ಮಾನವನ ಎರಡನೆ ತಾಯಿ ಗೋಮಾತೆ, ಗೋ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಿವರಾಜ ಅಂಡಗಿ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಒಂದು ಹಸುವಿಗೆ ಆಹಾರ ನೀಡಿದರೆ ಮುಕ್ಕೋಟಿ ದೇವರಿಗೆ ನೈವೇದ್ಯ ನೀಡಿದ ಸಮ, ತಾಯಿ ಹಾಲಿಗಿಂತ ಹೆಚ್ಚು ಗೋವಿನ ಹಾಲು ಕುಡಿದ ನಾವು ಗೋ ಸಂರಕ್ಷಣೆ ಕರ್ತವ್ಯ ನಿರ್ವಹಿಸಬೇಕು ಎಂದು ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ಗೋ ಮಾತೆ ಪೂಜೆಗೆ ಸಂಗ್ರಹಿಸುವ ಕಾರ್ಯಕ್ಕೆ ಮುಂದಾದ ಮಕ್ತಂಪುರ ಮಠದಲ್ಲಿ ಗೋಶಾಲೆ ನಿರ್ಮಾಣ ಮಾಡಿದ ಪೂಜ್ಯ ಚರಲಿಂಗ ಮಹಾಸ್ವಾಮಿಗಳಿಗೆ ಕೋಟಿ ಪ್ರಣಾಮ ಸಲ್ಲಿಸಿ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಖ್ಯಾತ ಕವಿ ದ.ರಾ ಬೇಂದ್ರ ಭಾವಚಿತ್ರ ಉಡುಗೊರೆಯಾಗಿ ನೀಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ವಿದ್ಯಾನಗರ ವೆಲ್‌ಫೇರ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿನೋದಕುಮಾರ ಜೆನೆವರಿ, ಕನ್ನಡ ಉಪನ್ಯಾಸಕರಾದ ಡಾ.ನಾನಾಗೌಡ ಪಾಟೀಲ, ನ್ಯಾಯವಾದಿ ಬಸವರಾಜ ಅಗ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *