58 ವರ್ಷಗಳಿಂದ ಜ್ಞಾನ ದಾಸೋಹದ ಜೊತೆಗೆ ಸಮಾಜಮುಖಿ ಸೇವೆಗಳು

ನಗರದ

ಸುದ್ದಿ ಸಂಗ್ರಹ ಶಹಾಬಾದ
58 ವರ್ಷಗಳಿಂದ ಹೈ.ಕ ಶಿಕ್ಷಣ ಸಂಸ್ಥೆಯ ಎಸ್ಎಸ್ ಮರಗೋಳ ಪದವಿ ಮಹಾವಿದ್ಯಾಲಯದ ವತಿಯಿಂದ ಜ್ಞಾನ ದಾಸೋಹದ ಜೊತೆಗೆ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ ಸೇರಿದಂತೆ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದೆವೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಹಿರೇಮಠ್ ಹೇಳಿದರು. 

ನಗರದ ಹೈ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ಎಸ್ ಮರಗೋಳ ಕಾಲೇಜ್ ಹಾಗೂ ಸಿದ್ದರಾಮೇಶ್ವರ ಕಣ್ಣಿನ ಅಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೃಷ್ಟಿ ಸರಿ ಇದ್ದರೆ ಸೃಷ್ಟಿ ಸರಿಯಾಗಿ ಕಾಣುತ್ತದೆ, ಬೇಡರ ಕಣ್ಣಪ್ಪ ತನ್ನ ಕಣ್ಣು ಶಿವಲಿಂಗಕ್ಕೆ ಅರ್ಪಣೆ ಮಾಡಿದ ಇತಿಹಾಸವಿದೆ, ಇಂದಿನ ನಾಗರಿಕರು ತಮ್ಮ ಕಣ್ಣುಗಳನ್ನು ಮಣ್ಣು ಪಾಲು ಮಾಡದೆ, ಕಣ್ಣು ದಾನ ಮಾಡಬೇಕು ಎಂದರು.

ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ಮಲ್ಲಿಕಾರ್ಜುನ ನೀಲಶೆಟ್ಟಿ ಮತ್ತು ಡಾ.ನಾಗರಾಜ ಗವಿಮಠ ಮಾತನಾಡಿ, 1992 ರಿಂದ ಪ್ರಾರಂಭವಾದ ಆಸ್ಪತ್ರೆ ಇಲ್ಲಿವರೆಗೆ 2 ಲಕ್ಷ ಜನರಿಗೆ ಉಚಿತ ನೇತ್ರ ಚಿಕಿತ್ಸೆ ಮತ್ತು ಔಷಧ ವಿತರಣೆ ಮಾಡಲಾಗಿದೆ, ಬಡವರಿಗಾಗಿ ರೂಪಿಸಿದ ಹಮಾರಾ ಬಂಧನ್ ಯೋಜನೆಯಡಿ ತಿಂಗಳಲ್ಲಿ 2-3 ಶಿಬಿರಗಳು ಮಾಡಲಾಗುತ್ತಿದೆ ಎಂದರು.

ವೇದಿಕೆ ಮೇಲೆ ಪ್ರಾಚಾರ್ಯ ಡಾ. ಬಸವರಾಜ ಹಿರೇಮಠ, ಸಂಸ್ಥೆಯ ಸದಸ್ಯ ಸುಭಾಶ್ಚಂದ್ರ ಇಂಗಿನಶೆಟ್ಟಿ, ಡಾ.ಲಕ್ಷ್ಮಣ ರಾಠೋಡ, ಸಿದ್ದರಾಮೇಶ್ವರ ಆಸ್ಪತ್ರೆಯ ಡಾ.ಮಲ್ಲಿಕಾರ್ಜನ ನೀಲಶೆಟ್ಟಿ, ಡಾ.ನಾಗರಾಜ ಗವಿಮಠ ಮತ್ತು ಪತ್ರಕರ್ತ ನಿಂಗಣ್ಣ ಜಂಬಗಿ ಮತ್ತು ಲೋಹಿತ್ ಕಟ್ಟಿ ಇದ್ದರು .

ಶಿಬಿರದಲ್ಲಿ 250 ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಕೊಂಡರು ಹಾಗೂ 55 ಜನರಿಗೆ ನೇತ್ರ ಶಸ್ತ್ರ ಚಿಕ್ಸತೆಗೆ ಸಲಹೆ ನೀಡಿ, ಶಸ್ತ್ರ ಚಿಕಿತ್ಸೆ ದಿನಾಂಕ ನಿಗದಿಪಡಿಸಲಾಯಿತು.

ಈ ಸಂದರ್ಭದಲ್ಲಿ ಡಾ.ವೆಂಕಟರಾಜಪ್ಪ, ಪ್ರೋ.ಜಿ.ಆರ್ ಸ್ಥಾವರಮಠ, ಡಾ.ಸೇಡಂಕರ, ಡಾ.ಸುರೇಖಾ ನಾಟೀಕಾರ, ಪ್ರೊ.ಶಿವಕುಮಾರ ಕುಸಾಳೆ, ಪ್ರೊ.ಕುಪೇಂದ್ರ ಚವ್ಹಾಣ, ಮಹ್ಮದ ಇರ್ಫಾನ, ಡಾ.ಕಾವೇರಿ, ನಾಗರಾಜ ದೇವತ್ಕಲ ಹಾಗೂ ನಗರ ಮತ್ತು ಗ್ರಾಮದಿಂದ ಶಿಬಿರಕ್ಕೆ ಆಗಮಿಸಿದ ನೂರಾರು ಜನ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರೊ.ಶಿವಕುಮಾರ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *