ಮಾಡಬೂಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ

ಜಿಲ್ಲೆ

ಚಿತ್ತಾಪುರ: ಮಾಡಬೂಳ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರಿಗೆ ಜಿ.ಪಂ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮನವಿ ಮಾಡಿದರು.

ಮಂಗಳವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾಡಬೂಳ ಗ್ರಾಮಕ್ಕೆ ಭೇಟಿ ನೀಡಿದಾಗ ಹೂಗುಚ್ಛ ನೀಡಿ ಸ್ವಾಗತಿಸಿದರು.

ನಂತರ ಮಾತನಾಡಿದ ಅವರು, ಶಾಲಾ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಾಡಬೂಳ ಗ್ರಾಮಕ್ಕೆ ಡಿಗ್ರಿ ಕಾಲೇಜು ಹಾಗೂ ವಸತಿ ನಿಲಯದ ಅವಶ್ಯಕತೆ ಇದೆ. ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬ್ಯಾಂಕಿನ ಸೌಲಭ್ಯ ಒದಗಿಸಬೇಕು, ರಸ್ತೆ, ಶೌಚಾಲಯ, ಶುದ್ದವಾದ ಕುಡಿಯುವ ನೀರಿನ ಘಟಕ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಚಿತ್ತಾಪುರ ಟಿಎಪಿಸಿಎಂ ಅಧ್ಯಕ್ಷ ವೀರಯ್ಯ ಹಿರೇಮಠ , ಸುನಿಲಗೌಡ ಮಾಡಬೂಳ ಸೇರಿದಂತೆ ಅನೇಕರು ಇದ್ದರು‌.

.

Leave a Reply

Your email address will not be published. Required fields are marked *