ಸುದ್ದಿ ಸಂಗ್ರಹ ಶಹಾಬಾದ್
ಎಲ್ಲ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಬರೆಯುವ ಮೂಲಕ ಸಮಾಜದ ಕಣ್ಣು ತೆರೆಸುವ ಕೆಲಸ ಪತ್ರಕರ್ತರು ಮಾಡುತ್ತಾರೆ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು.
ನಗರದ ಪಾರ್ವತಿ ಸಭಾಗೃಹದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಛಾಯಾಚಿತ್ರ ಪ್ರದರ್ಶನ ಮತ್ತು ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಶಹಾಬಾದ್ ಪತ್ರಕರ್ತರು ರಾಜಕೀಯ ರಹಿತ ವರದಿ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಪತ್ರಕರ್ತರು ಸ್ಥಳವನ್ನು ಗುರುತಿಸಿದರೆ, ಪತ್ರಿಕಾ ಭವನಕ್ಕೆ ಅನುದಾನ ನೀಡುವುದಾಗಿ ಈಗಾಗಲೆ ಹೇಳಿದ್ದು, ಈ ಮಾತಿಗೆ ನಾನು ಬದ್ಧನಾಗಿದ್ದೆನೆ ಎಂದರು.
ಪಿಐ ಪರಶುರಾಮ ವನಂಜಕರ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಎಐ ಮೂಲಕ ಸುದ್ದಿಗಳನ್ನು ತಿರುಚುವ, ಸಮಾಜದ ಸ್ವಾಸ್ಥ್ಯಾ ಕೆಡಿಸುವ ಕೆಲಸ ಹೆಚ್ಚು ನಡೆಯುತ್ತಿವೆ. ಜನರು ಅಂತಹ ಸುದ್ದಿಗಳ ಬಗ್ಗೆ ಎಚ್ಚರವಹಿಸಬೇಕು. ಆದರೆ ಪತ್ರಿಕಾ ಮಾಧ್ಯಮ ಯಾವುದೆ ವಿಷಯವಿರಲಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಕಲೆಹಾಕಿ ವರದಿ ಮಾಡುತ್ತಾರೆ. ಹೀಗಾಗಿ ಮುದ್ರಣ ಮಾಧ್ಯಮ ತನ್ನ ಮಹತ್ವ ಕಾಪಾಡಿಕೊಂಡಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಸಾಮಾಜಿಕ, ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಪತ್ರಿಕೆಗಳು ಇಂದಿಗೂ ಜನರ ಭರವಸೆ ಉಳಿಸಿಕೊಂಡಿವೆ. ಇಂದು ಅನಧಿಕೃತ ಪತ್ರಕರ್ತರು ಹೆಚ್ಚಿದ್ದು, ಅಂತವರ ವಿರುದ್ಧ ಕ್ರಮಕ್ಕೆ ರಾಜ್ಯ ಸಮಿತಿಗೆ ಈಗಾಗಲೆ ದೂರು ಸಲ್ಲಿಸಲಾಗಿದೆ ಎಂದರು.
ಸಮಾಜ ಸೇವಕ ಡಾ.ಫಾರೂಕ್ ಮಣ್ಣೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಕರಣಿಕ ಮಾತನಾಡಿದರು.
ಛಾಯಾಗ್ರಾಹಕ ನಾರಾಯಣ ಜೋಶಿ, ಖಾಜಾ ಪಟೇಲ್ ಕಲ್ಲಬೇನೂರ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ತಾ.ಪಂ ಇಒ ಮಲ್ಲಿನಾಥ ರಾವೂರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.
1 ಲಕ್ಷ ರೂ.ಗಳ ಆರೋಗ್ಯ ವಿಮೆ
ಶಹಾಬಾದ್ ತಾಲೂಕಿನ ಪತ್ರಕರ್ತರು ವಿಶಿಷ್ಟವಾಗಿದ್ದು, ರಾಜಕೀಯ ರಹಿತ ವರದಿ ಮಾಡುವ ಮೂಲಕ ಅಭಿವೃದ್ಧಿಗಾಗಿ ಕೆಲಸ ಮಾಡತ್ತಿದ್ದಾರೆ. ಸಾಮಾಜಿಕ ಕಳಕಳಿಯ ಪ್ರಬುದ್ಧ ಪತ್ರಕರ್ತರಾಗಿದ್ದಾರೆ. ಹೀಗಾಗಿ ಶಹಾಬಾದ್ನ ಎಲ್ಲ ಪತ್ರಕರ್ತರಿಗೆ 1 ಲಕ್ಷ ರೂ.ಗಳ ಆರೋಗ್ಯ ವಿಮೆ ಮಾಡಿಸುವೆ ಎಂದು ಸಾಮಾಜಿಕ ಕಾರ್ಯಕರ್ತ, ಮಣ್ಣೂರ ಆಸ್ಪತ್ರೆ ಮುಖ್ಯಸ್ಥ ಡಾ.ಫಾರೂಕ್ ಮಣ್ಣೂರ ಘೋಷಿಸಿದರು.
