ಶಿವಮೊಗ್ಗ: ಜಾತಿಗಣತಿ ಹೆಸರಿನಲ್ಲಿ ಬಂದ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿರುವ ಆರೋಪ ಶಿವಮೊಗ್ಗದಲ್ಲಿ ಕೇಳಿಬಂದಿದೆ.
ಮನೆಯಲ್ಲಿ ಪುರುಷರಿಲ್ಲದ ವೇಳೆ ಗಣತಿ ಹೆಸರಿನಲ್ಲಿ ಬಂದವರು, ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ಆಧಾರ್ ಕಾರ್ಡ್ ತರಲು ಮನೆಯೊಳಗೆ ಹೋಗಿದ್ದ ಮಹಿಳೆ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಹಲ್ಲೆಗೆ ಒಳಗಾದ ಮಹಿಳೆಯನ್ನು ದಿಲ್‌ಶಾದ್ ಎಂದು ಗುರುತಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗದ ಕ್ಲಾಕ್‌ಪೇಟೆಯ ಆಜಾದ್ ನಗರದ 2ನೇ ತಿರುವಿನಲ್ಲಿನ ಮನೆಗೆ ಗಣತಿ ಹೆಸರಿನಲ್ಲಿ ತಸ್ಲಿಮಾ ಹಾಗೂ ಅಸ್ಲಾಂ ದಂಪತಿ ಬಂದಿದ್ದರು. ಆಧಾರ್ ಕಾರ್ಡ್ ತೋರಿಸಿ ಎಂಬ ನೆಪ ಮಾಡಿಕೊಂಡು ಮನೆಯಲ್ಲಿದ್ದ ದಿಲ್‌ಶಾದ್ ಮೇಲೆ ಹಲ್ಲೆ ನಡೆಸಲಾಗಿದೆ. ಸ್ಥಳದಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದ ದಿಲ್‌ಶಾದ್‌ರ ರಕ್ಷಣೆಗೆ ಸ್ಥಳೀಯರು ಬಂದಿದ್ದು, ಮನೆಯಲ್ಲಿ ಅಡಗಿ ಕುಳಿತಿದ್ದ ತಸ್ಲಿಮಾನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಕೆ ತಂದಿದ್ದ ಬ್ಯಾಗ್ ನಲ್ಲಿ ಕೆಲವು ಮಾರಕಾಸ್ತ್ರಗಳು ಇದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಾಯಾಳು ದಿಲ್‌ಶಾದ್‌ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.