ಚಿತ್ತಾಪುರ: ಎಕ್ಸಲೆಂಟ್ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಆಚರಣೆ

ತಾಲೂಕು

ಚಿತ್ತಾಪುರ: ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಆಚರಿಸಲಾಯಿತು.

ಪಟ್ಟಣದ ಗುರುಬಸವ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ನಿಮಿತ್ಯ ಗಣಿತ ಪ್ರದರ್ಶನ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಎಸಿಸಿ ಪ್ಲಾಂಟ್ ಹೆಡ್ ರವೀಂದ್ರ ಲಿಂಗಪ್ಪ ಬೊಮ್ಮನಳ್ಳಿ ಮಾತನಾಡಿ, ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರಿಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಅನೇಕ ಬಾರಿ ದಂಗುಬಡಿಸುತ್ತಿದ್ದವು ಎಂದರು.

ಶಾಲೆಯ ಸಹಕಾರ್ಯದರ್ಶಿ ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, 1914 – 18ರ ಅವಧಿಯಲ್ಲಿ ರಾಮಾನುಜನ್ ಅವರು ಸುಮಾರು 24 ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದ್ದರು ಎಂದರು.

ಶಾಲೆಯ ಗಣಿತ ಶಿಕ್ಷಕ ಹಾಗೂ ಸ್ಪರ್ಧೆಯ ನಿರ್ಣಾಯಕ ಶೇಷಪ್ಪ ಬೆಥನಿ ಗಣಿತ ಮಾತನಾಡಿದ ಅವರು, ವಿಶ್ವದಲ್ಲಿಯೆ ಶ್ರೇಷ್ಠ ಭಾರತಿಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು 22 ಡಿಸೆಂಬರ್ 1887ರಲ್ಲಿ ಜನಿಸಿದರು. ಗಣಿತ ತಜ್ಞರಾಗಿ ವಿಶ್ವದಲ್ಲಿಯೇ ಪ್ರಖ್ಯಾತರಾಗಿದ್ದರು ಎಂದು ಶ್ರೀನಿವಾಸ ರಾಮಾನುಜನ್ ಅವರ ಸಾಧನೆಯ ಬಗ್ಗೆ ಹೇಳಿದರು.

ಇನ್ನೋರ್ವ ನಿರ್ಣಾಯಕಿ ಹಾಗೂ ಸರಕಾರಿ ಶಾಲೆಯ ಗಣಿತ ಶಿಕ್ಷಕಿ ರೂಪ ಅವರು ಮಾತನಾಡಿ, ಎಲ್ಲಾ ವಿಷಯಗಳಿಗೂ ಗಣಿತವೇ ಮೂಲ ಕಾರಣ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

ಎಕ್ಸಲೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ದೇವೆನ್ ಪಾಂಡೆ ಮಾತನಾಡಿ, ಶ್ರೀನಿವಾಸ ರಾಮಾನುಜರ ಅವಿಷ್ಕಾರ ಮತ್ತು ಪ್ರತಿನಿತ್ಯ ಜೀವನದಲ್ಲಿ ಗಣಿತದ ಪ್ರಾಮುಖ್ಯತೆ ಕುರಿತು ಹೇಳಿದರು.

ವಿದ್ಯಾರ್ಥಿಗಳು ಗಣಿತ ದಿನಾಚರಣೆಯ ಬಗ್ಗೆ ಭಾಷಣ ಮಾಡಿದರು. ನಂತರ ಮಕ್ಕಳಿಗಾಗಿ ಏರ್ಪಡಿಸಲಾದ ಗಣಿತ ಪ್ರದರ್ಶನಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ನಂತರ ಮಕ್ಕಳಿಗೆ ಅಲ್ಪಹಾರ ವಿತರಿಸಲಾಯಿತು.‌

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾಂಕ ಬೊಮ್ಮನಳ್ಳಿ, ಪ್ರಭಾರಿ ಮುಖ್ಯ ಶಿಕ್ಷಕ ಕುಮಾರ ಮಹಾದೇವ ಅರಿಕೇರಿ, ಮುಖಂಡರಾದ ದೇವೇನ್ ಪಾಂಡೆ, ಖಾಸಿಂ ಅಲಿ, ಕುಮಾರ ದೇವರಾಜ, ಸಾಧನ ಎನ್ ಶಿಲ್ಪಿ, ವಸಂತ, ಸುಜಾತ, ಬಸಮ್ಮ, ಅಂಬಿಕಾ, ಪ್ರಿಯಾಂಕ ಕುಮಾರಿ, ಅಶ್ವಿನಿ ಕುಮಾರಿ, ಅಮ್ರಿನ್ ಬೇಗಂ ಸೇರಿದಂತೆ ಅನೇಕರು ಇದ್ದರು.‌

Leave a Reply

Your email address will not be published. Required fields are marked *