ಕಲಬುರಗಿ: ಗ್ರಾಮಲೆಕ್ಕಾಧಿಕಾರಿ, ಖಾಸಗಿ ವ್ಯಕ್ತಿ ಲೋಕಾಯುಕ್ತ ಬಲೆಗೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಜಮೀನು ಮ್ಯೂಟೇಷನ್‌ ಮಾಡಿಕೊಡಲು 10 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಗ್ರಾಮ ಆಡಳಿತಾಧಿಕಾರಿ ಮತ್ತು ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ಟ್ರ್ಯಾಪ್‌ ಮಾಡಿದ್ದಾರೆ.

ಉದನೂರು ಗ್ರಾಮದ ಆಡಳಿತಾಧಿಕಾರಿ ರಮೇಶ ಮತ್ತು ಲಂಚ ಪಡೆಯಲು ಮಧ್ಯಸ್ಥಿಕೆ ವಹಿಸಿದ್ದ ಖಾಸಗಿ ವ್ಯಕ್ತಿ ಸಾಗರ ಲೋಕಾಯುಕ್ತ ಬಲೆಗೆ ಬಿದ್ದವರು.

ಸತೀಶಕುಮಾರ ಎಂಬುವರು ನೀಡಿದ ದೂರಿನನ್ವಯ ಲೋಕಾಯುಕ್ತ ಎಸ್ಪಿ ಸಿ ಸಿದ್ದರಾಜು ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ರಾಜಶೇಖರ ಬಡದೇಸಾರ ನೇತೃತ್ವದ ತಂಡವು ಜಿಲ್ಲಾ ಪಂಚಾಯಿತಿ ಕಚೇರಿ ಆವರಣದ ಕಂದಾಯ ಇಲಾಖೆ ಕಚೇರಿಯಲ್ಲಿ ಈ ದಾಳಿ ನಡೆಸಿದ್ದಾರೆ.

ಸತೀಶಕುಮಾರ ಅವರ ತಾಯಿ ಮಲ್ಲಮ್ಮ ಪಾಟೀಲ ಹೆಸರಿನಲ್ಲಿ ಉದನೂರ ಗ್ರಾಮದ ಸರ್ವೆ ನಂ.76/2ರಲ್ಲಿ 4 ಎಕರೆ ಮತ್ತು ಸರ್ವೆ ನಂ.95/3ರಲ್ಲಿ 3 ಎಕರೆ 34 ಗುಂಟೆ ಸೇರಿದಂತೆ ಒಟ್ಟು 7 ಎಕರೆ 34 ಗುಂಟೆ ಜಮೀನು ಹೊಂದಿದ್ದಾರೆ. ಆ ಜಮೀನು ಮ್ಯೂಟೇಷನ್‌ ಮಾಡಿಕೊಡಲು ಗ್ರಾಮ ಆಡಳಿತಾಧಿಕಾರಿ ಖಾಸಗಿ ವ್ಯಕ್ತಿಯ ಮೂಲಕ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *