ಸುದ್ದಿ ಸಂಗ್ರಹ ಕಲಬುರಗಿ
ನಗರರದ ಆನಂದೇಶ್ವರ ನಗರದ ಸಾಯಿ ಮಂದಿರ ಸಮೀಪದ ಮನೆಯೊಂದರ ಕೀಲಿ ಮುರಿದ ಕಳ್ಳರು 45 ಗ್ರಾಂ ಚಿನ್ನಾಭರಣ ಮತ್ತು 4.50 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ವ್ಯಾಪಾರಿ ರಾಕೇಶ ರೆಡ್ಡಿ ಚಿನ್ನಾಭರಣ, ನಗದು ಕಳೆದುಕೊಂಡವರು. ತಂದೆಗೆ ಹುಷಾರಿಲ್ಲದ ಕಾರಣ ಸೆಪ್ಟೆಂಬರ್ 19ರಂದು ಆಸ್ಪತ್ರೆಗೆ ದಾಖಲಿಸಿದ್ದೆ. ಮನೆಯವರೆಲ್ಲರೂ ಆಸ್ಪತ್ರೆಯಲ್ಲೆ ಇದ್ದೆವು. ಸೆಪ್ಟೆಂಬರ್ 20ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದೆವು. ಅಷ್ಟೊತ್ತಿಗೆ ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಒಡೆದಿತ್ತು. ಮನೆಯೊಳಗೆ ಹೋಗಿ ನೋಡಿದಾಗ ಕಳವು ಮಾಡಿದ ಸಂಗತಿ ಬೆಳಕಿಗೆ ಬಂತು ಎಂದು ರಾಕೇಶ ರೆಡ್ಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.