ಪರಾರಿಯಾಗಿದ್ದಾರೆ. ಐದರಿಂದ ಆರು ಜನ ಆರೋಪಿಗಳಿಂದ ಡಕಾಯಿತಿ ನಡೆದಿದೆ. ಅಣ್ಣ-ತಮ್ಮ ಇಬ್ಬರೂ ಸಿನಿಮಾ ನೋಡಿ ವಿಧಾನಸೌಧದ ಲೈಟಿಂಗ್ ನೋಡಲು ಬಂದಿದ್ದರು. ಈ ವೇಳೆ ಹೈಕೋರ್ಟ್ ಮುಂಭಾಗ ಇರುವ ಮೆಟ್ರೋ ನಿಲ್ದಾಣದ ಮುಂದೆ ಡಕಾಯಿತಿ ನಡೆದಿದೆ. ಬಿಮಲ್ ಗಿರಿ ಎಂಬಾತನಿಗೆ ಹಲ್ಲೆ ನಡೆಸಿ ಡಕಾಯಿತಿ ಮಾಡಲಾಗಿದೆ. ಮೊದಲಿಗೆ ನಮ್ಮನ್ನು ಹಿಡಿದುಕೊಂಡು ಬೆದರಿಕೆ ಹಾಕಿ ಹಲ್ಲೆ ನಡೆಸಿದರು. ಬಳಿಕ ನಮ್ಮ […]

Continue Reading

ಶಹಾಬಾದ: ಭಕ್ತರ ಜಯಘೋಷಗಳ ಮಧ್ಯೆ ಜರುಗಿದ ಮರಗಮ್ಮಾ ದೇವಿಯ ರಥೋತ್ಸವ

ಸುದ್ದಿ ಸಂಗ್ರಹ ಶಹಾಬಾದ ನಗರದ ಜೆಪಿ ಕಾಲೋನಿಯಲ್ಲಿ ಮಂಗಳವಾರ ಆದಿಶಕ್ತಿ ಶ್ರೀ ಮರಗಮ್ಮಾ ದೇವಿಯ 38ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಜಯ ಘೋಷಗಳ ಮಧ್ಯೆ ರಥೋತ್ಸವ ಜರುಗಿತು. ಬೆಳಿಗ್ಗೆ ಪಲ್ಲಕ್ಕಿ ಮೆರವಣಿಯೊಂದಿಗೆ ಕಾಗಿಣಾ ನದಿಗೆ ಗಾಂಗಾ ಸ್ಥಳಕ್ಕೆ ಪ್ರಯಾಣ ಮಾಡಿ ಗಂಗಾ ಮಾತೆಗೆ ಬಾಗಿಣ ಅರ್ಪಿಸಿ ಮತ್ತು ಶ್ರೀದೇವಿಗೆ ಗಂಗಾಸ್ನಾನ ಮಾಡಲಾಯಿತು. ನಂತರ ಪೂರ್ಣಕುಂಭ, ಮಂಗಳವಾದ್ಯಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ತಲುಪಿ ಶ್ರೀದೇವಿ ವಿಗ್ರಹಕ್ಕೆ ಜಲಾಭೀಷೇಕ, ಪಂಚಾಮೃತ ಅಭಿಷೇಕ, ರುದ್ರಾಭೀಷೇಕವನ್ನು ನಿಖಿಲ್ ಜೋಶಿ, ಭಾಸ್ಕರ ಜೋಶಿ […]

Continue Reading

ಪ್ರಕೃತಿ ಚಿಕಿತ್ಸೆ ಸಮಗ್ರ ಆರೋಗ್ಯ ಪದ್ಧತಿ: ಡಾ.ಶ್ರೀನಿಧಿ ಬೀದರ

ಕಲಬುರಗಿ: ನೈಸರ್ಗಿಕ ವಿಧಾನ ಬಳಸಿಕೊಂಡು ದೇಹದ ಸ್ವ-ಗುಣಪಡಿಸುವ ಶಕ್ತಿ ಸಕ್ರಿಯಗೊಳಿಸುವ ಪೂರಕ ಚಿಕಿತ್ಸಾ ಪದ್ಧತಿ ಇದಾಗಿದ್ದು, ಯಾವುದೆ ಅಡ್ಡ ಪರಿಣಾಮ ಇಲ್ಲದೆ ಚಿಕಿತ್ಸಾ ವಿಧಾನ ಇದಾಗಿದೆ ಎಂದು ಉಜಿರೆಯ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯ ವೈದ್ಯೆ ಡಾ.ಶ್ರೀನಿಧಿ ಬೀದರ ಹೇಳಿದರು.  ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ […]

