ವಿಶ್ವದಲ್ಲೆ ಅತ್ಯಂತ ಬಿಸಿ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ಬಂಡಾ: 75 ವರ್ಷಗಳ ದಾಖಲೆ ಬ್ರೇಕ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಲಕ್ನೋ
ಉತ್ತರ ಪ್ರದೇಶದ ಬುಂದೇಲ್‌ಖಂಡ ಪ್ರದೇಶದ ಬಂಡಾ ನಗರ ವಿಶ್ವದಲ್ಲೆ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಇತ್ತೀಚೆಗಷ್ಟೆ ಬಂಡಾ ನಗರದಲ್ಲಿ ಬರೋಬ್ಬರಿ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೆ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಬಂಡಾ ನಗರದಲ್ಲಿ ಗರಿಷ್ಠ ಮಟ್ಟದ ತಾಪಮಾನ ದಾಖಲಾಗಿರುವುದು ಇದೆ ಮೊದಲಲ್ಲ. ಆದರೆ ಈ ಬಾರಿಯ ತಾಪಮಾನ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದಕ್ಕೂ ಮುನ್ನ ಏ.27ರಂದು 47.6ರಷ್ಟು ಉಷ್ಣಾಂಶ ದಾಖಲಾಗಿತ್ತು.

1951ರಲ್ಲಿ 47.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಷ ದಾಖಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ 75 ವರ್ಷಗಳ ದಾಖಲೆ ಮುರಿದಿದೆ.

ತಾಪಮಾನದ ತೀವ್ರತೆಯಿಂದಾಗಿ ಮಧ್ಯಾಹ್ನದ ವೇಳೆಗೆ ಅಂಗಡಿ-ಮುಂಗಟ್ಟುಗಳು, ವ್ಯಾಪಾರ ಸಂಸ್ಥೆಗಳು ಸಂಪೂರ್ಣವಾಗಿ ಬಂದ್ ಆಗುತ್ತಿದ್ದು, ಅಘೋಷಿತ ಕರ್ಫ್ಯೂ ಮಾದರಿಯ ವಾತಾವರಣ ನಗರದಲ್ಲಿ ನಿರ್ಮಾಣವಾಗುತ್ತಿದೆ.

Leave a Reply

Your email address will not be published. Required fields are marked *