ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಉಗಾಂಡದಿಂದ ಬೆಂಗಳೂರಿಗೆ ಆಗಮಿಸಿದ ಮಹಿಳೆಯಲ್ಲಿ ಎಬೋಲಾ ರೋಗ ಲಕ್ಷಣಗಳು ಕಂಡುಬಂದಿದ್ದು, ರಾಜೀವ್ ಗಾಂಧಿ ಆಸ್ಪತ್ರೆಗೆ ಮಹಿಳೆಯನ್ನು ಶಿಫ್ಟ್ ಮಾಡಲಾಗಿದೆ.
ಉಗಾಂಡದಿಂದ ಅಹಮದಾಬಾದ್‌ಗೆ ಆಗಮಿಸಿದ್ದ ಮಹಿಳೆ, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಸ್ಕ್ರೀನಿಂಗ್ ಮಾಡಿದಾಗ ಎಬೋಲಾ ರೋಗ ಲಕ್ಷಣಗಳು ಕಂಡುಬಂದಿವೆ. ಸದ್ಯಕ್ಕೆ ಮಹಿಳೆಯನ್ನು 21 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸದ್ಯ ಮಹಿಳೆಯ ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್‌ಗೆ ರವಾನಿಸಲಾಗಿದೆ. ಟೆಸ್ಟ್‌ಗೆ ಕಳಿಸಿರುವ ಸ್ಯಾಂಪಲ್ ರಿಪೋರ್ಟ್ ಇನ್ನಷ್ಟೆ ಬರಬೇಕಿದೆ.
ಒಂದು ವೇಳೆ ಸ್ಯಾಂಪಲ್ ರಿಪೋರ್ಟ್ ಪಾಸಿಟಿವ್ ಬಂದರೆ ದೇಶದಲ್ಲೆ ಮೊದಲ ಕೇಸ್ ಕರ್ನಾಟಕದ ಪಾಲಾಗಲಿದೆ ಎಂದು ಮಾಧ್ಯಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.