ಕಿರುತೆರೆಗೆ ಎಂಟ್ರಿ ಕೊಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್

ಸುದ್ದಿ ಸಂಗ್ರಹ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಯರ ಜೀವನದ ಪವಿತ್ರ ಪಯಣವನ್ನು ಭಕ್ತರು ಕಣ್ತುಂಬಿ ಕೊಳ್ಳುತ್ತಿದ್ದಾರೆ. ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಸುತ್ತಿರುವ ಈ ಕಥಾಹಂದರಕ್ಕೆ ಮನೆಮನೆಯಿಂದಲೂ ಉತ್ತಮ ಮೆಚ್ಚುಗೆ ಸಿಕ್ಕಿದೆ. ಕಳೆದ ವಾರದ ಕಥೆಯಲ್ಲಿ ಪೂರ್ವಾಶ್ರಮದ ಹೆಂಡತಿ ಸರಸ್ವತಿಗೆ ಸದ್ಗತಿ ಕೊಟ್ಟ ಸಂಚಿಕೆ ಮನದುಂಬಿ ಬಂತು. ಪ್ರೇಕ್ಷಕರನ್ನು ಅಲುಗಾಡದಂತೆ ಸರೆ ಹಿಡಿಯಿತು. ರಾಯರ ಪಾತ್ರದಲ್ಲಿ ಪರಿಕ್ಷೀತ್ ರ ನಟನೆ ರಾಯರನ್ನೇ ನೋಡಿದಷ್ಟು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ರಾಯರು ದೀಕ್ಷೆ ಪಡೆದ ನಂತರ ಮೂಲರಾಮನ ಆಜ್ಞೆಯಂತೆ ದಿವ್ಯ ಸಂಚಾರಕ್ಕೆ ಹೊರಟರು. ಭುವನಗಿರಿಯಲ್ಲಿ ಪಾದ ಪೂಜೆ ಮುಗಿಸಿಕೊಂಡು ಹೊರಟು ಕಟಗಿರಯ ಹತ್ತಿರ ವನ ಭೋಜನಕ್ಕೆ ಕುಳಿತಾಗ ಅಲ್ಲಿಗೆ ಕರಟಗಿರಿಯ ದೇಸಾಯಿ ಅವರು ಬಂದು ತಮ್ಮ ಮನೆಯ ಪೂಜೆಗೆ ರಾಯರನ್ನು ಅಹ್ವಾನಿಸುತ್ತಾರೆ. ಅವರ ಒತ್ತಾಯಕ್ಕೆ ಮಣಿದು ಮನೆಗೆ ಬರುತ್ತಾರೆ ರಾಯರು. ರಾಯರ ಆಗಮನವನ್ನು ವಿಜೃಂಭಣೆಯಿಂದ ಆಚರಿಸಲು ದೇಸಾಯಿ ಅವರು ಭಕ್ಷಭೋಜನಗಳನ್ನು ತಯಾರಿಸಲು ಹೇಳುತ್ತಾರೆ. ಅದರಂತೆ ಮನೆಯಲ್ಲಿ ಸಕಲವು ಸಿದ್ದತೆ ನಡೆಯುತ್ತದೆ. ಅಡುಗೆ ಮನೆಯಲ್ಲಿ ತಯರಾದ ಮಾವಿನಕಾಯಿ ಸಿಕರಣೆ ರುಚಿ ಸವಿಯಲು ಹೋಗಿ ದೇಸಾಯಿ ಅವರ ಮಗ ಅದರೊಳಗೆ ಬಿದ್ದು ಪ್ರಾಣ ಬಿಡುತ್ತಾನೆ.

ಪೂಜೆಯಲ್ಲಿ ನಿರತರಾಗಿದ್ದ ರಾಘವೇಂದ್ರ ತೀರ್ಥಂಕರಿಗೆ ಇದರ ಅರಿವಾಗುತ್ತದೆ. ಸತ್ತ ಮಗುವನ್ನ ಪೂಜಾ ಸ್ಥಳಕ್ಕೆ ತರಿಸಿ ತಮ್ಮ ಮಂತ್ರ ಪ್ರೋಕ್ಷಣೆಯಿಂದ ಮಗುವನ್ನು ಬದುಕಿಸುತ್ತಾರೆ. ಪವಾಡವು ಭಕ್ತರನ್ನು ವಿಸ್ಮಯ ಗೊಳಿಸಿದೆ. ಈ ವಾರಾಂತ್ಯ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಈ ಭಕ್ತಿಯ ಕಥೆಯಲ್ಲಿ ದೇಸಾಯಿ ಪಾತ್ರದಲ್ಲಿ ಹಿರಿಯ ನಟರಾದ B.C ಪಾಟೀಲ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಕಿರುತೆರೆಯಲ್ಲಿ ಬಿ.ಸಿ ಪಾಟೀಲ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪತ್ನಿಯಾಗಿ ಅರುಣಾ ಬಾಲರಾಜ್ ಕೂಡ ಇದ್ದಾರೆ. ಈ ಭಕ್ತಿ ಪ್ರಧಾನ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಹಾಗೂ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ.

Leave a Reply

Your email address will not be published. Required fields are marked *