ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಂದ ಸೈಕಲ್ ರ‍್ಯಾಲಿ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಪಟ್ಟಣದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಕುಂದನೂರ ವೃತ್ತದಿಂದ ಶ್ರೀನಿವಾಸ ಗುಡಿ ವೃತ್ತ, ಬಸವೇಶ್ವರ ವೃತ್ತ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಆಝಾದ್ ವೃತ್ತದವರೆಗೆ ಪಟ್ಟಣದ ವಿವಿಧ ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳಿಂದ ಸೈಕಲ್‌ ಜಾಥಾ ನಡೆಯಿತು.

ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ,
12ನೇ ಅಂತರರಾಷ್ಟ್ರೀಯ ಯೋಗ ದಿನದ ಘೋಷ ವಾಕ್ಯವಾದ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಸಂದೇಶದ ಮಹತ್ವ ಸಾರುವುದು ಸೈಕಲ್‌ ಜಾಥಾದ ಉದ್ದೇಶವಾಗಿದೆ ಎಂದರು.

ದೈಹಿಕ ಶಕ್ತಿ, ಮಾನಸಿಕ ನೆಮ್ಮದಿ ಜೊತೆಗೆ ದೀರ್ಘಾಯುಷ್ಯ ಕಾಪಾಡಿಕೊಳ್ಳುವ ಸಲುವಾಗಿ ಪರಿಸರ ಕಾಳಜಿ ಜೊತೆಗೆ ಯೋಗ ಒಂದು ಅತ್ಯುತ್ತಮ ಮಾರ್ಗವಾಗಿದೆ, ಅದನ್ನು ನಮ್ಮ ಬದುಕಿನ ಭಾಗವಾಗಿಸಲು 21ರಂದು ಬೆಳಗ್ಗೆ 6:30ಕ್ಕೆ ಪಟ್ಟಣದ ರೈಲ್ವೆ ಬ್ರೀಡ್ಜ್ ಹತ್ತಿರದ ಮುನಿಯಪ್ಪ ದಾಸ ಶಾಲಾ ಆವರಣದಲ್ಲಿ ಜರುಗುವ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಉಪಸ್ಥಿತ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕರೆ ನೀಡಿದರು.

ಪೋಲಿಸ್ ಸಿಬ್ಬಂದಿಗಳಾದ ಬಸವಲಿಂಗಪ್ಪ ಮುನ್ಗಲ್, ಶಿವಕುಮಾರ ವರಕೇರಿ ಸುಗಮ ಸಂಚಾರದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಡಿಎವಿ ಶಾಲೆಯ ಅನ್ವರ ಹುಸೇನ್, ಪ್ರಮೋದ್ ಕುಲಕರ್ಣಿ, ಬಿ ಸುಧಾಕರ, ರೇವಣಸಿದ್ದಯ್ಯ, ಮಹಾತ್ಮ ಗಾಂಧಿ ಶಾಲೆಯ ಲಿಂಬು ರಾಠೋಡ, ಸೆಂಟ್ ಅಂಬ್ರುಷ್ ಶಾಲೆಯ ಚಾರ್ಲಿ ಹಾಗೂ ಗಂಗಮಾತೆ ಪ್ರೌಢ ಶಾಲೆಯ ಮುಕುಂದ ಕರ್ಲಿ,
ಮುಖಂಡರಾದ ದೀಪಕ ಸಾತಖೇಡ ಮತ್ತು ಭೀಮಣ್ಣ ಹವಾಲ್ದಾರ್ ಇದ್ದರು.

ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *