ಕಲಬುರಗಿ ನಗರದಲ್ಲಿ ನಡುರಾತ್ರಿ ಲಘು ಭೂಕಂಪ: ಭಯಗೊಂಡ ಜನತೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನಗರ ಸೇರಿದಂತೆ ಕೆಲವು ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ನಸುಕಿನ 1.30ರ ವೇಳೆ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಇದರಿಂದಾಗಿ ಜನ ಭಯಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ನಡೆದಿದೆ.

ಭೂಮಿ ಕಂಪಿಸುತ್ತಿದ್ದಂತೆ ಹಲವು ಮನೆಗಳಲ್ಲಿ ಕಿಟಕಿ, ಬಾಗಿಲುಗಳು ಸದ್ದು ಮಾಡಿವೆ ಮತ್ತು ಮೇಲ್ಮಟ್ಟದಲ್ಲಿ ಇಟ್ಟಿದ್ದ ವಸ್ತುಗಳು ನೆಲಕ್ಕುರುಳಿ ಬಿದ್ದಿದ್ದು, ಆಗ ಜನರಿಗೆ ಇದು ಭೂಕಂಪ ಎಂಬುದು ಗೊತ್ತಾಗಿದೆ. ಇದರಿಂದಾಗಿ ಭಯಗೊಂಡು ಮನೆಯಿಂದ ಹೊರಗಡೆ ಓಡಿಬಂದು ರಕ್ಷಣೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

4 ರಿಂದ 5 ಸೆಕೆಂಡ್ ಭೂಮಿ ಕಂಪನ
ತಡರಾತ್ರಿ 1.30ರ ಸುಮಾರಿಗೆ 4 ರಿಂದ 5 ಸೆಕೆಂಡ್ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಹರಿಕೃಷ್ಣ ನಗರ, ಮಹಾವೀರ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿನ ಪಾತ್ರೆಗಳು, ಬೀರು, ಮಂಚ ಎಲ್ಲಾ ವಸ್ತುಗಳು ಶೇಕ್ ಆಗಿದ್ದು, ರಾತ್ರೋ ರಾತ್ರಿ ಭಯದಿಂದ ಜನರು ಹೊರಗೆ ಓಡಿದ್ದಾರೆ.

ಮನೆಯ ಕಿಡಕಿ, ಬಾಗಿಲು ಸೇರಿದಂತೆ ಹಲವು ವಸ್ತುಗಳು ಗಡಗಡ ನಡುಗಿರುವ ಅನುಭವವಾಗಿದೆ. ರಾತ್ರಿ ಮಹಾರಾಷ್ಟ್ರದ
ಹಿಂಗೋಲಿಯಲ್ಲೂ ಭೂಕಂಪ ಆಗಿದೆ. 3.6 ಮ್ಯಾಗ್ನಿಟ್ಯೂಡ್ ನ ಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದೆ. ರಾತ್ರಿ ಮೂರು ಬಾರಿಯಾಗಿದೆ. 1.41, 249 ಮತ್ತು 4.1 ರಷ್ಟು ತೀವ್ರತೆಯ ಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆಯ ಮೂಲಗಳು
ತಿಳಿಸಿವೆ.

Leave a Reply

Your email address will not be published. Required fields are marked *