ನಮೋಶಿ ಗೆಲುವು: ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ…..ಸುದ್ದಿ ಸಂಗ್ರಹ ವಾಡಿ
ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಶಶೀಲ್ ನಮೋಶಿ ಅವರ ಭರ್ಜರಿ ಗೆಲುವು ಖಚಿತವಾಗುತ್ತಿದ್ದಂತೆ, ವಾಡಿ ಪಟ್ಟಣದ ಆಝಾದ್ ವೃತ್ತದಲ್ಲಿ ಬಿಜೆಪಿ ಮುಖಂಡರು ಒಟ್ಟುಗೂಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು……ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು ಸೋಲಿಸುವ ಮೂಲಕ ಶಶೀಲ್ ನಮೋಶಿ ಅವರು ಐದನೇ ಬಾರಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಹರ್ಷ ಇಮ್ಮಡಿಸಿದೆ ಎಂದರು……’ಈ ಗೆಲುವು ರಾಜ್ಯ ಸರ್ಕಾರದ ಮೇಲಿರುವ ಆಡಳಿತ ವಿರೋಧಿ ಅಲೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈಶಾನ್ಯ ಭಾಗದಲ್ಲಿ ಬಿಜೆಪಿಯ ಭದ್ರಕೋಟೆ ಮುಂದುವರಿದಿದ್ದು, ಮುಂಬರುವ ಎಲ್ಲಾ ಚುನಾವಣೆಗಳಿಗೆ ಇದು ದಿಕ್ಸೂಚಿಯಾಗಿದೆ’ ಎಂದರು……ಈ ಸಂಭ್ರಮಾಚರಣೆಯಲ್ಲಿ ಜಿಲ್ಲಾ ರೈತ ಮೂರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ ರಾಠೋಡ, ಸ್ಥಳೀಯ ಎಸ್ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯುವ ಮೋರ್ಚಾ ಅಧ್ಯಕ್ಷ
ಭಾಗಣ್ಣ ದೊರೆ , ಮುಖಂಡರಾದ ಶರಣಗೌಡ ಚಾಮನೂರ, ಭೀಮರಾವ ದೊರೆ, ರಾಮು ರಾಠೋಡ, ರಿಚರ್ಡ್ ಮಾರೆಡ್ಡಿ, ಅಶೋಕ ಪವಾರ, ಕಿಶನ ಜಾಧವ, ಅಂಬದಾಸ ಜಾಧವ, ಹಣಮಂತ ಚವ್ಹಾಣ, ದತ್ತಾ ಖೈರೆ, ಗಣಪತ ಸುತ್ರಾವೆ, ಅಯ್ಯಣ್ಣ ದಂಡೋತಿ, ರವಿ ಜಾಧವ, ವಿಶಾಲ ನಿಂಬರ್ಗಾ, ಸತೀಶ ಸಾವಳಗಿ, ವಿಶ್ವರಾಧ್ಯ ತಳವಾರ, ಚಂದ್ರಶೇಖರ ಬೆಣ್ಣೂರ, ಪರಮೇಶ್ವರ ಚೊಪಡೆ, ರಾಜು ಗುತ್ತೆದಾರ, ಅಶೋಕ ಕೊಲಿ, ಮರಲಿಂಗ ದೇವಪುರ, ವಿನಾಯಕ ಖೈರೆ, ರಾಜು ಯಾದವ, ಸೋಮನಾಥ ಖೈರೆ ಸೇರಿದಂತೆ ಅನೇಕ ಬಿಜೆಪಿ ಪ್ರಮುಖರು ಪಾಲ್ಗೊಂಡಿದ್ದರು.