ಸುದ್ದಿ ಸಂಗ್ರಹ ಚಿತ್ತಾಪುರ
ರಾಜ್ಯ ಚುನಾವಣೆ ಆಯೋಗದಿಂದ ನಡೆಯುತ್ತಿರುವ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದಲ್ಲಿ ಗುರುವಾರದವರೆಗೆ ಒಟ್ಟು ಶೇ. 98.22 ಅರ್ಜಿ ವಿತರಿಸಲಾಗಿದೆ.
ಮತಕ್ಷೇತ್ರದ ವ್ಯಾಪ್ತಿಯ 257 ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಒಟ್ಟು 2,51,226 ಮತದಾರರ ಪೈಕಿ 2,46,751 ಮತದಾರರಿಗೆ ಅರ್ಜಿ ವಿತರಣೆ ಮಾಡಿದ್ದಾರೆ.
ಜೂ.30 ರಿಂದ ಗುರುವಾರದವರೆಗೆ ಒಟ್ಟು 16,718 ಮತದಾರರು ತಮಗೆ ಕೊಟ್ಟಿರುವ ಅರ್ಜಿಗಳನ್ನು ಭರ್ತಿ ಮಾಡಿಕೊಟ್ಟಿದ್ದು ಡಿಜಿಟಲೈಜ್ ಮಾಡಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಮತದಾರರಿಗೆ ಕೊಟ್ಟಿರುವ ಅರ್ಜಿಯ ಭರ್ತಿ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹಾಯ ಮಾಡುತ್ತಿದ್ದು ಮತದಾರರಿಗೆ ಅನುಕೂಲವಾಗಿದೆ.
ರಾಜಕೀಯ ಪಕ್ಷಗಳು ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಗ್ರಾಮೀಣ ಭಾಗದಲ್ಲಿ ಸಂಚರಿಸಿ ಸಭೆಗಳನ್ನು ನಡೆಸಿ ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.