Continue Reading

ದೇಶದ ಜ್ವಲಂತ ಸಮಸ್ಯೆಗಳ ವಿಮುಕ್ತಿಗೆ ಸಮಾಜವಾದಿ ಕ್ರಾಂತಿಯೊಂದೆ ಪರಿಹಾರ: ಗಣಪತರಾವ ಮಾನೆ

ಸುದ್ದಿ ಸಂಗ್ರಹ ಶಹಾಬಾದ ದೇಶದ ಜ್ವಲಂತ ಸಮಸ್ಯೆಗಳ ವಿಮುಕ್ತಿಗೆ ಕ್ರಾಂತಿಯ ಮೂಲಕ ಸಮಾಜವಾದಿ ಸರಕಾರ ಸ್ಥಾಪಿಸಲು ಕಾರ್ಮಿಕರು ಒಗ್ಗಟ್ಟಾಗಬೇಕಾಗಿರುವುದು ಅವಶ್ಯಕ ಎಂದು ಎಸ್’ಯುಸಿಐ (ಸಿ) ಪಕ್ಷದ ಸ್ಥಳಿಯ  ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ ಮಾನೆ ಹೇಳಿದರು. ಪಟ್ಟಣದ ಹುನುಮಾನ ನಗರದಲ್ಲಿ ಎಸ್’ಯುಸಿಐ (ಐ) ಪಕ್ಷದ ವತಿಯಿಂದ ಸಂಘಟಿಸಿಲಾದ ರಷ್ಯಾದ ನವೆಂಬರ್ ಕ್ರಾಂತಿಯ 108ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜರೋಹಣ ನೇರವೆರಿಸಿ. ಕಾಮ್ರೇಡ್ ಲೆನಿನ್, ಕಾಮ್ರೇಡ್ ಸ್ಟಾಲಿನವರ ಭಾವಚಿತ್ರಕ್ಕೆ  ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಷ್ಯಾದಲ್ಲಿ ಕಾಮ್ರೇಡ್ ಲೆನಿನ್’ರವರು ಶೋಷಿತ ಕಾರ್ಮಿಕರ ಕಮ್ಯೂನಿಸ್ಟ್ ವಿಚಾರಧಾರೆಯ ಆಧಾರದ […]

Continue Reading

58 ವರ್ಷಗಳಿಂದ ಜ್ಞಾನ ದಾಸೋಹದ ಜೊತೆಗೆ ಸಮಾಜಮುಖಿ ಸೇವೆಗಳು

ಸುದ್ದಿ ಸಂಗ್ರಹ ಶಹಾಬಾದ 58 ವರ್ಷಗಳಿಂದ ಹೈ.ಕ ಶಿಕ್ಷಣ ಸಂಸ್ಥೆಯ ಎಸ್ಎಸ್ ಮರಗೋಳ ಪದವಿ ಮಹಾವಿದ್ಯಾಲಯದ ವತಿಯಿಂದ ಜ್ಞಾನ ದಾಸೋಹದ ಜೊತೆಗೆ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ ಸೇರಿದಂತೆ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದೆವೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಹಿರೇಮಠ್ ಹೇಳಿದರು.  ನಗರದ ಹೈ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ಎಸ್ ಮರಗೋಳ ಕಾಲೇಜ್ ಹಾಗೂ ಸಿದ್ದರಾಮೇಶ್ವರ ಕಣ್ಣಿನ ಅಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಔಷಧ […]

Continue Reading

ಇಂದು ಆರೆಸೆಸ್ ಪಥಸಂಚಲನ: ಚಿತ್ತಾಪುರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್

ಕಲಬುರಗಿ: ಹೈಕೋರ್ಟ್ ಸೂಚನೆಯಂತೆ ಇಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ ಚಿತ್ತಾಪುರ ಪಟ್ಟಣದಲ್ಲಿ ಆರೆಸ್ಸೆಸ್ ಪಥಸಂಚಲನ ಕಾರ್ಯಕ್ರಮ ನಡೆಯಲಿದೆ, ನಿಮಿತ್ತ ಈಗಾಗಲೇ ಪೋಲಿಸ್ ಇಲಾಖೆಯಿಂದ ಬಿಗಿ ಪೋಲಿಸ್ ಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು. ಇಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಪಥಸಂಚಲನ ಆರಂಭವಾಗಲಿದೆ, ಹೈಕೋರ್ಟ್ ಸೂಚನೆಯಂತೆ ನಿಗದಿತ ಸ್ಥಳದಲ್ಲಿ ನಿಗದಿತ ಕಾರ್ಯಕ್ರಮ ನಡೆಸುವಂತೆ ಸಂಘಟಕರಿಗೆ ಸೂಚಿಸಲಾಗಿದೆ ಎಂದರು. ಪಥಸಂಚಲನಕ್ಕೆ ಪೋಲಿಸ್ ಇಲಾಖೆಯಿಂದ […]

Continue Reading

ಆರೋಗ್ಯಕರ ಜೀವನ ಶೈಲಿಯಿಂದ ಮಧುಮೇಹ ದೂರ: ಡಾ.ಅನುಪಮಾ ಕೇಶ್ವಾರ

ಕಲಬುರಗಿ: ಒತ್ತಡದ ಬದುಕಿನಿಂದ ವಿವಿಧ ರೋಗಗಳು ಉದ್ಬವವಾಗುತ್ತಿವೆ. ಒಂದುಕಾಲದಲ್ಲಿ ಶ್ರೀಮಂತರ ರೋಗವೆಂದು ಕರೆಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಇಂದು ವಿವಿಧ ಕಾರಣಗಳಿಂದ ಜನಸಾಮನ್ಯರ ಕಾಯಿಲೆಯಾಗಿದೆ. ಸೂಕ್ತ ಸಮಯಕ್ಕೆ ಆಹಾರ ಸೇವನೆ, ನಿದ್ರೆ, ಸಮತೋಲನ ಆಹಾರ, ಒತ್ತಡಮುಕ್ತಜೀವನ, ಯೋಗ, ಧ್ಯಾನದಂತಹ ಕ್ರಮಗಳಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಧುಮೇಹದಿಂದ ದೂರವಿರಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ […]

Continue Reading