ಭಾಗೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಗ್ರಾಮೀಣ

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶರಣಬಸಪ್ಪ ಪಾಟೀಲ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ದೊಡ್ಡಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ನಿರ್ದೇಶಕರಾದ ಸುಭಾಶ್ಚಂದ್ರ ಮುತ್ತಣ್ಣ ಶರಪೊದ್ದಿನ್ ಅಬ್ದುಲ ಹಮೀದ್, ಅಂಬಾರಾಯ ಹಣಮಂತರಾಯ, ಸಾಬಣ್ಣ ನರಸಪ್ಪ, ಇಂದುಶೇಖರ ನಾಗಣ್ಣ, ಸಿದ್ರಾಮಪ್ಪ ಕಾಮಣ್ಣ, ದೇವಿಂದ್ರ ಮೈಲಾರಿ, ವಿಶ್ವನಾಥ ರುದ್ರಪ್ಪ, ಶರಣಮ್ಮ ವಿಶ್ವೇಶ್ವರ, ಲಕ್ಷ್ಮೀಬಾಯಿ
ಸಿದ್ರಾಮಪ್ಪ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ
ಪಾಟೀಲ (ದಳಪತಿ), ಪ್ರದೀಪ ಪೂಜಾರಿ ಕದ್ದರಗಿ, ಅರುಣ
ಯಾಗಾಪೂರ, ಮದನ ಯಾಗಾಪೂರ ಸೇರಿದಂತೆ
ಅನೇಕರು ಉಪಸ್ಥಿತರಿದ್ದರು.

ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖಂಡರು ಕಾರ್ಯಕರ್ತರು‌ ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

Leave a Reply

Your email address will not be published. Required fields are marked *