ಮದ್ವೆಯಾದ ಖುಷಿಯಲ್ಲಿದ್ದ ಚಿಕ್ಕಣ್ಣಗೆ ಶಾಕ್‌: ಇಬ್ಬರು ನಟರಿಗೆ ಕೋರ್ಟ್ ಸಮನ್ಸ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಬೆಂಗಳೂರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಹಾಗೂ ನಟ ಯಶಸ್ ಸೂರ್ಯ ಅವರಿಗೆ 59ನೇ ಸಿಸಿಎಚ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಇಬ್ಬರು ನಟರು, ಕೊಲೆಗೂ ಮುನ್ನ ಆರೋಪಿ ದರ್ಶನ್ ಭಾಗಿಯಾಗಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆ ಸಾಕ್ಷ್ಯಿ ಹೇಳಲು ನ್ಯಾಯಾಲಯ ಸಮನ್ಸ್ ನೀಡಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ 59ನೇ ಸಿಸಿಎಚ್ ಕೋರ್ಟ್, ಅಕ್ಟೋಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರು ನಟರಿಗೆ ಸಮನ್ಸ್‌ ಜಾರಿಗೊಳಿಸಿದೆ. ನಟ ಚಿಕ್ಕಣ್ಣ ಅವರಿಗೆ CW-80 ಮತ್ತು ನಟ ಯಶಸ್ ಸೂರ್ಯ ಅವರಿಗೆ CW-98 ಸಮನ್ಸ್ ಜಾರಿ ಮಾಡಲಾಗಿದೆ.

ಬೆಂಗಳೂರಿನ ಸ್ಟೋನಿ ಬ್ರೂಕ್‌ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಇಬ್ಬರು ನಟರು ಕೊಲೆ ಆರೋಪಿ ದರ್ಶನ್‌ ಜೊತೆಗೆ . ಭಾಗಿಯಾಗಿದ್ದರು ಈ ಕುರಿತಂತೆ ನ್ಯಾಯಾಲಯದಲ್ಲಿ ಸಾಕ್ಷ್ಯಿ ನೀಡುವಂತೆ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.

Leave a Reply

Your email address will not be published. Required fields are marked *