ರಾಜ್ಯದಲ್ಲಿ ಮತಪಟ್ಟಿಯಿಂದ 1 ಕೋಟಿ ಮತದಾರರಿಗೆ ಶಾಕ್

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ 1 ಕೋಟಿ 5 ಲಕ್ಷದ ಮತದಾರರ ಹೆಸರು ಡಿಲೀಟ್ ಆಗಿದೆ. ಎಸ್‌ಐಆರ್ (SIR) ನಡೆಸುತ್ತಿರುವ ಚುನಾವಣಾ ಆಯೋಗ 1,05,12,457 ಮತದಾರರನ್ನು ಎಎಸ್‌ಡಿಡಿಓ-ಅಂದರೆ ಆಬ್ಸೆಂಟ್, ಶಿಫ್ಟ್, ಡೆತ್, ಡುಪ್ಲಿಕೇಟ್ ಮತ್ತು ಅದರ್ ರೀಸನ್ ಅಂತ ಮಾರ್ಕ್ ಮಾಡಲಾಗಿದೆ.

ಇದಕ್ಕೆ ಆಕ್ಷೇಪಣೆ ಸಲ್ಲಿಸಲು, ಸರಿಪಡಿಸಿಕೊಳ್ಳಲು ಅವಕಾಶ ಇದೆ. ಆಂಧ್ರಪ್ರದೇಶ ಮತ್ತು ಹರಿಯಾಣದ ಮತದಾರರ ಕರಡುಪಟ್ಟಿ ಶುಕ್ರವಾರ ಪ್ರಕಟವಾಗಿದ್ದು, ಡಿಲೀಟ್ ಮಾಡಲಾದ ಹೆಸರುಗಳ ಸಂಖ್ಯೆ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಮೂರನೇ ಹಂತದ ಬಳಿಕ ಒಂದು ಕೋಟಿ ದಾಟಿದೆ. ಆಂಧ್ರಪ್ರದೇಶದಲ್ಲಿ ಒಟ್ಟು 44.89 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ. ಇದರೊಂದಿಗೆ ಮತದಾರರ ಸಂಖ್ಯೆ 4.16 ಕೋಟಿಯಿಂದ 3.71 ಕೋಟಿಗೆ ಇಳಿದಿದೆ.

ಹರಿಯಾಣದಲ್ಲಿ ಒಟ್ಟು 33.83 ಲಕ್ಷ ಹೆಸರುಗಳನ್ನು ತೆಗೆಯಲಾಗಿದೆ. ಆಂಧ್ರಪ್ರದೇಶ, ಹರಿಯಾಣ ಮಾತ್ರವಲ್ಲದೆ, ಈವರೆಗೆ ಒಡಿಶಾ, ಮಣಿಪುರ, ಮಿಜೋರಾಂ, ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಉತ್ತರಾಖಂಡ, ಚಂಡೀಗಢ ಮತ್ತು ಅರುಣಾಚಲ ಪ್ರದೇಶದ ಕರಡು ಪಟ್ಟಿಗಳ ಪ್ರಕಟವಾಗಿದೆ.

ಈವರೆಗೆ ಒಟ್ಟು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಇಲ್ಲಿನ 10.89 ಕೋಟಿ ಮತದಾರರ ಪೈಕಿ, ನಿಧನ, ಶಾಶ್ವತ ಸ್ಥಳಾಂತರ ಮತ್ತು ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಣಿಯಾಗಿರುವ ಕಾರಣದಿಂದಾಗಿ 1.13 ಕೋಟಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಉಳಿದಂತೆ 9.75 ಕೋಟಿ ಜನರ ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *