ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲೆಯ ಕಮಲಾಪುರ ತಹಸೀಲ್ದಾರ್ ಕಚೇರಿಯಲ್ಲಿ 10 ಸಾವಿರ ರೂ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಶಶಿಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜಮೀನು ದಾಖಲೆ ಪತ್ರ ನೀಡಲು ಶಶಿಕುಮಾರ್, ಕಿಶನ್ ರಾಠೋಡ ಅವರಿಗೆ 20 ಸಾವಿರಕ್ಕೂ ಹೆಚ್ಚು ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಕಿಶನ್ ರಾಠೋಡ ದೂರು ನೀಡಿದ್ದರು.
ಲಂಚ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತರು, ಹಣ ಪಡೆಯುತ್ತಿದ್ದ ಆರೋಪಿ ಶಶಿಕಾಂತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ ಮಾರ್ಗದರ್ಶನದಲ್ಲಿ ಇನ್’ಸ್ಪೆಕ್ಟರ್ ಅರುಣಕುಮಾರ ಮರಗುಂಡಿ ಮತ್ತು ಸಿಬ್ಬಂದಿ ದಾಳಿ ನಡೆಸಿದರು.