ಬಿಗ್‌ಬಾಸ್‌ನಲ್ಲಿ ಹೊಸ ದಾಖಲೆ: ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ

ಸುದ್ದಿ ಸಂಗ್ರಹ

ಈ ಬಾರಿ ಬಿಗ್‌ಬಾಸ್ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದೆ. ನಾಲ್ಕೂ ಆವೃತ್ತಿಗಳ ನಿರೂಪಕರಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಇದೆ ಮೊದಲ ಬಾರಿಗೆ ಒಂದೆ ಪರದೆ ಮೇಲೆ ಪ್ರೊಮೋದಲ್ಲಿ ಕಾಣಿಸ್ಕೊಂಡಿದ್ದಾರೆ.

ಎಲ್ಲಾ ಭಾಷೆಯ ಬಿಗ್‌ಬಾಸ್ ಕಾರ್ಯಕ್ರಮ ಸೆ.5, 2026ರಿಂದ ಪ್ರಾರಂಭವಾಗ್ತಿರೋದು ವಿಶೇಷ. ಬಿಗ್‌ಬಾಸ್ ಇತಿಹಾಸದಲ್ಲೆ ನಾಲ್ಕು ಆವೃತ್ತಿಯ ಆಯಾ ಸರಣಿ ಒಂದೆ ದಿನ ಪ್ರೀಮಿಯರ್ ಆಗ್ತಿರೋದು ಇದೆ ಮೊದಲು. ಒಂದೆ ಪ್ರೋಮೋದಲ್ಲೂ ನಾಲ್ವರು ನಿರೂಪಕರು ಕಾಣಿಸ್ಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಟೀಮ್ ಹೊಸ ಚಾಲೆಂಜ್ ಸ್ವೀಕರಿಸಿದೆ.

ವಿಭಿನ್ನವಾಗಿ ಪ್ರೊಮೋ ರಚಿಸಲಾಗಿದ್ದು ನಾಲ್ಕು ಭಾಷೆಯ ಒಂದೆ ಪ್ರೋಮೋ ಮಾಡಲಾಗಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ರಿಯಾಲಿಟಿ ಶೋ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗುತ್ತಿದೆ ಎಂದರೂ ತಪ್ಪಾಗೋದಿಲ್ಲ.

Leave a Reply

Your email address will not be published. Required fields are marked *