ಸುದ್ದಿ ಸಂಗ್ರಹ ನವದೆಹಲಿ
ಭೂಮಿಯು ಬಹುತೇಕ ಕೆಂಪು ಬಣ್ಣಕ್ಕೆ ಬದಲಾಗುತ್ತಿದ್ದು, ‘ಸೂಪರ್-ಡೂಪರ್ ಎಲ್ ನಿನೋ’ ಬಗ್ಗೆ ಮತ್ತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್- ನವೆಂಬರ್ -ಡಿಸೆಂಬರ್ ಅವಧಿಯಲ್ಲಿ ಎಲ್ ನಿನೋ ಕಾರಣದಿಂದಾಗಿ ತಾಪಮಾನದ ವ್ಯತ್ಯಾಸವು ಸಾಮಾನ್ಯಕ್ಕಿಂತ ಸುಮಾರು 3.7 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ. 1950 ರಿಂದೀಚೆಗೆ ಕಂಡುಬಂದ ಅತ್ಯಂತ ಪ್ರಬಲ ಹವಾಮಾನ ವಿದ್ಯಮಾನಗಳಲ್ಲಿ ಈ ವರ್ಷದ ಎಲ್ ನಿನೋ ಕೂಡ ಒಂದಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ವಿಶ್ವಸಂಸ್ಥೆಯ ಹವಾಮಾನ ಮತ್ತು ವಾತಾವರಣ ಸಂಸ್ಥೆಯಾದ ‘ವಿಶ್ವ ಹವಾಮಾನ ಸಂಸ್ಥೆ’, ಎಲ್ ನಿನೋ ಮಾನವ-ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮಗಳು ಇನ್ನಷ್ಟು ಹೆಚ್ಚಿಸಲಿದೆ. ಪೆಸಿಫಿಕ್ ಸಾಗರವು ತನ್ನಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಶಾಖವನ್ನು ಹೊರಹಾಕುವುದರಿಂದ, ಭೂಮಿಯ ಬಹುಭಾಗವು ಅಸಾಮಾನ್ಯವಾಗಿ ಹೆಚ್ಚಿನ ತಾಪಮಾನವನ್ನು ಅನುಭವಿಸಲಿದೆ ಎಂದಿದೆ. ಅಲ್ಲದೆ ಎಲ್ ನಿನೋ ಫೆಬ್ರವರಿ 2027ರವರೆಗೆ ಮುಂದುವರಿಯಲಿದೆ ಅಂತಲೂ ತಿಳಿಸಿದೆ.