ಸುದ್ದಿ ಸಂಗ್ರಹ ನವದೆಹಲಿ
ಮೆಟಾ ಸಂಸ್ಥೆಯು ಭಾರತದಲ್ಲಿ ವಾಟ್ಸಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಆಪ್‌ಗಳಿಗಾಗಿ ಹೊಸ ಪ್ಲಸ್ ಪ್ರೀಮಿಯಂ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ಹೆಚ್ಚಿನ ಪ್ರೈವೆಸಿ, ಕಸ್ಟಮೈಸೇಶನ್ ಮತ್ತು ವಿಶೇಷ ಫೀಚರ್‌ಗಳನ್ನು ನೀಡಲು ಈ ಪ್ಲಾನ್‌ಗಳನ್ನು ತರಲಾಗಿದೆ.
ನಿಮ್ಮ ಫೋನ್‌ನಲ್ಲಿ ಈ ಆಯ್ಕೆಗಳು ಕಾಣಿಸಬೇಕಾದರೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ನಿಮ್ಮ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.
ಬೆಲೆ ಎಷ್ಟು ?
ಪ್ರತಿ ಆಪ್‌ಗೂ ಪ್ರತ್ಯೇಕವಾಗಿ ತಿಂಗಳ ಚಂದಾದಾರಿಕೆ ಪಾವತಿಸಬೇಕಾಗುತ್ತದೆ:
ವಾಟ್ಸಪ್ ಪ್ಲಸ್: ತಿಂಗಳಿಗೆ 79 ರೂ. (1 ತಿಂಗಳ ಉಚಿತ ಟ್ರಯಲ್ ಇದೆ; ಸದ್ಯಕ್ಕೆ ಐಫೋನ್ ಬಳಕೆದಾರರಿಗೆ ಮೊದಲು ಸಿಗುತ್ತಿದೆ)
ಇನ್‌ಸ್ಟಾಗ್ರಾಮ್ ಪ್ಲಸ್: ತಿಂಗಳಿಗೆ 99 ರೂ.(ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯ)
ಫೇಸ್‌ಬುಕ್ ಪ್ಲಸ್: ತಿಂಗಳಿಗೆ 99 ರೂ. (ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಲಭ್ಯ)
ಯಾವ ಪ್ಲಾನ್‌ನಲ್ಲಿ ಏನು ಫೀಚರ್ ?
ವಾಟ್ಸಪ್ ಪ್ಲಸ್
ಇದು ಚಾಟ್‌ಗಳನ್ನು ಸುಲಭವಾಗಿ ಮ್ಯಾನೇಜ್ ಮಾಡಲು ಮತ್ತು ಆಪ್ ಡಿಸೈನ್ ಬದಲಾಯಿಸಲು ಸಹಾಯ ಮಾಡುತ್ತದೆ.
ಹೆಚ್ಚಿನ ಚಾಟ್ ಪಿನ್ ಮಾಡಿ: ಸಾಮಾನ್ಯ ವಾಟ್ಸಪ್‌ನಲ್ಲಿ ಕೇವಲ 3 ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಇದರಲ್ಲಿ 20 ಚಾಟ್‌ಗಳವರೆಗೆ ಪಿನ್ ಮಾಡಿ ಇಡಬಹುದು.
ಡಿಸೈನ್ ಬದಲಾವಣೆ: ಆಪ್‌ಗಾಗಿ 18 ಹೊಸ ಆಕ್ಸೆಂಟ್ ಕಲರ್ಸ್ ಮತ್ತು 14 ವಿಭಿನ್ನ ಆಪ್ ಐಕಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ವಿಶೇಷ ಸ್ಟಿಕ್ಕರ್‌ಗಳು: ಪ್ರೀಮಿಯಂ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳು ಸಿಗಲಿವೆ (ಇದನ್ನು ನೀವು ಕಳುಹಿಸಿದಾಗ ಸಾಮಾನ್ಯ ಬಳಕೆದಾರರಿಗೂ ಕಾಣಿಸುತ್ತದೆ).
ಕಸ್ಟಮ್ ಟೋನ್‌ಗಳು: ಪ್ರತ್ಯೇಕ ಕಾಂಟ್ಯಾಕ್ಟ್‌ಗಳಿಗೆ ಬೇರೆ ಬೇರೆ ರಿಂಗ್‌ಟೋನ್ ಮತ್ತು ನೋಟಿಫಿಕೇಶನ್ ಸೌಂಡ್‌ಗಳನ್ನು ಸೆಟ್ ಮಾಡಬಹುದು.
ಬಲ್ಕ್ ಮ್ಯಾನೇಜ್‌ಮೆಂಟ್: ಒಂದಕ್ಕಿಂತ ಹೆಚ್ಚು ಚಾಟ್‌ಗಳನ್ನು ಒಟ್ಟಿಗೆ ಆಯ್ಕೆ ಮಾಡಿ ಅವುಗಳ ನೋಟಿಫಿಕೇಶನ್ ಸೆಟ್ಟಿಂಗ್ಸ್ ಬದಲಾಯಿಸಬಹುದು.
