ಸುದ್ದಿ ಸಂಗ್ರಹ ಶಹಾಬಾದ್
ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ ಯಾದಗಿರಿ, ಶಹಾಬಾದ್ ವತಿಯಿಂದ 2026ನೇ ಸಾಲಿನ ರಾಜ್ಯೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ನೀಡಲಾಗುವ ರಾಜ್ಯ ಮಟ್ಟದ ಗಿರಿಸಿರಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಯಾದಗಿರಿ ಅಧ್ಯಕ್ಷ ಮರಲಿಂಗ ಯಾದಗಿರಿ ಮತ್ತು ಶಹಾಬಾದ್ ತಾಲೂಕ ಅಧ್ಯಕ್ಷ ಅನೀಲಕುಮಾರ ಮೈನಾಳಕರ್ ತಿಳಿಸಿದ್ದಾರೆ.
ನಗರದ ಶ್ರೀ ಜಗದಂಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಚಿತ್ರಕಲೆ, ಕ್ರೀಡೆ, ಸಮಾಜ ಸೇವೆ, ಅಧ್ಯಾತ್ಮ, ಛಾಯಾಗ್ರಹಣ, ಗಾಯನ, ಶಿಲ್ಪಕಲೆ, ಕೃಷಿ, ವೈದ್ಯಕೀಯ, ವಿಜ್ಞಾನ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಸಾಧಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಅರ್ಹ ಸಾಧಕರು ತಮ್ಮ ಸಾಧನೆಗೆ ಸಂಬಂಧಿಸಿದ ದಾಖಲೆ ಮತ್ತು ಭಾವಚಿತ್ರವನ್ನು ಪಿಡಿಎಫ್ ರೂಪದಲ್ಲಿ ಅಕ್ಟೋಬರ್ 30ರೊಳಗೆ ಸಂಸ್ಥೆಯ ವಾಟ್ಸ್ಆ್ಯಪ್ ಸಂಖ್ಯೆಗೆ ಕಳುಹಿಸಬೇಕು. ಪ್ರಶಸ್ತಿ ಆಯ್ಕೆಯಲ್ಲಿ ಸಂಸ್ಥೆಯ ತೀರ್ಮಾನವೆ ಅಂತಿಮವಾಗಿರುತ್ತದೆ ಎಂದರು.
ಇದೆ ಸಂದರ್ಭದಲ್ಲಿ ಆಯೋಜಿಸಲಾಗುವ ಗಿರಿಸಿರಿ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಕಲಾ ತಂಡಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಅರ್ಜಿಗಳನ್ನು ಅನೀಲಕುಮಾರ ಮೈನಾಳಕರ್ 6361171117, ಮರಲಿಂಗ ಯಾದಗಿರಿ 9743168044 ಮತ್ತು ದುರ್ಗಪ್ಪ ಪೂಜಾರಿ 9663782458 ಅವರ ವಾಟ್ಸಪ್ ಸಂಖ್ಯೆಗೆ ಕಳುಹಿಸಲು ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶಿವಲಿಂಗಪ್ಪ ಹೆಬ್ಬಾಳಕರ್, ಅರವಿಂದ ಬಿರಾಳ, ಅಶೋಕ ಪೂಜಾರಿ, ಲಕ್ಷ್ಮಿಕಾಂತ್ ಬಳಿಚಕ್ರ, ವಿಶ್ವನಾಥ ವಿಶ್ವಕರ್ಮ ಮತ್ತು ಪ್ರವೀಣ ರಾಜನ್ ಉಪಸ್ಥಿತರಿದ್ದರು.