ಕಲಬುರಗಿ–ಬೆಂಗಳೂರು ವಿಮಾನಯಾನ ಪುನರಾರಂಭ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ಮತ್ತು ಬೆಂಗಳೂರು ನಡುವಣ ನಿತ್ಯ ವಿಮಾನ ಸೇವೆಗೆ ಜೂನ್‌ 10ರಿಂದ ಮತ್ತೆ ಚಾಲನೆ ಸಿಗಲಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸ್ಟಾರ್‌ ಏರ್‌ ಸಂಸ್ಥೆಯು, ನಿತ್ಯ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.10ಕ್ಕೆ ಕಲಬುರಗಿ ತಲುಪಲಿದೆ. ಸಂಜೆ 7.40ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 8.50ಕ್ಕೆ ಬೆಂಗಳೂರು ತಲುಪಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಜೂನ್ 10ರಿಂದ ಬುಕಿಂಗ್‌ ಅವಕಾಶ ನೀಡಿದೆ. ಈ ನಿರ್ಧಾರವು ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.

2025ರ ಅಕ್ಟೋಬರ್‌ 8ರಂದು ಕಲಬುರಗಿ–ಬೆಂಗಳೂರು ನಡುವೆ ಕೊನೆಯದಾಗಿ ವಿಮಾನ ಹಾರಾಡಿತ್ತು. ಅಂದಿನಿಂದ ಇಂದಿನ ವರೆಗೆ ಹೆಲಿಕಾಪ್ಟರ್‌ಗಳು ಹಾಗೂ ವಿಶೇಷ ವಿಮಾನಗಳಿಗೆ ಮಾತ್ರ ಕಲಬುರಗಿ ವಿಮಾನ ನಿಲ್ದಾಣದ ಸೇವೆ ಸೀಮಿತವಾಗಿದೆ. ಕೆಕೆಸಿಸಿಐ ಸೇರಿದಂತೆ ಈ ಭಾಗದ ಅನೇಕ ಸಂಘ–ಸಂಸ್ಥೆಗಳು, ಜನಪ್ರತಿನಿಧಿಗಳು ವಿಮಾನಯಾನ ಪುನರಾರಂಭಕ್ಕೆ ಒತ್ತಾಯಿಸಿದ್ದರು. ವಿಮಾನಯಾನ ಸೇವೆ ಸ್ಥಗಿತವು ಬಿಜೆಪಿ–ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.

Leave a Reply

Your email address will not be published. Required fields are marked *