ರಾಯಚೂರಿನ ಸಿಂಧನೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ಪ್ರಜೆಗೆ 3 ವರ್ಷ ಜೈಲು ಶಿಕ್ಷೆ

ಜಿಲ್ಲೆ

ಸುದ್ದಿ ಸಂಗ್ರಹ ರಾಯಚೂರು
ಸಿಂಧನೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ಪ್ರಜೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಂಧನೂರು 2ನೇ ಅಧಿಕ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ತೀರ್ಪು ನೀಡಿದೆ.‌

ಆರೋಪಿ ಶೋರನಜಿತ್ ಮಂಡಲ್‌ಗೆ 3 ವರ್ಷ ಸಜೆ ಮತ್ತು 5,000 ರೂ. ದಂಡ ನ್ಯಾಯಾಲಯ ವಿಧಿಸಿದೆ. ಸಿಂಧನೂರು ತಾಲೂಕಿನ ಆರ್‌ಎಚ್ ಕ್ಯಾಂಪ್ 3ರಲ್ಲಿ 12 ವರ್ಷಗಳಿಂದ ವಾಸಿಸುತ್ತಿದ್ದ ಶೋರನಜಿತ್ ಮಂಡಲ್ ಬಾಂಗ್ಲಾ ವಲಸಿಗರು ವಾಸಿಸುತ್ತಿರುವ ಆರ್‌ಎಚ್ ಕ್ಯಾಂಪ್ 3ರಲ್ಲಿ ಸೇರಿಕೊಂಡಿದ್ದ. ನಕಲಿ ದಾಖಲೆ ಸೃಷ್ಟಿಸಿ 2018ರಲ್ಲಿ ಭಾರತದಲ್ಲಿ ಪಾಸ್‌ಪೋರ್ಟ್ ಪಡೆದಿದ್ದ ಆರೋಪಿ ಬಾಂಗ್ಲಾದೇಶದಲ್ಲಿನ ತಂದೆ-ತಾಯಿ ನೋಡಲು ವಾಪಸ್ ಮರಳುವಾಗ ಸಿಕ್ಕಿಬಿದ್ದಿದ್ದ.

ಮುಖ್ಯ ಇಮಿಗ್ರೇಷನ್ ಅಧಿಕಾರಿ ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಭಾರತೀಯ ಪ್ರಜೆಯಲ್ಲಾ ಎನ್ನುವ ಸತ್ಯ ಬಯಲಾಗಿತ್ತು. ಆರೋಪಿ ಬಳಿಯಿದ್ದ ಭಾರತೀಯ ಪಾಸ್‌ಪೋರ್ಟ್‌ನ್ನು ವಶಕ್ಕೆ ಪಡೆದಿದ್ದರು. 2018ರಲ್ಲಿ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತೀರ್ಪು ಈಗ ಪ್ರಕಟವಾಗಿದ್ದು, ಶಿಕ್ಷೆ ಬಳಿಕ ಆರೋಪಿಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ ಕೊಡಲು ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *