ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಐದನೇ ಸಲ ಗೆದ್ದ ಬಿಜೆಪಿಯ ಶಶೀಲ್ ನಮೋಶಿ‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ‌ಶಿಕ್ಷಕರ‌ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಐದನೇ ಬಾರಿ ಗೆಲುವಿನ ಬೀರಿದ್ದಾರೆ.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಭಾಸ್ಕರ್‌ ಸಭಾಂಗಣದಲ್ಲಿ ನಡೆದ ಮತಗಳ ಎಣಿಕೆಯ ವೇಳೆ ನಮೋಶಿ ಅವರು ಮೊದಲ ಸುತ್ತಿನಿಂದಲೇ ಬೃಹತ್‌ ಮುನ್ನಡೆ ಕಾಯ್ದುಕೊಂಡರು.

14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಿತು. ಮೊದಲ‌ ಸುತ್ತಿನಲ್ಲಿ‌ 14,001 ಮತಗಳ‌ ಎಣಿಕೆ ನಡೆದಿದ್ದು, 13,183 ಸಿಂಧು ಮತಗಳು ಮತ್ತು 818 ಮತಗಳು‌ ತಿರಸ್ಕೃತ ಇದ್ದವು.

ಪ್ರಾಶಸ್ತ್ಯದ ಮತಗಳ ಎಣಿಕೆಯ ಮೊದಲ ಸುತ್ತಿನ ಅಂತ್ಯಕ್ಕೆ ನಮೋಶಿ ಅವರು 7,243 ಮತ ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗಿಂತ 1,529 ಮತಗಳಿಂದ ಮುನ್ನಡೆ ಸಾಧಿಸಿದ್ದರು. ಆಗ ಮಟ್ಟೂರ ಅವರು 5,714 ಮತಗಳನ್ನು ಪಡೆದಿದ್ದರು.

ಎರಡನೇ ಸುತ್ತಿನಲ್ಲಿ ನಮೋಶಿ 7,288 ಮತಗಳನ್ನು ಪಡೆಯುವ ಮೂಲಕ ಒಟ್ಟು 14,531 ಮತಗಳನ್ನು ಪಡೆದರು. ಈ ಮೂಲಕ ತನ್ನ ಪ್ರತಿಸ್ಪರ್ಧಿ ಮಟ್ಟೂರ ಅವರಿಗಿಂತಲೂ 3,232 ಮತಗಳ ಮುನ್ನಡೆ ಗಳಿಸಿದರು.

ಗೆಲುವಿನ ಸಂಭ್ರಮ: ಗೆಲುವು ಖಚಿತವಾಗುತ್ತಿದ್ದಂತೆಯೇ ನಮೋಶಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್, ಬಿಜೆಪಿ ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *