ಸುದ್ದಿ ಸಂಗ್ರಹ ಕಲಬುರಗಿ
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ರಾಮಗೇರಿ ನಿವಾಸಿ, ಶಿಕ್ಷಣ ಪ್ರೇಮಿ, ಭೂ ದಾನಿಯಾಗಿದ್ದ ವೀರನಗೌಡ ಪಾಟೀಲ (84) ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ನಿಧನ ಹೊಂದಿರುವ ದಿವ್ಯಚೇತನರಾದ ವೀರಗೌಡರಿಗೆ ಪತ್ನಿ, ಪುತ್ರರಾದ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮತ್ತು ಪುತ್ರಿ ಇದ್ದಾರೆ.
ವೀರನಗೌಡರು ಶಿಕ್ಷಣದ ಬಗ್ಗೆ ಅಪಾರವಾದ ಗೌರವ ಹೊಂದಿದ್ದು ಇವರನ್ನು ಶಿಕ್ಷಣ ಪ್ರೇಮಿ ಎಂದೆ ಗುರುತಿಸಿಕೊಂಡಿದ್ದಾರೆ. ಇವರ ಪುತ್ರ ಡಿವೈಎಸ್ಪಿ ಶಂಕರಗೌಡ ಪಾಟೀಲರು ಸಹ ತಂದೆಯಂತೆ ಸ್ನೇಹಮಯಿ ಹಾಗೂ ಮಾನವೀಯತೆಗೆ ಹೆಸರುವಾಸಿಯಾಗಿದ್ದಾರೆ. ಇಂದು ವೀರನಗೌಡರ ನಿಧನದಿಂದಾಗಿ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ದುಃಖಿತರಾಗಿ ಕಣ್ಣಿರಾಖಿದ್ದಾರೆ.
ಮೀರನಗೌಡರು ತಮ್ಮ ಕೂಟುಂಬಸ್ಥರು, ಅಪಾರ ಸ್ನೇಹಿತ ಬಹಳ ಹಾಗೂ ಸಂಬಂಧಿಕರನ್ನು ಅಗಲಿದ್ದಾರೆ, ದಿ.ವೀರನಗೌಡರ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ನೆರವೆರುವದು ಎಂದು ಮೂಲಗಳಿಂದ ತಿಳಿದು ಬಂದಿದೆ.