ಕಾಡಾ ಅಧ್ಯಕ್ಷ ಡಾ.ಎಂ ರಶೀದ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಕೆ.ರಮೇಶ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ರಾಜಕುಮಾರ ಉದನೂರ, ಜಿಲ್ಲಾ ಕಾರ್ಯದರ್ಶಿ ವಾಸುದೇವ್ ಚವ್ಹಾಣ್, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ಪ್ರಕಾಶ ಜೈನ್, ಶರಣಗೌಡ ಪೊಲೀಸ್ ಪಾಟೀಲ್, ಅಪ್ಪಾರಾವ ಮಾಲಿಪಾಟೀಲ್, ಮಲ್ಲಣ್ಣ ಅಲ್ಲೂರ, ಮಲ್ಲಿಕಾರ್ಜುನ ಇಟಗಿ, ಈಶ್ವರ ಮುಗುಳನಾಗಾವ್, ಮೃತ್ಯುಂಜಯ ಸ್ವಾಮಿ, ವಿಶ್ವಾರಾಧ್ಯ ಬಿರಾಳ, ಶರಣಬಸಪ್ಪ ಕೋಬಾಳ, ಬಾಬುರಾವ ಪಂಚಾಳ, ರಾಜೇಶ ಯನಗುಂಟಿಕರ್, ಶರಣು ಪಗಲಾಪುರ, ನಿಂಗಣ್ಣ ಹುಳಗೋಳ, ಭೀಮರಾವ ಸಾಳೊಂಕೆ, ಕಾಶಣ್ಣ ಚನ್ನೂರ, ಶಿವುಕುಮಾರ ಇಂಗಿನಶೆಟ್ಟಿ, ಡಾ.ಅಹ್ಮದ್ ಪಟೇಲ್, ಶೇರ್ ಅಲಿ, ಚಾಂದ್ಪಾಶಾ, ಮಹ್ಮದ್ ಉಬೇದುಲ್ಲಾ, ಶಿವಲಿಂಗಪ್ಪ ಹೆಬ್ಬಾಳಕರ್, ಮರಲಿಂಗ ಯಾದಗಿರಿ, ಶಂಕರ ಜಾನಾ, ಕೃಷ್ಣಪ್ಪ ಕರಣಿಕ, ಪತ್ರಕರ್ತರಾದ ಮಹ್ಮದ್ ಮುಸ್ತಾಕ್, ದಾಮೋಧರ ಭಟ್ಟ, ಸಿದ್ದರಾಜ ಮಲ್ಕಂಡಿ, ಸಾಬಣ್ಣ ಗುಡುಬಾ, ವಿಕ್ರಮ ನಿಂರ್ಬಗಾ, ದಯಾನಂದ ಖಜೂರಿ, ವಿಜಯಕುಮಾರ ನೀಲಗಾರ, ಬಾಬಾ ಖಾನ್, ಶಶಿಕಾಂತ ಮಡಿವಾಳ ಇದ್ದರು.
ಸಿದ್ದು ಹರವಾಳ, ನಿಂಗಣ್ಣ ಸಂಗಾವಿಕರ, ಭಾಗ್ಯಶ್ರೀ, ರೇವಮ್ಮ ಗುಲಜಾರಕರ ಹಾಡುಗಳು ಪ್ರಸ್ತುತ ಪಡಿಸಿದರು. ಲೋಹಿತ ಕಟ್ಟಿ ನಿರೂಪಿಸಿದರು, ನಿಂಗಣ್ಣ ಜಂಬಗಿ ಸ್ವಾಗತಿಸಿದರು, ಶಿವುಕುಮಾರ ಕುಸಾಳೆ ವಂದಿಸಿದರು.