ಇನ್‌ಸ್ಟಾಗ್ರಾಮ್ ಪ್ಲಸ್
ಇದು ಮುಖ್ಯವಾಗಿ ಸ್ಟೋರಿ ಮತ್ತು ಪ್ರೊಫೈಲ್ ಅನ್ನು ಇನ್ನಷ್ಟು ಆಕರ್ಷಕವಾಗಿಸಲು ನೆರವಾಗುತ್ತದೆ
ಅನಾಮಧೇಯವಾಗಿ ಸ್ಟೋರಿ ನೋಡುವುದು: ನೀವು ಬೇರೆಯವರ ಸ್ಟೋರಿ ನೋಡಿದರೂ, ಅವರ Viewer List ನಲ್ಲಿ ನಿಮ್ಮ ಹೆಸರು ಕಾಣಿಸುವುದಿಲ್ಲ.
48 ಗಂಟೆಗಳ ಸ್ಟೋರಿ: ಸಾಮಾನ್ಯ ಸ್ಟೋರಿಗಳು 24 ಗಂಟೆಗಳಲ್ಲಿ ಮಾಯವಾಗುತ್ತವೆ, ಆದರೆ ಪ್ರೀಮಿಯಂ ಬಳಕೆದಾರರ ಸ್ಟೋರಿಗಳು 48 ಗಂಟೆಗಳ ಕಾಲ ಇರುತ್ತವೆ.
ಸ್ಟೋರಿ ರಿವಾಚ್ ಕೌಂಟ್: ನಿಮ್ಮ ಸ್ಟೋರಿಯನ್ನು ಯಾರು ಎಷ್ಟು ಬಾರಿ ಮತ್ತೆ ಮತ್ತೆ ನೋಡಿದ್ದಾರೆ ಎಂದು ತಿಳಿಯಬಹುದು ಮತ್ತು ವ್ಯೂವರ್ ಲಿಸ್ಟ್‌ನಲ್ಲಿ ನಿರ್ದಿಷ್ಟ ಹೆಸರನ್ನು ಸರ್ಚ್ ಮಾಡಬಹುದು.
ಸ್ಟೀಲ್ತ್ ಪೋಸ್ಟಿಂಗ್: ನಿಮ್ಮ ಹೊಸ ಪೋಸ್ಟ್ ಅಥವಾ ರೀಲ್ಸ್ ಫಾಲೋವರ್ಸ್‌ಗಳ ಮೇನ್ ಫೀಡ್‌ಗೆ ಹೋಗದಂತೆ ನೇರವಾಗಿ ಪ್ರೊಫೈಲ್ ಗ್ರಿಡ್‌ಗೆ ಮಾತ್ರ ಸೇರಿಸಬಹುದು.
ಪ್ರೊಫೈಲ್ ಅಪ್‌ಗ್ರೇಡ್: ಪ್ರೊಫೈಲ್‌ನಲ್ಲಿ 3 ಕ್ಕಿಂತ ಹೆಚ್ಚು (6 ರವರೆಗೆ) ಪೋಸ್ಟ್‌ಗಳನ್ನು ಪಿನ್ ಮಾಡಬಹುದು, ಬಯೋದಲ್ಲಿ ವಿಭಿನ್ನ ಫಾಂಟ್‌ಗಳನ್ನು ಬಳಸಬಹುದು ಮತ್ತು “ಸೂಪರ್ ಹಾರ್ಟ್” ರಿಯಾಕ್ಷನ್ ಕಳುಹಿಸಬಹುದು.

ಫೇಸ್‌ಬುಕ್ ಪ್ಲಸ್
ಇದು ಇನ್‌ಸ್ಟಾಗ್ರಾಮ್‌ನಂತಹ ಸ್ಟೋರಿ ಫೀಚರ್‌ಗಳ ಜೊತೆಗೆ ಕ್ರಿಯೇಟರ್ಸ್‌ಗಳಿಗೆ ಹೆಚ್ಚಿನ ಸೌಲಭ್ಯ ನೀಡುತ್ತದೆ
ಅಪ್‌ಗ್ರೇಡ್ ಸ್ಟೋರಿಗಳು: 48 ಗಂಟೆಗಳ ಸ್ಟೋರಿ ಲೈಫ್‌ಟೈಮ್, ಅನಾಮಧೇಯವಾಗಿ ಸ್ಟೋರಿ ನೋಡುವುದು ಮತ್ತು ಯಾರು ಎಷ್ಟು ಬಾರಿ ನೋಡಿದ್ದಾರೆ ಎಂಬ ಕೌಂಟ್ ಸಿಗಲಿದೆ.
ಲುಕ್ ಅಂಡ್ ಫೀಲ್: ಫೇಸ್‌ಬುಕ್ ಮತ್ತು ಮೆಸೆಂಜರ್ ಆಪ್‌ಗಳಿಗೆ ಕಸ್ಟಮ್ ಐಕಾನ್‌ಗಳು, ಬಯೋಗೆ ಹೊಸ ಫಾಂಟ್‌ಗಳು ಮತ್ತು ಪ್ರೊಫೈಲ್ ಪಿನ್ನಿಂಗ್ ಸೌಲಭ್ಯ.
ಕ್ರಿಯೇಟರ್ಸ್ ಮತ್ತು ಪೇಜ್ ಟೂಲ್ಸ್: ಪೇಜ್ ಅಡ್ಮಿನ್‌ಗಳಿಗಾಗಿ ಸುಧಾರಿತ ಆಡಿಯನ್ಸ್ ಇನ್‌ಸೈಟ್ಸ್, ಕಂಟೆಂಟ್ ಮಾನಿಟರಿಂಗ್ ಮತ್ತು ಹೆಚ್ಚಿನ ಮಾಡರೇಶನ್ ಸಪೋರ್ಟ್ ಸಿಗಲಿದೆ.